More

    ಮೂಡುಬಿದಿರೆಯಿಂದ ಮೂಲ್ಕಿವರೆಗೆ 100 ಮೀಟರ್ ಉದ್ದದ ತಿರಂಗ ಯಾತ್ರೆ

    ಕಿನ್ನಿಗೋಳಿ: ಸ್ವಾತಂತ್ರೃ ಅಮೃತ ಮಹೋತ್ಸವದಂಗವಾಗಿ ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, 100 ಮೀಟರ್ ಉದ್ದದ ರಾಷ್ಟ್ರಧ್ವಜದ ಮೆರವಣಿಗೆ ನಡೆಯಲಿದೆ.

    ಬಾವುಟವನ್ನು ಸೂರತ್‌ನಲ್ಲಿ ತಯಾರಿಸಲಾಗಿದ್ದು, 100 ಮೀಟರ್ ಉದ್ದ 9.3 ಅಡಿ ಅಗಲವಿದೆ. ನಿರ್ಮಾಣಕ್ಕೆ ಸುಮಾರು 25,000 ರೂಪಾಯಿ ವೆಚ್ಚವಾಗಿದೆ.
    ಆಗಸ್ಟ್ 14ರಂದು ಬೆಳಗ್ಗೆ 8 ಗಂಟೆಗೆ ಕಾರ್ನಾಡು ಸದಾಶಿವ ರಾವ್ ಹುಟ್ಟೂರು ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಿಂದ ಹೊರಟು, ರಾಣಿ ಅಬ್ಬಕ್ಕನ ಹುಟ್ಟೂರು ಮೂಡುಬಿದಿರೆವರೆಗೆ ಪಾದಯಾತ್ರೆ ಸಾಗಲಿದೆ. ಸಾವಿರಾರು ಮಂದಿ ದೇಶ ಭಕ್ತರು ಪಾದಯಾತ್ರೆಯಲ್ಲಿ ಧ್ವಜ ಹಿಡಿದು ಪಾಲ್ಗೊಳ್ಳಲಿದ್ದಾರೆ.

    ಮೆರವಣಿಗೆಯಲ್ಲಿ ಭಾರತಮಾತೆ, ಕಾರ್ನಾಡು ಸದಾಶಿವರಾಯರು, ವೀರರಾಣಿ ಅಬಕ್ಕ ಅವರ ಭಾವಚಿತ್ರ ರಾರಾಜಿಸಲಿದೆ. ದೇಶ ಭಕ್ತಿಗೀತೆ ಹಾಡುವ ತಂಡಗಳು, ಟ್ಯಾಬ್ಲೋ, ಚೆಂಡೆ, ಡೋಲು ಮತ್ತಿತರ ತಂಡಗಳು ಯಾತ್ರೆಗೆ ಮೆರಗು ನೀಡಲಿವೆ. ದಾರಿಯುದ್ದಕ್ಕೂ ಅಲ್ಲಲ್ಲಿ ದೇಶಭಕ್ತ ನಾಗರಿಕರಿಗೆ ಪುಷ್ಪಾರ್ಚನೆಗೈಯುವ ಅವಕಾಶ ಕಲಿಸಲಾಗಿದೆ.

    ಸುಮಾರು 27 ಕಿ.ಮೀ. ನಡೆಯುವ ಈ ಪಾದಯಾತ್ರೆಗೆ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಸಾಥ್ ನೀಡಲಿದ್ದು, ದಾರಿಯುದ್ದಕ್ಕೂ ಸಾರ್ವನಿಕರು ಅಲ್ಲಲ್ಲಿ ಪಾನೀಯ, ಉಪಹಾರದ ವ್ಯವಸ್ಥೆ ಮಾಡಿದ್ದಾರೆ. ಯಾತ್ರೆಯ ಯಶಸ್ಸಿಗೆ ತಿರಂಗ ಯಾತ್ರೆ ಅಭಿಯಾನ ಸಮಿತಿ ರಚಿಸಲಾಗಿದೆ.

    ಬೃಹತ್ ಬಾವುಟ ಸೂರತ್‌ನಲ್ಲಿ ತಯಾರಾಗುತ್ತಿದೆ. ಬಾವುಟ 100 ಮೀಟರ್ ಉದ್ದ 9.3 ಅಡಿ ಅಗಲವಿದ್ದು ರಾಜ್ಯದಲ್ಲೇ ಇಷ್ಟೊಂದು ಉದ್ದದ ಬಾವುಟ ಇದೇ ಮೊದಲ ಬಾರಿಗೆ ಬಳಕೆಯಾಗಲಿದೆ. ಈ ಬಾವುಟದ ತಯಾರಿಕೆಗೆ ಸುಮಾರು 25 ಸಾವಿರ ರೂಪಾಯಿ ವೆಚ್ಚವಾಗಲಿದೆ.
    – ಅಭಿಲಾಷ್ ಶೆಟ್ಟಿ ಕಟೀಲು, ಸಂಚಾಲಕರು ತಿರಂಗ ಯಾತ್ರೆ ಅಭಿಯಾನ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts