More

    ಲೋಕಲ್​ ಟ್ರೈನ್​​​ನಲ್ಲಿ ರೆಸ್ಟೋರೆಂಟ್​; ಮುಂಬೈ ಯುವಕರ ಹೊಸ ಪ್ರಯತ್ನಕ್ಕೆ ಜನಮನ್ನಣೆ..!

    ಮುಂಬೈಯಲ್ಲಿ ವಾಸಿಸುವ ಜನರಿಗೆ ಲೋಕಲ್ ಟ್ರೈನ್ ಎಂಬುದು ಪ್ರಮುಖವಾದ ಸಾರಿಗೆ ವ್ಯವಸ್ಥೆಯಾಗಿದೆ ಮತ್ತು ಗಂಟೆಗಳ ಹೊತ್ತು ರಸ್ತೆಯಲ್ಲಿರುವ ಟ್ರಾಫಿಕ್ ಅನ್ನು ತಪ್ಪಿಸಿಕೊಂಡು ಆರಾಮಾಗಿ ಮನೆ ತಲುಪುವ ಸಾರಿಗೆ ವ್ಯವಸ್ಥೆಯಾಗಿದೆ.


    ಸಾವಿರಾರು ಜನರು ಪ್ರತಿದಿನ ಬೆಳಗ್ಗೆ ತಮ್ಮ ಕೆಲಸಕ್ಕೆ ಹೋಗಲು ಮತ್ತು ಸಂಜೆ ಹೊತ್ತಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬರಲು ಈ ಟ್ರೈನ್‌ಗಳನ್ನು ಬಳಸುತ್ತಾರೆ. ಒಟ್ಟಿನಲ್ಲಿ ಮುಂಬೈ ಲೋಕಲ್​​ ಟ್ರೈನ್​​ ಜನಸಾಮಾನ್ಯರ ದಿನನಿತ್ಯದ ಓಡಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.


    ಮುಂಬೈ ಜನರು ತಮ್ಮ ಅರ್ಧ ಕೆಲಸಗಳನ್ನು ಈ ಟ್ರೈನ್ ನಲ್ಲಿಯೇ ಪ್ರಯಾಣಿಸುತ್ತಾ ಮಾಡಿಕೊಳ್ಳುತ್ತಾರೆ. ಆದ್ರೆ ಇದೀಗ ಯುವಕರ ಗುಂಪೋಂದು ಲೋಕಲ್​​ ಟ್ರೈನ್​​ನಲ್ಲಿ ರೆಸ್ಟೋರೆಂಟ್​​ ಪ್ರಾರಂಭಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್​​ ಆಗುತ್ತಿದೆ.


    ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ, ಆರ್ಯನ್ ಕಟಾರಿಯಾ ಮತ್ತು ಸಾರ್ಥಕ್ ಸಚ್‌ದೇವ ಅವರು ಮುಂಬೈ ಸ್ಥಳೀಯರೊಂದಿಗೆ ತಮ್ಮ ಹೊಸ ಪ್ರಯತ್ನದ ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ.


    ತಾವು ಹೊಸ ರೆಸ್ಟೋರೆಂಟ್​​ ಪ್ರಾರಂಭಿಸುವ ಸಲುವಾಗಿ, ಉಇವರೆಲ್ಲರೂ ಇನ್ವಿಟೇಷನ್ ಪ್ರಿಂಟ್​​ ಮಾಡಿಸಿ ಅದನ್ನ ಹಂಚಿತ್ತಿರುವುದು ವಿಡಿಯೋದಲ್ಲಿ ಕಾಣಬಹುದು.


    ವೀಡಿಯೋವು ಸಂಪರ್ಕ ಮಾಹಿತಿ, ದಿನಾಂಕ, ಸಮಯ ಮತ್ತು “ಟೇಸ್ಟಿ ಟಿಕೆಟ್” ನ “ಗ್ರ್ಯಾಂಡ್ ಓಪನಿಂಗ್” ಸ್ಥಳದೊಂದಿಗೆ ಸಂದೇಶವನ್ನು ತೋರಿಸುತ್ತದೆ, ಇದು ಎಲ್ಲಾ ಗ್ರಾಹಕರಿಗೆ ಉಚಿತ ಊಟವನ್ನು ನೀಡುತ್ತದೆ. ಸದ್ಯ ಯುವಕರ ಗುಂಪು ರೆಸ್ಟೋರೆಂಟ್​​ ಸಿಬ್ಬಂದಿಯಂತೆಯೇ ಕಂಗೊಳಿಸಿದ್ದಾರೆ.
    ಜತೆಗೆ ಟ್ರೈನ್​​​ನಲ್ಲಿದ್ದ ಅಪರಿಚಿತರು ಕೂಡಾ ಒಟ್ಟಿಗೇ ಕುಳಿತುಕೊಂಡು ಊಟ ಮಾಡೋದನ್ನ ಕಾಣಬಹುದು. ಸದ್ಯ ಈ ವಿಡಿಯೋಗೆ ಜನರು ನಾನಾ ಕಾಮೆಂಟ್​​ಗಳನ್ನೂ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts