More

    ಚಿತ್ರದುರ್ಗ ನಗರಸಭೆ ಗದ್ದುಗೆ ಕಮಲ ಪಡೆ ವಶಕ್ಕೆ

    ಚಿತ್ರದುರ್ಗ: ನಗರಸಭೆ ಅಧ್ಯಕ್ಷರಾಗಿ ತಿಪ್ಪಮ್ಮ ವೆಂಕಟೇಶ್ ಹಾಗೂ ಉಪಾಧ್ಯಕ್ಷೆಯಾಗಿ ಶ್ವೇತಾ ವೀರೇಶ್ ಅವಿರೋಧ ಆಯ್ಕೆಯಾಗಿದ್ದು, ಈ ಮೂಲಕ ನಗರಸಭೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ.

    ಅಧ್ಯಕ್ಷ ಸ್ಥಾನಕ್ಕೆ ಎಸ್‌ಟಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗೆ ಮೀಸಲಿತ್ತು. ಜಿಪಂ ಮಿನಿ ಸಭಾಂಗಣದಲ್ಲಿ ಭಾನುವಾರ ಜರುಗಿದ ಆಯ್ಕೆ ಪ್ರಕ್ರಿಯೆ ವೇಳೆ ಬಿಜೆಪಿಗೆ ಸಾಥ್ ನೀಡಿದ್ದ ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಕೆಲ ಸದಸ್ಯರು ಹಾಜರಿದ್ದರು.

    ಬೆಳಗ್ಗೆ 10 ಗಂಟೆಗೆ ತಿಪ್ಪಮ್ಮ, ಶ್ವೇತಾ ನಾಮಪತ್ರ ಸಲ್ಲಿಸಿದ್ದು, ಪ್ರತಿಸ್ಪರ್ಧಿಗಳಾಗಿ ಯಾರೂ ನಾಮಪತ್ರ ಸಲ್ಲಿಸದಿದ್ದರಿಂದಾಗಿ ಚುನಾವಣಾಧಿಕಾರಿ, ಎಸಿ ವಿ.ಪ್ರಸನ್ನ ಅವಿರೋಧ ಆಯ್ಕೆ ಪ್ರಕಟಿಸಿದರು. ಬಿಜೆಪಿ ಕಾರ್ಯಕರ್ತರು, ಮುಖಂಡರು ಸಂಭ್ರಮಿಸಿದರು.

    ಲಾಟರಿ ಮೂಲಕ ಉಪಾಧ್ಯಕ್ಷರ ಆಯ್ಕೆ: ಬಿಸಿಎಂ ಎ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಅಧಿಕವಾಗಿದ್ದರಿಂದ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿತ್ತು. ಶಾಸಕ ತಿಪ್ಪಾರೆಡ್ಡಿ ಅವರ ಹತ್ತಿಮಿಲ್‌ನಲ್ಲಿ ಬೆಳಗ್ಗೆ ನಡೆದ ಚರ್ಚೆ ವೇಳೆ ಅಂತಿಮವಾಗಿ ಅನುರಾಧಾ, ಶ್ವೇತಾ, ಶ್ರೀದೇವಿ ಅವರ ಪೈಕಿ ಒಬ್ಬರ ಹೆಸರನ್ನು ಲಾಟರಿ ಮೂಲಕ ಆಯ್ಕೆ ಮಾಡಬೇಕೆಂಬ ಸಲಹೆ ಕೇಳಿ ಬಂತು. ಇದಕ್ಕೆ ಸಹಮತ ವ್ಯಕ್ತವಾಗಿದ್ದರಿಂದಾಗಿ ಅದೃಷ್ಟ ಪರೀಕ್ಷೆಯಲ್ಲಿ ಉಪಾಧ್ಯಕ್ಷ ಗದ್ದುಗೆ ಶ್ವೇತಾ ಅವರಿಗೆ ಒಲಿಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts