More

    ಪುರಸಭೆ ಸಿಬ್ಬಂದಿ ಸೇವೆ ಅನನ್ಯ- ಲಯನ್ಸ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಡಾ.ಶಿವಶರಣಪ್ಪ ಇತ್ಲಿ ಬಣ್ಣನೆ

    ಮಸ್ಕಿ: ಪಟ್ಟಣದ ಸೌಂಧರ್ಯ ಮತ್ತು ಸ್ವಚ್ಚತೆ ಕಾಪಾಡುವಲ್ಲಿ ಪುರಸಭೆ ಸಿಬ್ಬಂದಿಯ ಪಾತ್ರ ಪ್ರಮುಖವಾಗಿದ್ದು, ಅದರಲ್ಲೂ ಕರೊನಾ ತಡೆಗಟ್ಟುವಲ್ಲಿ ಸಿಬ್ಬಂದಿ ಸೇನಾನಿಗಳಂತೆ ಹಗಲು ರಾತ್ರಿ ಸೇವೆ ಮಾಡುತ್ತಿದ್ದಾರೆ ಎಂದು ಲಯನ್ಸ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಹಿರಿಯ ವೈದ್ಯ ಡಾ.ಶಿವಶರಣಪ್ಪ ಇತ್ಲಿ ಹೇಳಿದರು.

    ಪಟ್ಟಣದ ಪುರಸಭೆ ಹಳೇ ಕಟ್ಟಡದಲ್ಲಿ ಗುರುವಾರ ಪುರಸಭೆ ಸಿಬ್ಬಂದಿಗೆ ಲಯನ್ಸ್ ಕ್ಲಬ್ ವತಿಯಿಂದ ಬೆಳಗಿನ ಉಪಾಹಾರ ಕೂಟ ಹಾಗೂ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

    ಡಾ.ಬಿ.ಎಚ್.ದಿವಟರ್ ಮಾತನಾಡಿ, ಪುರಸಭೆ ಸಿಬ್ಬಂದಿ ತಮ್ಮ ಆರೋಗ್ಯದ ಕಡೆ ಗಮನ ಕೊಡಬೇಕು. ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಸಿಬ್ಬಂದಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರನ್ನು ಸಮಾಜ ಒಳ್ಳೆಯ ರೀತಿಯಲ್ಲಿ ಕಾಣಬೇಕು ಎಂದರು.

    ಸುಮಾರು 60ಕ್ಕೂ ಹೆಚ್ಚು ಜನರಿಗೆ ಉಪಾಹಾರ ಜತೆ ಸನ್ಮಾನ ಮಾಡಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಉಮಾಕಾಂತಪ್ಪ ಸಂಗನಾಳ, ಕಾರ್ಯದರ್ಶಿ ದಂತ ವೈದ್ಯ ಮಲ್ಲಿಕಾರ್ಜುನ, ಕೋಶಾಧ್ಯಕ್ಷ ಬಸವಲಿಂಗಶಟ್ಟಿ, ಪುರಸಭೆ ಸದಸ್ಯ ಎಂ.ಅಮರೇಶ, ಲಕ್ಷ್ಮೀನಾರಯಣಶಟ್ಟಿ, ಚಂದಯ್ಯ ಶಟ್ಟಿ, ಬಸಪ್ಪ ಬ್ಯಾಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts