More

    ಪುತ್ರನನ್ನು ಕೊಲೆಗೈದು ತಂದೆ ಆತ್ಮಹತ್ಯೆ

    ಕಾರ್ಕಳ: ಅಜೆಕಾರು ಠಾಣಾ ವ್ಯಾಪ್ತಿಯ ಕೇರ್ವಾಶೆ ಗ್ರಾಮದ ಶೆಟ್ಟಿಬೆಟ್ಟು ಎಂಬಲ್ಲಿ ಅಂಗವಿಕಲ ಪುತ್ರನಿಗೆ ವಿಷ ಕುಡಿಸಿ ತಂದೆ ನೇಣುಬಿಗಿದು ಆತ್ಮಹತ್ಯೆ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
    ಕೃಷ್ಣ ಪೂಜಾರಿ(56) ಎಂಬುವರು ಪುತ್ರ ದೀಪೇಶ್(26) ಎಂಬುವರಿಗೆ ಮೈಲುತುತ್ತು ಕುಡಿಸಿ ಮನೆ ಎದುರಿನ ಬಾವಿಗೆ ಹಾಕಿ ಕೊಲೆ ಮಾಡಿದ್ದು, ಬಳಿಕ ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಅಂಗವಿಕಲರಾಗಿದ್ದ ದೀಪೇಶ್ ಅವರ ಆರೈಕೆಯನ್ನು ಕೃಷ್ಣ ಪೂಜಾರಿ ಹಾಗೂ ಅವರ ಪತ್ನಿ ನೋಡಿಕೊಳ್ಳುತ್ತಿದ್ದರು. ಈ ನಡುವೆ ಪತ್ನಿ ಪಾರ್ಶ್ವವಾಯುವಿಗೆ ತುತ್ತಾಗಿ ಮುಂಬೈಯಲ್ಲಿ ಸಂಬಂಧಿಕರ ಮನೆಯಲ್ಲಿ ಇದ್ದರು. ಈ ಎಲ್ಲ ಬೆಳವಣಿಗೆಯಿಂದ ನೊಂದು ಕೃಷ್ಣ ಪೂಜಾರಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಅಜೆಕಾರು ಠಾಣೆಯಲ್ಲಿ ಕೇಸು ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts