More

    ನರಗುಂದದಲ್ಲಿ ಅತಿಕ್ರಮಣ ಜಾಗ ತೆರವುಗೊಳಿಸಿದ ಪುರಸಭೆ ಅಧಿಕಾರಿಗಳು

    ನರಗುಂದ: ಪಟ್ಟಣದ ಗಾಂಧಿ ವರ್ತಲದ ರಸ್ತೆ, ಚರಂಡಿಗಳ ಜಾಗ ಅತಿಕ್ರಮಣ ಮಾಡಿಕೊಂಡಿದ್ದ 30ಕ್ಕೂ ಹೆಚ್ಚು ಅಂಗಡಿಗಳ ಗೋಡೆ, ಪರಸಿ ಕಲ್ಲು, ಮೆಟ್ಟಿಲುಗಳನ್ನು ಪುರಸಭೆ ಅಧಿಕಾರಿಗಳು ಬುಧವಾರ ಜೆಸಿಬಿಯಿಂದ ತೆರವುಗೊಳಿಸಿದರು.

    ವರ್ತಕರು ಸಾರ್ವಜನಿಕ ಜಾಗ ಒತ್ತುವರಿ ಮಾಡಿಕೊಂಡಿದ್ದರಿಂದ ಜೆಸಿಬಿ ಕಾರ್ಯಾಚರಣೆಗೆ ತರಕಾರು ಎತ್ತಲಿಲ್ಲ. ಬಹುತೇಕ ಅಂಗಡಿಗಳ ಮಾಲೀಕರು ಚರಂಡಿಗಳ ಮೇಲಿನ ಜಾಗ ಅತಿಕ್ರಮಣ ಮಾಡಿಕೊಂಡಿದ್ದರು. ಇದರಿಂದ ಪ್ರತಿ ವರ್ಷದ ಮಳೆಗಾಲದ ಸಂದರ್ಭದಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಅಂತರ್ಜಲ ಹೆಚ್ಚಾಗಿ ಭೂ ಕುಸಿತಕ್ಕೆ ಕಾರಣವಾಗಿತ್ತು. ಹೀಗಾಗಿ, ಪುರಸಭೆ ಅಧಿಕಾರಿಗಳು ಅತಿಕ್ರಮಣ ತೆರವಿಗೆ ಮುಂದಾಗಿದ್ದಾರೆ. ಕೆಲವು ವ್ಯಾಪಾರಸ್ಥರು ‘ನಾವು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಂಗಡಿಗಳ ಮುಂದೆ ಕಟ್ಟೆ ಕಟ್ಟಿಕೊಂಡಿದ್ದೇವೆ. ಆದರೀಗ ಪುರಸಭೆ ಅಧಿಕಾರಿಗಳು ಸಂಪೂರ್ಣ ತೆರವುಗೊಳಿಸುತ್ತಿದ್ದಾರೆ. ಲಾಕ್​ಡೌನ್ ಸಂಕಷ್ಟದಲ್ಲಿರುವ ನಮ್ಮ ಅಂಗಡಿ ಮುಂಭಾಗವನ್ನು ದುರಸ್ತಿ ಮಾಡಿಕೊಳ್ಳಲು ಮತ್ತೆ ಸಾವಿರಾರು ರೂಪಾಯಿ ಖರ್ಚಾಗಲಿದೆ. ಈ ಹಣವನ್ನು ಪುರಸಭೆಯಿಂದಲೇ ವ್ಯಾಪಾರಸ್ಥರಿಗೆ ನೀಡಬೇಕು’ ಎಂದು ಆಗ್ರಹಿಸಿದರು.

    ನರಗುಂದದ ಬಹುತೇಕ ಕಡೆಗಳಲ್ಲಿ ರಸ್ತೆ, ಚರಂಡಿಗಳ ಜಾಗ ಅತಿಕ್ರಮಣ ಮಾಡಿಕೊಳ್ಳಲಾಗಿದೆ. ಇದರಿಂದ ಮಳೆಗಾಲದಲ್ಲಿ ಚರಂಡಿ ನೀರು ಸರಾಗವಾಗಿ ಹರಿದು ಹೋಗುತ್ತಿರಲಿಲ್ಲ. ಹೀಗಾಗಿ, ಭೂಕುಸಿತಗಳು ಹೆಚ್ಚಾಗಿವೆ. 26 ಲಕ್ಷ ರೂಪಾಯಿ ಅನುದಾನದಲ್ಲಿ ಗಾಂಧಿ ವರ್ತಲದಲ್ಲಿನ ಚರಂಡಿ ನಿರ್ವಿುಸಲಾಗುತ್ತಿದೆ. ಹೀಗಾಗಿ, ತೆರವು ಕಾರ್ಯಾಚರಣೆ ಅನಿವಾರ್ಯ.

    | ಸಂಗಮೇಶ ಬ್ಯಾಳಿ, ನರಗುಂದ ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts