More

    ಬಿಎಂಸಿಯ ಮಾಸ್ಕ್​ ಕಲೆಕ್ಷನ್​ 30 ಕೋಟಿ ರೂಪಾಯಿ! ಒಂದೇ ದಿನದಲ್ಲಿ 46 ಲಕ್ಷ ರೂ. ಕಲೆಕ್ಷನ್​!

    ಮುಂಬೈ: ಮಹಾರಾಷ್ಟ್ರದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಮತ್ತೊಮ್ಮೆ ಏರಿಕೆ ಕಾಣಲಾರಂಭಿಸಿದೆ. ಮಾಸ್ಕ್​ ಹಾಕದವರಿಗೆ ದಂಡ ವಿಧಿಸುವ ಕೆಲಸ ಭರದಿಂದ ಸಾಗಲಾರಂಭಿಸಿದೆ. ಈವರೆಗೆ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಮಾಸ್ಕ್​ ಹಾಕದವರಿಂದ ಸಂಗ್ರಹಿಸಿದ ದಂಡದ ಮೊತ್ತ ಕೇಳಿದರೇ ನೀವು ಗಾಬರಿಯಾಗಿಬಿಡುತ್ತೀರಿ.

    ಫೆಬ್ರವರಿ 23 ಒಂದೇ ದಿನದಲ್ಲಿ ಬಿಎಂಸಿ ಮಾಸ್ಕ್​ ಹಾಕದ 22,976 ಜನರಿಗೆ ದಂಡ ವಿಧಿಸಿದೆ. ಇದರಿಂದ ಸುಮಾರು 45.95 ಲಕ್ಷ ರೂಪಾಯಿ ಕಲೆಕ್ಷನ್​ ಆಗಿದೆ. ಕಳೆದ ವರ್ಚದ ಮಾರ್ಚ್​ ಇಂದ ಇಂದಿನವರೆಗೆ ಬಿಎಂಸಿ ಕಲೆಕ್ಟ್​ ಮಾಡಿರುವ ಮಾಸ್ಕ್​ ದಂಡವೇ 30 ಕೋಟಿ ರೂಪಾಯಿಗೂ ಹೆಚ್ಚಾಗಿದೆ.

    ಕರೊನಾದ ದೊಡ್ಡ ಅಲೆಯೊಂದನ್ನು ಕಂಡು ಸ್ವಲ್ಪ ಚೇತರಿಸಿಕೊಂಡಿದ್ದ ಮಹಾರಾಷ್ಟ್ರದಲ್ಲಿ ಕರೊನಾ ಮತ್ತೊಮ್ಮೆ ತನ್ನ ದಾಳಿಯನ್ನು ಆರಂಭಿಸಿದೆ. ಪ್ರತಿನಿತ್ಯ ಸಾವಿರಾರು ಜನರಲ್ಲಿ ಸೋಂಕು ಕಾಣಿಸಿಕೊಳ್ಳಲಾರಂಭಿಸಿದ್ದು, ಸೋಂಕು ತಡೆಗೆ ರಾಜ್ಯ ಸರ್ಕಾರ ಅನೇಕ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾರಂಭಿಸಿದೆ. ಮಾಸ್ಕ್​ ಹಾಕದವರಿಗೆ 200 ರೂಪಾಯಿ ದಂಡ ವಿಧಿಸುವುದಾಗಿ ಆದೇಶ ಹೊರಡಿಸಲಾಗಿದೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಪ್ರಧಾನಿ ಮೋದಿ ಕ್ಷೇತ್ರದಲ್ಲಿ ಅಚ್ಚರಿಯ ಘಟನೆ! ಎರಡು ತಲೆಯ ಕರುವಿಗೆ ಜನ್ಮವಿತ್ತ ಎಮ್ಮೆ

    ಅತ್ತೆ ಮಾವನ ಜವಾಬ್ದಾರಿ ಅಳಿಯನಿಗೂ ಸೇರಿದ್ದು; ಅಳಿಯನಿಂದಲೂ ಜೀವನಾಂಶ ಪಡೆಯಬಹುದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts