More

    ಮುಂಬೈಗೆ ತಪ್ಪಿದ ಹ್ಯಾಟ್ರಿಕ್ ಪ್ರಶಸ್ತಿ ಕನಸು; ಸನ್‌ರೈಸರ್ಸ್‌ ಎದುರು ಗೆದ್ದರೂ ಹೊರಬಿದ್ದ ಹಾಲಿ ಚಾಂಪಿಯನ್ಸ್

    ಅಬುಧಾಬಿ: ಹ್ಯಾಟ್ರಿಕ್ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಕನಸು ಭಗ್ನಗೊಂಡಿತು. ಪ್ಲೇಆಫ್ ಹಂತಕ್ಕೇರಲು 171 ರನ್ ಪ್ಲಸ್ ಅಂತರದಿಂದ ಗೆಲ್ಲಬೇಕಾದ ಸವಾಲು ಹೊಂದಿದ್ದ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್-14ರ ತನ್ನ ಕಡೇ ಹಣಾಹಣಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು 42 ರನ್‌ಗಳಿಂದ ಸೋಲಿಸಿತು. ಜಯ ಸಾಧಿಸಿ ಅಂಕ ಗಳಿಕೆಯಲ್ಲಿ ಕೆಕೆಆರ್ ಜತೆ ಸಮಬಲ ಸಾಧಿಸಿದರೂ ರನ್‌ರೇಟ್ ಲೆಕ್ಕಾಚಾರದಲ್ಲಿ ಮುಂಬೈ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. 2018ರಲ್ಲಿ ಕಡೇ ಬಾರಿಗೆ ಮುಂಬೈ ಪ್ಲೇಆಫ್ ಪ್ರವೇಶಿಸಲು ವಿಫಲವಾಗಿತ್ತು. ಬಳಿಕ 2019, 2020ರಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಗೆದ್ದುಕೊಂಡಿತ್ತು. 4ನೇ ತಂಡವಾಗಿ ಕೆಕೆಆರ್ ಪ್ಲೇಆಫ್ ಪ್ರವೇಶ ಖಚಿತಗೊಂಡಿತು.

    ಶೇಖ್ ಜಯೇದ್ ಸ್ಟೇಡಿಯನಲ್ಲಿ ಶುಕ್ರವಾರ ನಡೆದ ಹಣಾಹಣಿಯಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ, ಆರಂಭಿಕ ಹಂತದಲ್ಲಿ ಇಶಾನ್ ಕಿಶನ್ (84 ರನ್, 32 ಎಸೆತ, 11 ಬೌಂಡರಿ, 4 ಸಿಕ್ಸರ್) ಹಾಗೂ ಸ್ಲಾಗ್ ಓವರ್‌ಗಳಲ್ಲಿ ಸೂರ್ಯಕುಮಾರ್ ಯಾದವ್ (82ರನ್, 40 ಎಸೆತ, 13 ಬೌಂಡರಿ, 3 ಸಿಕ್ಸರ್) ತೋರಿದ ಸ್ಫೋಟಕ ಬ್ಯಾಟಿಂಗ್ 9 ವಿಕೆಟ್‌ಗೆ 235 ರನ್ ಕಲೆಹಾಕಿತು. ಬಳಿಕ ಸನ್‌ರೈಸರ್ಸ್‌ ತಂಡವನ್ನು 65 ರನ್ ಒಳಗೆ ಕಟ್ಟಿಹಾಕಿದರಷ್ಟೇ ಮುಂಬೈ ಪ್ಲೇಆ್ ಹಂತಕ್ಕೇರುವ ಅವಕಾಶ ಹೊಂದಿತ್ತು. ಹಂಗಾಮಿ ನಾಯಕ ಮನೀಷ್ ಪಾಂಡೆ (69*ರನ್, 41ಎಸೆತ, 7 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನಡುವೆಯೂ ಸನ್‌ರೈಸರ್ಸ್‌ ತಂಡ 8 ವಿಕೆಟ್‌ಗೆ 193 ರನ್‌ಗಳಿಸಲಷ್ಟೇ ಶಕ್ತವಾಯಿತು.

    ಮುಂಬೈ ಇಂಡಿಯನ್ಸ್: 9 ವಿಕೆಟ್‌ಗೆ 235 (ಇಶಾನ್ ಕಿಶನ್ 84, ಸೂರ್ಯಕುಮಾರ್ 82, ಜೇಸನ್ ಹೋಲ್ಡರ್ 52ಕ್ಕೆ 4, ರಶೀದ್ ಖಾನ್ 40ಕ್ಕೆ 2, ಅಭಿಷೇಕ್ ಶರ್ಮ 4ಕ್ಕೆ 2), ಸನ್‌ರೈಸರ್ಸ್‌ ಹೈದರಾಬಾದ್: 8 ವಿಕೆಟ್‌ಗೆ 193 (ಮನೀಷ್ ಪಾಂಡೆ 69*, ಜೇಸನ್ ರಾಯ್ 34, ಅಭಿಷೇಕ್ ಶರ್ಮ 33, ಜಸ್‌ಪ್ರೀತ್ ಬುಮ್ರಾ 39ಕ್ಕೆ 2, ನಾಥನ್ ಕೌಲ್ಟರ್ ನಿಲ್ 40ಕ್ಕೆ 2, ಜೇಮ್ಸ್ ನೀಶಾಮ್ 28ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts