More

    ತಂದೆಯ ಕೊಲೆಗೆ ಮಗನ ಸುಪಾರಿ ; ಮೂವರ ಬಂಧನ

    ಗೌರಿಬಿದನೂರು : ತಾಲೂಕಿನ ಜೋಡಿಬಿಸಲಹಳ್ಳಿಯಲ್ಲಿ ಜೂ.14ರಂದು ನಡೆದಿದ್ದ ಕೊಲೆ ಪ್ರಕರಣ ತಿರುವು ಪಡೆದುಕೊಂಡಿದ್ದು, ಜಮೀನಿಗಾಗಿ ಮಗನೇ ತಂದೆಯ ಕೊಲೆಗೆ ಸುಪಾರಿ ಕೊಟ್ಟು ಹತ್ಯೆ ಮಾಡಿಸಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಎಂದಿನಂತೆ ಜೂ.14ರಂದು ರಾತ್ರಿ ಊಟ ಮಾಡಿ ತೋಟಕ್ಕೆ ತೆರಳಿದ್ದ ಶ್ರೀನಿವಾಸಮೂರ್ತಿ(59) ಬೆಳಗ್ಗೆ ಸಾಕಷ್ಟು ಸಮಯವಾದರೂ ಮನೆಗೆ ಬಾರದಿದ್ದಾಗ ತೋಟದ ಬಳಿ ತೆರಳಿ ನೋಡಿದಾಗ ರಕ್ತದ ಮಡುವಿನಲ್ಲಿ ಶವ ಪತ್ತೆಯಾಗಿರುವುದಾಗಿ ಮೃತನ ಕಿರಿಯ ಪುತ್ರ ಸುನಿಲ್ ಕುಮಾರ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ತನಿಖೆ ಆರಂಭಿಸಿದ ಪೊಲೀಸರು ಶ್ರಾವಂಡಹಳ್ಳಿಯ ರಂಗನಾಥ್ ಹಾಗೂ ಜೋಡಿಬಿಸಳಹಳ್ಳಿಯ ರವಿಕುಮಾರ್ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಶ್ರೀನಿವಾಸಮೂರ್ತಿಯ ಹಿರಿಯ ಪುತ್ರ ರೋಹಿತ್ ತಂದೆಯ ಕೊಲೆಗೆ ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ. 1 ಲಕ್ಷ ರೂ. ಸುಪಾರಿ ನೀಡಿದ್ದು, 30 ಸಾವಿರ ರೂ. ಮುಂಗಡ ಪಾವತಿಸಿದ್ದ ಎಂದು ಆರೋಪಿಗಳು ಬಾಯ್ಬಿಟ್ಟಿದ್ದರಿಂದ ರೋಹಿತ್‌ನ್ನು ಪೊಲೀಸರು ಬಂಧಿಸಿದ್ದಾರೆ.

    ರೋಹಿತ್ ಸ್ವಗ್ರಾಮದಲ್ಲಿ ಗ್ಯಾಸ್ ಏಜೆನ್ಸಿ ನಡೆಸುತ್ತಿದ್ದು, 52 ಲಕ್ಷ ಮೌಲ್ಯದ ಸಿಲಿಂಡರ್‌ಗಳನ್ನು ದುರ್ಬಳಕೆ ಮಾಡಿಕೊಂಡಿದ್ದರಿಂದ ಗ್ಯಾಸ್ ಕಂಪನಿಯವರು ಹಣ ಪಾವತಿಸುವಂತೆ ಒತ್ತಡ ಹೇರುತ್ತಿದ್ದರು. ಆದರೆ ರೋಹಿತ್‌ಗೆ ಹಣ ಪಾವತಿಸಲು ಸಾಧ್ಯವಾಗಿರಲಿಲ್ಲ, ತಂದೆಯನ್ನು ಸಾಯಿಸಿ ಜಮೀನು ತನ್ನದಾಗಿಸಿಕೊಂಡರೆ ಭೂಮಿ ಮಾರಾಟ ಮಾಡಿ ಕಂಪನಿಯ ಬಾಕಿ ಪಾವತಿಸುವ ತೀರ್ಮಾನ ತೆಗೆದುಕೊಂಡು ತಂದೆಯ ಕೊಲೆಗೆ ಸುಪಾರಿ ನೀಡಿದ್ದ ಎಂಬುದು ವಿಚಾರಣೆ ವೇಳೆ ಬಯಲಾಗಿದೆ.

    ವೃತ್ತ ನಿರೀಕ್ಷಕ ಎಸ್.ಡಿ.ಶಶಿಧರ್ ನೇತೃತ್ವದ ತಂಡ ಪ್ರಕರಣವನ್ನು ಬೇಧಿಸಿ ಮೂವರು ಆರೋಪಿಗಳನ್ನು ಬಂಧಿಸಿ, ಕೊಲೆಗೆ ಬಳಸಿದ ದ್ವಿಚಕ್ರ ವಾಹನ, ಮಾರಕಾಸಗಳನ್ನು ವಶಕ್ಕೆ ಪಡೆದಿದ್ದಾರೆ. ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ನಗದು ಬಹುಮಾನ ಘೋಷಿಸಿದ್ದಾರೆ.

    ಎರಡು ಬಾರಿ ವಿಲ ಯತ್ನ : ಜೂ.14ಕ್ಕೂ ಮುನ್ನ ಶ್ರೀನಿವಾಸಮೂರ್ತಿಯನ್ನು ಸಾಯಿಸಲು ವಿಲ ಯತ್ನಗಳು ನಡೆದಿದ್ದವು ಎನ್ನಲಾಗಿದೆ. ವಿಷ ಉಣಿಸಿ ಸಾಯಿಸುವ ಸಂಚು ನಡೆಸಲಾಗಿತ್ತು. ಆದರೆ ಸಾಧ್ಯವಾಗದೆ ಕೊನೆಗೆ ಶ್ರೀನಿವಾಸಮೂರ್ತಿ ನಿತ್ಯ ರಾತ್ರಿ ರೇಷ್ಮೆ ತೋಟದ ಬಳಿಗೆ ತೆರಳುವ ವಿಷಯ ತಿಳಿದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts