More

    ಆಮ್‌ ಆದ್ಮಿ ಪಾರ್ಟಿ ಕಾಂಗ್ರೆಸ್‌ ಜತೆ ಪ್ರಚಾರಕ್ಕೆ ಬರತ್ತಾ..? ಆಪ್‌ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಉತ್ತರ ಇಲ್ಲಿದೆ

    ಕಾರವಾರ: ಬಿಜೆಪಿಯನ್ನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋಲಿಸದೇ ಇದ್ದರೆ ಸರ್ವಾಽಕಾರಿ ಆಡಳಿತ ಬರುವ ಅಪಾಯವಿದೆ. ಅದನ್ನು ತಪ್ಪಿಸಲು ಇಂಡಿಯಾ ಅಲಯನ್ಸ್ ಸೇರಿದ್ದೇವೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
    ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ನಮ್ಮ ಸಿದ್ಧಾಂತಕ್ಕೂ ಭಿನ್ನಾಭಿಪ್ರಾಯವಿದೆ. ದೆಹಲಿ, ರಾಜಸ್ತಾನಗಳಲ್ಲಿ ಆಮ್ ಆದ್ಮಿ ಪಾರ್ಟಿ ಜಾರಿಗೆ ತಂದ ಯೋಜನೆಗಳನ್ನು ಕಾಂಗ್ರೆಸ್ ಕರ್ನಾಟಕದಲ್ಲಿ ನಕಲು ಮಾಡಿದೆ. ಇಷ್ಟು ವರ್ಷ ಅಽಕಾರದಲ್ಲಿದ್ದರೂ ಕಾಂಗ್ರೆಸ್‌ನವರಿಗೆ ಹೊಳೆಯದ ಯೋಜನೆಗಳು ಅರವಿಂದ ಕೇಜ್ರಿವಾಲ್ ಅವರಿಗೆ ಬಂದಿದ್ದು, ಅದನ್ನು ಜಾರಿ ಮಾಡಿ ಯಶಸ್ವಿಯೂ ಆಗಿದ್ದಾರೆ ಎಂದರು.
    ಇದೆಲ್ಲದರ ಹೊರತಾಗಿಯೂ ಪ್ರಜಾಪ್ರಭುತ್ವ ಉಳಿವಿಗಾಗಿ, ಬಿಜೆಪಿಯನ್ನು ಎದುರಿಸುವ ಸಲುವಾಗಿ ಮಾತ್ರ, ಲೋಕಸಭೆ ಚುನಾವಣೆಗೆ ಸೀಮಿತವಾಗಿ ನಾವು ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಇಂದಿಯಾ ಅಲಯನ್ಸ್ ನಮ್ಮ ಪಕ್ಷಕ್ಕೆ ರಾಜ್ಯದಲ್ಲಿ ಯಾವುದೇ ಸೀಟು ನೀಡಿಲ್ಲ. ಅಲಯನ್ಸ್ ಒಪ್ಪಂದದAತೆ ನಾವು ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತಿಲ್ಲ. ಅಷ್ಟೇ ಅಲ್ಲ, ನಾವಾಗಿಯೇ ಪ್ರಚಾರಕ್ಕೂ ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್‌ನವರು ಕರೆದರೆ ಮಾತ್ರ ನಾವು ನಮ್ಮ ಧ್ವಜದ ಜತೆಗೇ ಪ್ರಚಾರಕ್ಕೆ ಹೋಗುವಂತೆ ನಮ್ಮೆಲ್ಲ ಪದಾಽಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
    ಸಂವಿಧಾನ ಬದಲಿಸುವ ಮಾತುಗಳನ್ನಾಡಿದ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಮೇಲೆ ಬಿಜೆಪಿ ಕ್ರಮ ಕೈಗೊಂಡಿಲ್ಲ. ಅಂಬೇಡ್ಕರ ಬರೆದ ಸಂವಿಧಾನದ ಬದಲು ಆರ್‌ಎಸ್‌ಎಸ್ ಸಂವಿಧಾನ ಜಾರಿಗೆ ತರುವುದು ಬಿಜೆಪಿ ಯೋಚನೆಯಾಗಿದೆ ಎಂದರು.
    ಉತ್ತರ ಕನ್ನಡದಲ್ಲಿ ಬಹುಕಾಲದಿಂದ ಇರುವ ಅರಣ್ಯ ಅತಿಕ್ರಮಣ ಸಮಸ್ಯೆ ಬಗೆಹರಿಯಬೇಕು. ಈಗಾಗಲೇ ಅತಿಕ್ರಮಣ ಮಾಡಿದವರಿಗೆ ಭೂಮಿ ಮಂಜೂರು ಮಾಡಬೇಕು. ಹೊಸ ಅತಿಕ್ರಮಣಕ್ಕೆ ಅವಕಾಶ ನೀಡಬಾರದು. ಹೊನ್ನಾವರ ಕಾಸರಕೋಡಿನಲ್ಲಿ ಖಾಸಗಿ ಬಂದರಿನ ವಿಚಾರವಾಗಿ ಸ್ಥಳೀಯರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
    ಪಕ್ಷದ ಜಿಲ್ಲಾಧ್ಯಕ್ಷ ಬಾಲಕೃಷ್ಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಲಿಯೋ ಲೂಯಿಸ್, ಪಕ್ಷದ ಜಿಲ್ಲಾ ಉಸ್ತುವಾರಿ ಅನಂತಕುಮಾರ ಬುಗುಡಿ, ಗಣಪತಿ ಭಟ್ ಸುದ್ದಿಗೋಷ್ಠಿಯಲ್ಲಿದ್ದರು.

    ಇದನ್ನೂ ಓದಿ: ಪ್ರಜಾಪ್ರಭುತ್ವ ಉಳಿವಿಗೆ ಬಿಜೆಪಿ ಸೋಲು ಅನಿವಾರ್ಯ: ಮುಖ್ಯಮಂತ್ರಿ ಚಂದ್ರು

    ವಿಡಿಯೋ ನೋಡಲು ಈ ಲಿಂಕ್‌ ಒತ್ತಿ: https://youtu.be/zr37vtwOFBI?si=g0Gw0ppjKpbnVpiQ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts