More

    ದೇವಾಲಯಗಳ ಪ್ರಗತಿ ಕುರಿತ ವರದಿ ಕೋರಿದ್ದ ಆದೇಶ ರದ್ದು

    ಬೆಂಗಳೂರು: ದೇವಾಲಯಗಳ ಅಭಿವೃದ್ಧಿ ಅಥವಾ ಜೀರ್ಣೋದ್ಧಾರಕ್ಕಾಗಿ 2022-23ನೇ ಸಾಲಿನಲ್ಲಿ ಸರಕಾರದಿಂದ ಮಂಜೂರಾಗಿರುವ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿಯ ಕುರಿತು ವರದಿ ಸಲ್ಲಿಸಲು ಕೋರಲಾಗಿದ್ದ ಆದೇಶವನ್ನು ರಾಜ್ಯ ಮುಜರಾಯಿ ಇಲಾಖೆ ಹಿಂಪಡೆದಿದೆ. ಮುಂದಿನ ಆದೇಶದವರೆಗೂ ಅನುಷ್ಠಾನಗೊಳಿಸದಿರಲು ಸೂಚಿಸಲಾಗಿದೆ.

    ದೇವಾಲಯಗಳ ಜೀರ್ಣೋದ್ಧಾರ ಕುರಿತಂತೆ ಹಿಂದಿನ ಸರಕಾರ ನೂರಾರು ಕೋಟಿ ರೂ.ಗಳ ಆದೇಶ ಮಾಡಿದ್ದು, ಬಹುತೇಕ ದೇವಾಲಯಗಳಿಗೆ ಹಣ ಬಿಡುಗಡೆಯಾಗಿರಲಿಲ್ಲ. ಈ ಸಂಬಂಧ ಆ. 14ರಂದು ಇಲಾಖೆ ಮಟ್ಟದಲ್ಲಿ ನಡೆದ ಸಭೆಯಲ್ಲಿ ಸರಕಾರದ ಅನುದಾನದಲ್ಲಿ ಯಾವ ದೇವಸ್ಥಾನಗಳಲ್ಲಿ ಎಷ್ಟೆಷ್ಟು ಕೆಲಸಗಳಾಗಿವೆ ಎಂಬ ಬಗ್ಗೆ ಆ. 30 ರೊಳಗೆ ವರದಿ ಪಡೆಯುವ ಕುರಿತು ಚರ್ಚಿಸಿ, ಆದೇಶಿಸಲಾಗಿತ್ತು.

    ಸಭೆಯಲ್ಲಿ ಕಾಮಗಾರಿಯ ಪ್ರಗತಿ ಕುರಿತು ವರದಿ ಪಡೆಯುವ ಬಗ್ಗೆ ಚರ್ಚೆಯಾಗಿತ್ತೇ ವಿನಃ ದೇವಾಲಯಗಳಿಗೆ ಅನುದಾನ ಕೊಡುವ ಹಾಗೂ ತಡೆಹಿಡಿಯುವ ಕುರಿತು ಯಾವುದೇ ಚರ್ಚೆಯಾಗಿರಲಿಲ್ಲ. ಆದರೆ ಈ ಬಗ್ಗೆ ತಪ್ಪು ಸಂದೇಶ ರವನೆಯಾಗಿ, ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಕಾಮಗಾರಿಗಳ ಪ್ರಗತಿಯ ವರದಿ ಪಡೆಯುವ ಆದೇಶವನ್ನು ಹಿಂಪಡೆಯಲಾಗಿದೆ ಎಂದು ರಾಜ್ಯ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

    ದೇವಾಲಯಗಳಿಗೆ ಅಗತ್ಯ ನೆರವು: ದೇವಾಲಯಗಳ ಅಭಿವೃದ್ಧಿ ಕೆಲಸಗಳಿಗೆ ಎಂದು ಅಡ್ಡಿಪಡಿಸುವುದಿಲ್ಲ. ಬದಲಿಗೆ ದೇವಾಲಯದ ಅಭಿವೃದ್ದಿ ಕೆಲಸಗಳಿಗೆ ಅಗತ್ಯ ಬಿದ್ದರೆ ಸರಕಾರ ಇನ್ನೂ ಹೆಚ್ಚಿನ ಹಣ ನೀಡಲು ಸಿದ್ಧವಿದೆ. ಇದರಲ್ಲಿ ಯಾವುದೇ ರಾಜಿಯಿಲ್ಲ ಎಂದು ಹೇಳಿದ್ದಾರೆ.

    ಜಿಲ್ಲಾಡಳಿತಕ್ಕೆ ಒಳಪಡುವ ಇಲಾಖೆಗೆ ಸೇರಿದ ದೇವಾಲಯಗಳ ಅಭಿವೃದ್ಧಿ ಕಾಮಗಾರಿಗೆ ಮಂಜೂರಾಗಿರುವ ಅನುದಾನದಿಂದ ಕೈಗೊಂಡಿರುವ ಕಾಮಗಾರಿಗಳ ಕುರಿತು ಮುಂದಿನ ನಿರ್ದೇಶನದವರೆಗೆ ಅನುದಾನ ಬಿಡುಗಡೆಗೆ ನಿರ್ಬಂಧ ಹೇರಿ ಆದೇಶಿಸ ಹೊರಡಿಸಲಾಗಿತ್ತು.ಇದೀಗ ಅದೇಶ ಹಿಂಪಡೆಯಲಾಗಿದೆ ಎಂದಿ ಇಲಾಖೆ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts