More

    ಮೂರು ಮನೆಗಳ ಗೋಡೆ ಕುಸಿತ

    ಮುಂಡಗೋಡ: ತಾಲೂಕಿನಾದ್ಯಂತ ಶುಕ್ರವಾರ ಸುರಿದ ಧಾರಾಕಾರ ಮಳೆಗೆ ಮೂರು ಮನೆಗಳ ಗೋಡೆಗಳು ಕುಸಿದಿರುವ ವರದಿಯಾಗಿದೆ. ಕಳೆದ ನಾಲ್ಕೈದು ದಿನಗಳಿಂದ ತಾಲೂಕಿನಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವ ಪರಿಣಾಮ ಶುಕ್ರವಾರ ರಾತ್ರಿ ತಾಲೂಕಿನ ಪಾಳಾ ಗ್ರಾಮದ ಮಾದೇವ ರಾಮಣ್ಣ ದೊತ್ರೆ, ಇಂದೂರಕೊಪ್ಪ ಗ್ರಾಮದ ಅಶೋಕ ಕಲ್ಲಪ್ಪ ಸುಣಗಾರ, ಮುಂಡಗೋಡ ಪಟ್ಟಣದ ಕಿಲ್ಲೆ ಓಣಿಯ ಅಬ್ದುಲ್ ರಜಾಕ್ ದರ್ಗಾವಾಲೆ ಎಂಬುವರ ಮನೆಯ ಗೋಡೆಗಳು ಕುಸಿದಿವೆ. ವಿಷಯ ತಿಳಿಯುತ್ತಿದ್ದಂತೆ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಪಂಚನಾಮೆ ಮಾಡಿದ್ದಾರೆ. ತಾಲೂಕಿನಲ್ಲಿ ಶುಕ್ರವಾರ 44.2 ಮಿಮಿ ಮಳೆಯಾಗಿದ್ದು, ಈವರೆಗೆ ಒಟ್ಟು 457.2 ಮೀಮಿ. ಮಳೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts