More

    ಅಕ್ರಮ ಸಂಬಂಧಕ್ಕೆ ಕೊಲೆ, ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು ಐವರು ಆರೋಪಿಗಳ ಬಂಧನ

    ನೆಲಮಂಗಲ: ಮೇಲ್ನೋಟಕ್ಕೆ ಸ್ನೇಹಿತರಿಬ್ಬರ ನಡುವೆ ಜಗಳ ಬಿಡಿಸಲು ಹೋಗಿ ಹತ್ಯೆ ನಡೆದಿದೆ ಎಂದು ಕಂಡುಬಂದಿದ್ದ ಪ್ರಕರಣ ಪೊಲೀಸ್ ತನಿಖೆ ವೇಳೆ ಇದೊಂದು ಅಕ್ರಮ ಸಂಬಂಧದ ಕಾರಣ ಪೂರ್ವ ನಿಯೋಜಿತ ಕೊಲೆ ಎಂಬುದು ಬೆಳಕಿಗೆ ಬಂದಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ.

    ವಾಜರಹಳ್ಳಿ ನಿವಾಸಿ ಮೂಲತಃ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಹೋಬಳಿ ಮುದ್ದನಹಳ್ಳಿಯ ಎಂ.ಸಿ.ಹರೀಶ್ (34), ಕನಕಪುರ ತಾಲೂಕಿನ ಸಾತನೂರು ಹೋಬಳಿಯ ಕಂಚನಹಳ್ಳಿ ನಿವಾಸಿ ಮಲ್ಲೇಶ್(24), ಬೆಂಗಳೂರು ಚಿಕ್ಕಬಿದರಕಲ್ಲು ವಾಸಿ, ಮೂಲತಃ ಚಿಕ್ಕಮಗಳೂರು ಜಿಲ್ಲೆ ಅಂಬಳೆ ಗ್ರಾಮದ ಸಿದ್ದು (22), ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಕ್ಯಾಶವಾರದ ನಿವಾಸಿ ಪ್ರದೀಪ (24), ಅನಂತಪುರ ಜಿಲ್ಲೆ ಕಲ್ಯಾಣದುರ್ಗ ತಾಲೂಕಿನ ಗರಡುಪುರದ ನಿವಾಸಿ ಸೋಮ (45) ಬಂಧಿತರು.

    ಅಕ್ರಮ ಸಂಬಂಧದಿಂದ ಕೊಲೆ: ಮೈಲನಹಳ್ಳಿಯ ಖಾಸಗಿ ವಸತಿ ಬಡಾವಣೆಯಲ್ಲಿ ಸೆ.18ರಂದು ಕೊರಟಗೆರೆ ತಾಲೂಕು ಕ್ಯಾಶವಾರ ಗ್ರಾಮದ ಸತೀಶ್ (26) ಎಂಬಾತನ ಹತ್ಯೆ ನಡೆದಿತ್ತು. ಆರೋಪಿ ಸಿದ್ದು ಪತ್ನಿ ಜತೆ ಹತ್ಯೆಯಾದ ಸತೀಶ್ ಅನ್ಯೋನ್ಯವಾಗಿದ್ದ ಎನ್ನಲಾಗಿದ್ದು, ಸತೀಶನನ್ನು ಮುಗಿಸಲು ಸಂಚುರೂಪಸಿದ್ದ ಸಿದ್ದು, ಆರೋಪಿ ಪ್ರದೀಪನ ಮೂಲಕ ಸತೀಶನನ್ನು ಮದ್ಯದ ಪಾರ್ಟಿಗೆ ಕರೆಸಿಕೊಂಡಿದ್ದ. ಈ ವೇಳೆ ಆರೋಪಿಗಳು ಮದ್ಯದ ಬಾಟಲಿಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ಈ ಬಗ್ಗೆ ಆರೋಪಿ ಸಿದ್ದು ಪತ್ನಿ ಗೀತಾಳನ್ನು ಪೊಲೀಸರು ವಿಚಾರಣೆ ನಡೆಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ನೆಟ್‌ವರ್ಕ್ ಸುಳಿವು ಆಧರಿಸಿ ಸೆ.23ರಂದು ರಾಯಚೂರು ಹಾಗೂ ದಾಬಸ್‌ಪೇಟೆ ಬಳಿ ಬಂಧಿಸಲಾಗಿದೆ.

    ಸುಳ್ಳು ಪ್ರಕರಣ ದಾಖಲಿಸಿದ್ದ: ಸೆ.18 ರಾತ್ರಿ ನಡೆದ ಗಲಾಟೆಯಲ್ಲಿ ಗಾಯಗೊಂಡಿದ್ದ ಸತೀಶ್‌ಗೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಹಾಸಿಗೆ ಲಭ್ಯವಿಲ್ಲದ ಕಾರಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಆರೋಪಿ ಪ್ರದೀಪ್ ಗ್ರಾಮಾಂತರ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದ ಎನ್ನಲಾಗಿದೆ.

    ನಗದು ಬಹುಮಾನ: ಎಸ್‌ಪಿ ರವಿ ಡಿ.ಚನ್ನಣ್ಣನವರ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಗಣೇಶ್ ಹಾಗೂ ಡಿವೈಎಸ್‌ಪಿ ಮೋಹನ್‌ಕುಮಾರ್ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಶಿವಣ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಗ್ರಾಮಾಂತರ ಠಾಣೆ ಎಸ್‌ಐ ವಸಂತ್, ಸಿಬ್ಬಂದಿ ಎಚ್.ಸಿ.ಶ್ರೀನಿವಾಸ್, ಬಾಲಾಜಿಸಿಂಗ್, ಸಿ.ಕುಮಾರ್, ಶಿವಶಂಕರ್, ಫೈರೋಜ್, ಮೋಹನ್ ಒಳಗೊಂಡಂತೆ ಅರೋಪಿಗಳನ್ನು ಪತ್ತೆ ಹಚ್ಚಿರುವ ವಿಶೇಷ ತಂಡಕ್ಕೆ ನಗದು ಬಹುಮಾನ ನೀಡಿ ಶ್ಲಾಘಿಸಲಾಯಿತು.

    ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಎಸ್.ಆರ್.ವೀರೇಂದ್ರಪ್ರಸಾದ್, ಎಸ್‌ಐ ವಿ.ಅಂಜನ್‌ಕುಮಾರ್, ಗ್ರಾಮಾಂತರ ಠಾಣೆ ಎಸ್‌ಐ ವಸಂತ್, ನಗರಠಾಣೆ ಎಸ್‌ಐ ಎನ್.ಸುರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts