More

    ವಿವಿಧೆಡೆ ಮತದಾನ ಶಾಂತಿಯುತ

    ಮುಧೋಳ: ತಾಲೂಕಿನಲ್ಲಿ 22 ಗ್ರಾಮ ಪಂಚಾಯಿತಿಯ 361 ಸ್ಥಾನಗಳಿಗಾಗಿ ಮಂಗಳವಾರ ನಡೆದ ಚುನಾವಣೆಯಲ್ಲಿ 819 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಯಿತು.

    ತಾಲೂಕಿನ ಉತ್ತೂರ ಗ್ರಾಮದ ವಾರ್ಡ್ ನಂ.2ರ ಮತಗಟ್ಟೆ ನಂ.84 ರಲ್ಲಿ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಮತದಾನ ಮಾಡಿದರು. ಮಾಚಕನೂರ ಗ್ರಾಮದಲ್ಲಿ ಶತಾಯುಷಿ ಯಮನವ್ವ ಹಲಗಲಿ ಮತ ಚಲಾಯಿಸಿದರು. ತಾಲೂಕಿನ 162 ಮತಗಟ್ಟೆಗಳ ಪೈಕಿ 158 ಮತಗಟ್ಟೆಯಲ್ಲಿ ಮತದಾನ ನಡೆಯಿತು. ಈಗಾಗಲೇ ನಾಲ್ಕು ಮತಗಟ್ಟೆಗಳಿಂದ 35 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಮಾಚಕನೂರ, ವಜ್ರಮಟ್ಟಿ, ಮರಿಕಟ್ಟಿ, ಬರಗಿ, ಇಂಗಳಗಿ, ಯಡಹಳ್ಳಿ, ಆಲಗುಂಡಿ ಬಿ.ಕೆ, ಶಿರೋಳ, ಮಂಟೂರ, ಹಲಗಲಿ, ಮಳಲಿ, ಉತ್ತೂರ, ಜಾಲಿಬೇರ, ರಂಜಣಗಿ, ಒಂಟಗೋಡಿ ಚನ್ನಾಳ, ಮುಗಳಖೋಡ, ಕುಳಲಿ ಗ್ರಾಮಗಳಲ್ಲಿ ಸಣ್ಣಪುಟ್ಟ ಮಾತಿನ ಚಕಮಕಿ ಬಿಟ್ಟರೆ ಶಾಂತಿಯುತ ಮತದಾನ ನಡೆಯಿತು.

    ತಾಲೂಕಿನ ಹಲವಾರು ಗ್ರಾಮಗಳಿಗೆ ಭೇಟಿ ನೀಡಿದ ಚುನಾವಣೆ ವೀಕ್ಷಕ ಶಶಿಧರ ಕುರೇರ, ತಹಸೀಲ್ದಾರ್ ಸಂಗಮೇಶ ಬಾಡಗಿ, ಸಿಪಿಐ ಎಚ್.ಆರ್. ಪಾಟೀಲ, ಮುಧೋಳ ಪಿಐಸಿ ಮಲ್ಲಿಕಾರ್ಜುನ ಬಿರಾದಾರ, ಬಿಇಒ ವಿಠೋಬಾ ಪತ್ತಾರ ಹಾಗೂ ಇತರ ಅಧಿಕಾರಿಗಳು ಶಾಂತಿಯುತ ಮತದಾನವಾಗುವಂತೆ ವ್ಯವಸ್ಥೆ ಕಲ್ಪಿಸಿದರು. ಪ್ರತಿಯೊಂದು ಮತಗಟ್ಟೆಯಲ್ಲೂ ಸ್ಯಾನಿಟೈಜರ್, ಮಾಸ್ಕ್ ಬಳಕೆ ಹಾಗೂ ಜನತೆ ಪರಸ್ಪರ ಅಂತರ ಕಾಪಾಡುವಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸರು ಸೂಕ್ತ ವ್ಯವಸ್ಥೆ ಮಾಡಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts