More

    ಮುಹೂರ್ತ ಟ್ರೇಡಿಂಗ್​ನಲ್ಲಿ ಸಾರ್ವಕಾಲಿಕ ಎತ್ತರಕ್ಕೇರಿದ ಸೆನ್ಸೆಕ್ಸ್, ನಿಫ್ಟಿ

    ಮುಂಬೈ: ಭಾರತೀಯ ಷೇರುಪೇಟೆಯಲ್ಲಿ ದೀಪಾವಳಿ ಹಬ್ಬದ ಮೊದಲ ದಿನ ಸಂಜೆ 6.15ಕ್ಕೆ ಮುಹೂರ್ತ ಟ್ರೇಡಿಂಗ್ ನಡೆದಿದ್ದು, ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (ಬಿಎಸ್ಇ) ಸೂಚ್ಯಂಕ ಸೆನ್ಸೆಕ್ಸ್, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ ಸಾರ್ವಕಾಲಿಕ ಎತ್ತರಕ್ಕೇರಿ ದಾಖಲೆ ನಿರ್ಮಿಸಿದವು. ಹಿಂದು ಕ್ಯಾಲೆಂಡರ್ ಪ್ರಕಾರ ಇಂದು ವಿಕ್ರಮ ಸಂವತ್ಸರದ ಮೊದಲ ದಿನ. ​ವರ್ಷದ ಮೊದಲ ದಿನವನ್ನು ಆಚರಿಸುವುದಕ್ಕೆ ಷೇರುಪೇಟೆಯಲ್ಲಿ ಮುಹೂರ್ತ ಟ್ರೇಡಿಂಗ್ ನಡೆಸಲಾಗುತ್ತದೆ.

    ಆರಂಭದ ಕೆಲವು ನಿಮಿಷಗಳ ಟ್ರೇಡಿಂಗ್​ನಲ್ಲಿ ಸೆನ್ಸೆಕ್ಸ್ 380.76 ಅಂಶ (0.88%) ಏರಿಕೆಯಾಗಿ 43,823.76 ಅಂಶದಲ್ಲಿ ವಹಿವಾಟು ನಡೆಸಿತ್ತು. ಇದೇ ರೀತಿ, ನಿಫ್ಟಿ ಕೂಡ 117.85 ಅಂಶ (0.93%) ಹೆಚ್ಚಳವಾಗಿ 12,808.65ರಲ್ಲಿ ವಹಿವಾಟು ನಡೆಸಿ ಹೊಸ ದಾಖಲೆ ನಿರ್ಮಿಸಿದೆ. ಸೆನ್ಸೆಕ್ಸ್​ನ ಸೆಕ್ಟೋರಲ್​ ಸೂಚ್ಯಂಕಗಳು ಲಾಭಾಂಶದಲ್ಲಿ ವಹಿವಾಟು ನಡೆಸಿದವು.

    ಇದನ್ನೂ ಓದಿ:  ಮುನಿರತ್ನ ಸಂಪುಟಕ್ಕೆ ಸೇರುತ್ತಾರೋ, ಇಲ್ಲವೋ ಎಂಬ ಪ್ರಶ್ನೆಗೆ ಉತ್ತರಿಸಲು ಸಿಎಂ ಮಾತ್ರ ಸಮರ್ಥರು!

    ಸೆನ್ಸೆಕ್ಸ್ ಪಟ್ಟಿಯಲ್ಲಿರುವ ಬಜಾಜ್​ ಫಿನ್​ಸರ್ವ್, ಇಂಡಸ್​ಇಂಡ್ ಬ್ಯಾಂಕ್, ಟಾಟಾ ಸ್ಟೀಲ್​, ಭಾರ್ತಿ ಏರ್​​ಟೆಲ್​, ಎಲ್​ಆ್ಯಂಡ್ ಟಿ, ಏಕ್ಸಿಸ್ ಬ್ಯಾಂಕ್, ಐಟಿಸಿ ಷೇರುಗಳು ಶೇಕಡ 1.93ರ ತನಕ ಲಾಭಾಂಶ ಗಿಟ್ಟಿಸಿಕೊಂಡಿವೆ. ಎನ್​ಟಿಪಿಸಿ, ಪವರ್​ಗ್ರಿಡ್​, ನೆಸ್ಟ್ಲೆ ಇಂಡಿಯಾ ಷೇರುಗಳು ಶೇಕಡ 0.77 ನಷ್ಟ ಅನುಭವಿಸಿವೆ. (ಏಜೆನ್ಸೀಸ್)

    ಗಡಿಭಾಗದ ಜನರ ರಕ್ತದೋಕುಳಿ ತಡೆಯಲು ಭಾರತ-ಪಾಕ್ ಮಾತುಕತೆ ಅವಶ್ಯ- ಹುರಿಯತ್​ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts