More

    ರಾಮಚಂದ್ರ ರಾಜ್ಯಕ್ಕೆ ದ್ವಿತೀಯ ರ‌್ಯಾಂಕ್

    ಮುಧೋಳ: ಪಟ್ಟಣದ ತ್ರಿವೇಣಿ ಶಿಕ್ಷಣ ಸಂಸ್ಥೆಯ ಸಂಗಮನಾಥ ಕನ್ನಡ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿ ರಾಮಚಂದ್ರ ಮಂಜುನಾಥ ರಾಯಕರ ಕನ್ನಡ ಮತ್ತು ಇಂಗ್ಲಿಷ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ಒಟ್ಟು 8 ಅಂಕಗಳನ್ನು ಹೆಚ್ಚಿಗೆ ಪಡೆದಿದ್ದು ಶೇ.99.52 ಫಲಿತಾಂಶ ಆಗಿದೆ. ಕನ್ನಡ 125, ಹಿಂದಿ 100, ಗಣಿತ 100, ವಿಜ್ಞಾನ 100, ಸಮಾಜ ವಿಜ್ಞಾನ 99, ಇಂಗ್ಲಿಷ್ 98 ಸೇರಿ ಒಟ್ಟು 625ಕ್ಕೆ 622 ಅಂಕಗಳನ್ನು ಪಡೆದು ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ ಎಂದು ಮುಖ್ಯಶಿಕ್ಷಕ ವೆಂಕಟೇಶ ಗುಡೆಪ್ಪನವರ ತಿಳಿಸಿದ್ದಾರೆ.

    ವಿದ್ಯಾರ್ಥಿ ಸಾಧನೆಗೆ ಆಡಳಿತಾಧಿಕಾರಿ ಮಲ್ಲು ಕಲ್ಲೆನ್ನವರ, ಶಿಕ್ಷಕಿಯರಾದ ಹೇಮಾ ಬಡಿಗೇರ, ಸುಮನ್ ಕೊಡಗ, ವಿಜಯಲಕ್ಷ್ಮೀ ದುದಗಿ, ಜ್ಯೋತಿ ಪಾಟೀಲ, ಶ್ರುತಿ ಗೌಡಣ್ಣನವರ, ಅನಸೂಯಾ ಹಿರೇಮಠ, ಶ್ವೇತಾ ಹಿರೇಮಠ, ತಹಸೀನ್ ಅಮಲಜರಿ ಹರ್ಷ ವ್ಯಕ್ತಪಡಿಸಿದ್ದಾರೆ.

    ನನಗೆ ಮುಖ್ಯಗುರು ವೆಂಕಟೇಶ ಗುಡೆಪ್ಪನವರ ಹಾಗೂ ಎಲ್ಲ ವಿಷಯ ಶಿಕ್ಷಕರು ನಿರಂತರವಾಗಿ ಆತ್ಮವಿಶ್ವಾಸ ತುಂಬಿದ್ದರಿಂದ 622 ಅಂಕ ಪಡೆಯಲು ಸಾಧ್ಯವಾಯಿತು. ಶಾಲೆಯಲ್ಲಿ ಎರಡು ಬಾರಿ ಅಭ್ಯಾಸ ಪುನರಾವರ್ತನೆ ಆಗಿದೆ. 16 ಸರಣಿ ಪರೀಕ್ಷೆ ನಡೆಸಿದ್ದರಿಂದ ನನಗೆ ಉತ್ತಮ ಅಂಕ ಬಂದಿದೆ. ಐಎಎಸ್ ಮಾಡಿ ಜಿಲ್ಲಾಧಿಕಾರಿಯಾಗುವ ಆಸೆ ಇದೆ.
    ರಾಮಚಂದ್ರ ರಾಯಕರ, ರಾಜ್ಯಕ್ಕೆ 2ನೇ ರ‌್ಯಾಂಕ್ ವಿಜೇತ ವಿದ್ಯಾರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts