More

    ಮುನಿರತ್ನ ಧರಣಿ; ಬಿಎಸ್ ವೈ ಮನವೊಲಿಕೆ

    ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಕಡಿತಗೊಳಿಸಿದರೆಂದು ಸಿಟ್ಟಿಗೆದ್ದ ಶಾಸಕ ಮುನಿರತ್ನ ಬುಧವಾರ ವಿಧಾನಸೌಧ ಆವರಣ ಗಾಂಧಿ ಪ್ರತಿಮೆ ಧರಣಿ ನಡೆಸಿದ ಪ್ರಸಂಗ ನಡೆಯಿತು.

    ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಪವಾಸ ಸತ್ಯಾಗ್ರಹ ನಡೆಸುವದಾಗಿ ಮುನಿರತ್ನ ನಿರ್ಧರಿಸಿದ್ದರು, ಈ‌ ನಡುವೆ ಮಧ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ, ಸಿದ್ದರಾಮಯ್ಯರ ಜತೆ ಮಾತನಾಡುತ್ತೇನೆ ಎಂದು ಹೇಳಿದ ಬಳಿಕ ಸತ್ಯಾಗ್ರಹ ಕೈಬಿಟ್ಟರು.

    ಅಮೃತ ನಗರೋತ್ಥಾನ ಯೋಜನೆಯಡಿ ಆರ್ ಆರ್ ನಗರಕ್ಕೆ ಅನುಮೋದನೆಯಾಗಿದ್ದ 126 ಕೋಟಿ ರೂ. ಅನುದಾನಕ್ಕೆ ತಡೆ ನೀಡಲಾಗಿದೆ. ಈ ಅನುದಾನ ಪುನಃ ವಾಪಸ್ ನೀಡುವಂತೆ ಆಗ್ರಹಿಸಿ ಮುನಿರತ್ನ ಪ್ರತಿಭಟನೆ ಕೈಗೊಂಡಿದ್ದರು.

    ಮುನಿರತ್ನ ಜತೆ ಬಿಬಿಎಂಪಿ ಮಾಜಿ ಮೇಯರ್ ನಾರಾಯಣಸ್ವಾಮಿ, ಪಾಲಿಕೆ ಸದಸ್ಯ ಜಿ.ಕೆ. ವೆಂಕಟೇಶ್ ಧರಣಿಯಲ್ಲಿ ಭಾಗಿಯಾಗಿದ್ದರು. ಅವರೆಲ್ಲರನ್ನೂ ಪೊಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿದರು.

    ಮುನಿರತ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, 2 ಗಂಟೆಯವರೆಗೆ ನಾನು ಉಪವಾಸ ಸತ್ಯಾಗ್ರಹ ಮಾಡಬೇಕಿತ್ತು. ಯಡಿಯೂರಪ್ಪ ಅವರು ನನ್ನ ಜತೆಗೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಉಪವಾಸ ಸತ್ಯಾಗ್ರಹ ಇಲ್ಲಿಗೆ ಕೈ ಬಿಡುತ್ತೇನೆ ಎಂದರು.

    ಈ ವೇಳೆ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿ ಅನುದಾನ ರದ್ದು ಮಾಡಿ ಸೇಡಿನ ರಾಜಕಾರಣ ಮಾಡಿದ್ದಾರೆ. ಈ ರೀತಿ ಮಾಡಬಾರದೆಂದು ಸರ್ಕಾರದ ಜತೆ ಮಾತನಾಡುತ್ತೇನೆ. ಒಬ್ಬರೇ ಧರಣಿ ಮಾಡುವುದು ಬೇಡ, ಮುನಿರತ್ನ ಜತೆ ನಾವೆಲ್ಲ ಇದ್ದೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts