More

    ಅದ್ದೂರಿಯಾಗಿ ಜರುಗಿದ ಕನ್ನಡ ಕಲರವ

    ಮುದಗಲ್: ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಕನ್ನಡ ಕಲರವ ಕಾರ್ಯಕ್ರಮದ ಸಾಹಿತ್ಯ ರಥದ ಮೆರವಣಿಗೆ ಶನಿವಾರ ಅದ್ದೂರಿಯಾಗಿ ಜರುಗಿತು. ಕನ್ನಡ ನಾಡು, ನುಡಿಯ ಬಗ್ಗೆ ಅರಿವು ಮೂಡಿಸುವುದರೊಂದಿಗೆ ತಾಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು.

    ಸ್ಥಳೀಯ ಸರ್ಕಾರಿ ಜೂ.ಕಾಲೇಜು ಆವರಣದಿಂದ ಡೊಳ್ಳು, ಹೆಜ್ಜೆ ಕುಣಿತ, ಡೋಲು, ಕೋಲಾಟ ಅನೇಕ ಕಲಾ ತಂಡಗಳ ಪ್ರದರ್ಶನದೊಂದಿಗೆ ಕಿಲ್ಲಾದ ಶ್ರೀರಾಮಲಿಂಗೇಶ್ವರ ದೇವಸ್ಥಾನದವರೆಗೆ ಸಾಹಿತ್ಯ ರಥ ಮೆರವಣಿಗೆ ನಡೆಯಿತು. ಕನ್ನಡ ಗೀತೆ ಮತ್ತು ಡೋಲು ವಾದ್ಯ ಮೇಳಕ್ಕೆ ಸಾಹಿತ್ಯ ಪ್ರೇಮಿಗಳು ಕುಣಿದು ಸಂಭ್ರಮಿಸಿದರು. ಐತಿಹಾಸಿಕ ಮುದಗಲ್ ಕೋಟೆಯ ಸ್ತಬ್ಧ ಚಿತ್ರ ಮತ್ತು ಶಾಲಾ ಮಕ್ಕಳ ಛದ್ಮವೇಷ ನೋಡುಗರ ಗಮನ ಸೆಳೆದವು. ಕರ್ನಾಟಕ ರತ್ನ ಡಾ.ಪುನಿತ್ ರಾಜಕುಮಾರ್ ಭಾವಚಿತ್ರದ ನಾಡಧ್ವಜವನ್ನು ಶಾಲಾ ವಿದ್ಯಾರ್ಥಿಗಳು ಕೈಯಲ್ಲಿ ಹಿಡಿದು ಮೆರವಣಿಗೆಯಲ್ಲಿ ಸಾಗಿದ್ದು ಆಕರ್ಷಣೀಯವಾಗಿ ಕಂಡುಬಂತು. ತಾಯಿ ಭುವನೇಶ್ವರಿ ಭಾವಚಿತ್ರದ ಸಾಹಿತ್ಯ ರಥಕ್ಕೆ ಪುರಸಭೆ ಅಧ್ಯಕ್ಷೆ ಅಮಿನಾಬೇಗಂ ಸೈಯದ್ ಸಾಬ್ ಚಾಲನೆ ನೀಡಿದರು.

    ಕಸಾಪ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಗೌಡೂರು, ಮುದಗಲ್ ಕಸಾಪ ಅಧ್ಯಕ್ಷ ಬಸವರಾಜ ಖೈರವಾಡಗಿ, ಕಸಾಪ ಮುಖಂಡರಾದ ಅಶೋಕಗೌಡ ಪಾಟೀಲ್, ಯಮನೂರು ನದಾಫ್, ಹಾಜಿಮಲಂಗಬಾಬು, ಸಂಗಮೇಶ ಸರಗಣಚಾರಿ, ವೀರೇಶಗೌಡ ವ್ಯಾಕರನಾಳ, ಅನ್ನಪೂರ್ಣಮ್ಮ,ಸಣ್ಣ ಸಿದ್ದಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts