More

    ಮುಧೋಳ ನಗರಸಭೆ ಬಿಜೆಪಿ ಮಡಿಲಿಗೆ

    ಮುಧೋಳ: ನಗರಸಭೆ ಅಧ್ಯಕ್ಷರಾಗಿ ಸಿದ್ದನಾಥ(ಸಂಜಯ) ದಾದಾಸಾಹೇಬ ಮಾನೆ, ಉಪಾಧ್ಯಕ್ಷರಾಗಿ ಸ್ವಾತಿ ಸತೀಶ ಕುಲಕರ್ಣಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ ತಿಳಿಸಿದರು.

    ನಗರದ ನಗರಸಭೆಯಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ದಿಂದ ಸಂತೋಷ ಈಶ್ವರ ಪಾಲೋಜಿ, ಬಿಜೆಪಿಯಿಂದ ಸಿದ್ದನಾಥ ದಾದಾಸಾಹೇಬ ಮಾನೆ ನಾಮಪತ್ರ ಸಲ್ಲಿಸಿದ್ದರು. ಸಂತೋಷ ಪಾಲೋಜಿಗೆ 11 ಮತಗಳು ಲಭ್ಯವಾದರೆ, ಬಿಜೆಪಿಯ ಸಿದ್ದನಾಥ ಮಾನೆ ಅವರಿಗೆ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಸಂಸದ ಪಿ.ಸಿ. ಗದ್ದಿಗೌಡರ ಸೇರಿ 19 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್‌ನಿಂದ ಸುನಂದಾ ತೇಲಿ, ಬಿಜೆಪಿಯಿಂದ ಸ್ವಾತಿ ಕುಲಕರ್ಣಿ ಸ್ಪರ್ಧಿಸಿದ್ದರು. ಕಾಂಗ್ರೆಸ್ಸಿನ ಸುನಂದಾ ತೇಲಿ ಅವರಿಗೆ 11 ಮತಗಳು ಪಡೆದರೆ, ಬಿಜೆಪಿಯ ಸ್ವಾತಿ ಸತೀಶ್ ಕುಲಕರ್ಣಿ 19 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಲತಾ ಲಕ್ಷ್ಮಣ ಗಾಯಕವಾಡ, ರಾಜೇಸಾಬ ಅಪ್ಪಾಸಾಹೇಬ ಬೇಪಾರಿ, ಯೂಸೂಫ್ ಜಮಾದಾರ ಗೈರಾಗಿದ್ದರು ಎಂದು ತಿಳಿಸಿದರು.

    ಅಭಿವೃದ್ಧಿಗೆ ಸಹಕಾರಿ
    ನಗರಸಭೆಯಲ್ಲಿ ಬಹುಮತ ಇದ್ದಿದ್ದರಿಂದ ಬಿಜೆಪಿ ಮಡಿಲಿಗೆ ಅಧಿಕಾರ ಸಿಕ್ಕಿದೆ. ನಗರದ ಸಂಪೂರ್ಣ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

    ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸದಸ್ಯರು ಅತ್ಯುತ್ತಮ ಆಡಳಿತ ನೀಡಿ ಮುಧೋಳದ ಸಂಪೂರ್ಣ ಅಭಿವೃದ್ಧಿಗೆ ಕೈಜೋಡಿಸಲಿದ್ದಾರೆ ಎಂದರು.
    ಸಂಸದ ಪಿ.ಸಿ. ಗದ್ದಿಗೌಡರ, ಬಿಜೆಪಿ ಅಧ್ಯಕ್ಷ ಡಾ.ರವಿ ನಂದಗಾಂವ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರುರಾಜ ಕಟ್ಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts