More

    ಮುಂಬೈ ದಾಳಿ ಪಾತಕಿ ಸಹಚರರು ಪಾಕ್​ನಲ್ಲಿ

    ನವದೆಹಲಿ: 2008ರ ನವೆಂಬರ್ 26ರಂದು ಮುಂಬೈ ಮೇಲೆ ದಾಳಿ ಮಾಡಿದ್ದ ಭಯೋತ್ಪಾದಕರಿಗೆ ನೆರವಾಗಿದ್ದ 11 ಭಯೋತ್ಪಾದಕರು ತನ್ನ ದೇಶದಲ್ಲಿ ಇದ್ದಾರೆ ಎಂದು ಪಾಕಿಸ್ತಾನ ಒಪ್ಪಿಕೊಂಡಿದೆ. ಪಾಕಿಸ್ತಾನ ಜಗತ್ತಿನ ಭಯೋತ್ಪಾದನೆಯ ಕೇಂದ್ರ ತಾಣ. ಭಾರತದಲ್ಲಿ ಉಗ್ರಗಾಮಿ ಚಟುವಟಿಕೆ ನಡೆಸಲು ಅದು ಕುಮ್ಮಕ್ಕು ನೀಡುತ್ತಿದೆ ಎಂಬ ಭಾರತದ ಸತತ ವಾದಕ್ಕೆ ಇದರಿಂದ ಪುಷ್ಟಿ ಸಿಕ್ಕಿದೆ. ಪಾಕಿಸ್ತಾನದ ಅತ್ಯುನ್ನತ ತನಿಖಾ ಸಂಸ್ಥೆಯಾದ ಫೆಡರಲ್ ತನಿಖಾ ಸಂಸ್ಥೆಯ (ಎಫ್​ಐಎ) ವರದಿಯೊಂದು ಈ ಸಂಗತಿಯನ್ನು ದಾಖಲಿಸಿದೆ.

    ಮುಂಬೈ ದಾಳಿ

    2008 ನವೆಂಬರ್ 26ರಂದು ಮುಂಬೈಯ ತಾಜ್ ಹೋಟೆಲ್, ಛತ್ರಪತಿ ಶಿವಾಜಿ ಟರ್ವಿುನಸ್ ಮೊದಲಾದ ಕಡೆ ಪಾಕ್​ನಿಂದ ಬಂದ 10 ಭಯೋತ್ಪಾದಕರು ನಡೆಸಿದ ಭಾರಿ ಗುಂಡಿನ ದಾಳಿಯಲ್ಲಿ ಕೆಲವು ವಿದೇಶಿಯರ ಸಹಿತ ಸುಮಾರು 166 ಜನರು ಮೃತಪಟ್ಟಿದ್ದರು.

    880 ಪುಟಗಳಷ್ಟು ದೀರ್ಘವಾದ ವರದಿಯಲ್ಲಿ, ಮುಂಬೈ ದಾಳಿಯಲ್ಲಿ ಬಳಸಿದ ಅಲ್ ಫೌಜ್ ದೋಣಿ ಖರೀದಿಸಿದ್ದ ಮುಲ್ತಾನ್​ನ ಮಹಮದ್ ಅಮ್ಜದ್ ಖಾನ್ ಹೆಸರು ದಾಖಲಾಗಿದೆ. ಆತ ಯಮಹಾ ಮೋಟರ್ ಬೋಟ್ ಎಂಜಿನ್, ಜೀವರಕ್ಷಕ ಜಾಕೆಟ್​ಗಳು, ಚಪ್ಪಟೆ ಮಾಡಬಹುದಾದ ದೋಣಿಗಳನ್ನು ಕೂಡ ಖರೀದಿಸಿದ್ದ. ಅವುಗಳನ್ನು ಭಾರತದ ಆರ್ಥಿಕ ರಾಜಧಾನಿ ಮುಂಬೈ ಮೇಲಿನ ದಾಳಿಯಲ್ಲಿ ಬಳಸಲಾಗಿತ್ತು. ಭಾವಲ್ಪುರದ ಶಾಹಿದ್ ಗಫೂರ್ ಎಂಬಾತ ಅಲ್ ಫೌಜ್​ನ ಕ್ಯಾಪ್ಟನ್ ಆಗಿದ್ದ ಎಂದು ಎಫ್​ಐಎ ವರದಿ ತಿಳಿಸಿದೆ. ಮುಂಬೈ ದಾಳಿಯಲ್ಲಿ ಬಳಸಿದ್ದ ಬೋಟ್​ಗಳ 9 ಸಿಬ್ಬಂದಿಯನ್ನೂ ಅದು ಹೆಸರಿಸಿದೆ

    ಎಫ್​ಐಎ ಪಟ್ಟಯಲ್ಲಿ ನಮೂದಿಸದ ಹಫೀಜ್ ಸಯೀದ್, ವಿಶ್ವಸಂಸ್ಥೆ ಪಟ್ಟಿ ಮಾಡಿರುವ ಭಯೋತ್ಪಾದಕರಲ್ಲಿ ಒಬ್ಬ. ಆತ ಮುಂಬೈ ದಾಳಿಯ ಸೂತ್ರಧಾರ. ಮಸೂದ್ ಅಜರ್ ಜೈಷ್ ಎ ಮೊಹಮದ್​ನ ಮುಖ್ಯಸ್ಥನಾಗಿದ್ದು 2019ರ ಪುಲ್ವಾಮಾ ದಾಳಿಯ ನಂತರ ಆತನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಲಾಗಿದೆ. ದಾವೂದ್ ಇಬ್ರಾಹಿಂ ತನ್ನ ದೇಶದಲ್ಲಿಲ್ಲ ಎಂದು ಪಾಕಿಸ್ತಾನ ಹೇಳುತ್ತಿದ್ದರೂ ಭೂಗತ ಪಾತಕಿಯು ಕರಾಚಿಯಲ್ಲಿರುವುದು ಗುಟ್ಟೇನೂ ಅಲ್ಲ. ದಾವೂದ್ ಕೂಡ ವಿಶ್ವಸಂಸ್ಥೆ ಪಟ್ಟಿಯಲ್ಲಿರುವ ಭಯೋತ್ಪಾದಕ.

    ವಿದೇಶಿ ದೇಣಿಗೆ ನಿಯಮ ಬಿಗಿ: ಪರಿಷ್ಕೃತ ನಿಬಂಧನೆ ಪಾಲಿಸಬೇಕು ಎನ್​ಜಿಒಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts