More

    ತಿಮ್ಮಮ್ಮರ ಆರಾಧನೆ ಮಹೋತ್ಸವ ಅದ್ದೂರಿ

    ಮುದಗಲ್: ಹೂನೂರು ಗ್ರಾಮದ ಹೊರವಲಯದ ಅಮ್ಮನಕಟ್ಟೆಯ ಸಾಧ್ವಿ ಶಿರೋಮಣಿ ತುರಡಗಿ ತಿಮ್ಮಮ್ಮರ 211ನೇ ಆರಾಧನೆ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು. ಶ್ರೀಹರಿನಾಮ ಕೀರ್ತನೆ ಹಾಗೂ ವಿವಿಧ ವಾದ್ಯಗಳಿಂದ ಭಜನಾಮಂಡಳಿಗಳ ವೈಭವದೊಂದಿಗೆ ತುರಡಗಿ ಗ್ರಾಮದಿಂದ ತಿಮ್ಮಮ್ಮರ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿ ತರಲಾಯಿತು. ನೂರಾರು ಜನರು ಭಕ್ತಿಯಿಂದ ನಮನ ಸಲ್ಲಿಸಿದರು.

    ಇದನ್ನೂ ಓದಿ: ನಟ ಮಿಥುನ್ ಚಕ್ರವರ್ತಿ ಆಸ್ಪತ್ರೆಗೆ ದಾಖಲು! ‘ಯಾರು ಈ ವದಂತಿಗಳನ್ನು ಹರಡುತ್ತಿರುವುದು?’ ಎಂದ ಕುಟುಂಬಸ್ಥರು

    ಲೋಕಕಲ್ಯಾಣಾರ್ಥವಾಗಿ ಶ್ರೀಭೂವರಾಹಮಂತ್ರ ಹೋಮ ನಡೆಯಿತು. ತಿಮ್ಮಮ್ಮರ ಮೂರ್ತಿಗೆ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರೀವಿದ್ಯಾಕಣ್ವವಿರಾಜತೀರ್ಥ ಪಾದಂಗಳ ಅವರ ದಿವ್ಯ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಕೋಟ್ರೇಶ ಆಚಾರಿ ಮಠಾಧಿಕಾರಿ ನೇತೃತ್ವದಲ್ಲಿ ಶ್ರೀಪುರಂದರದಾಸರ ಪ್ರವಚನ ನಡೆಯಿತು. ಅಪೇಕ್ಷಾ ಸರ್ಕಿಲ್, ರಾಕೇಶ ಕುಲಕರ್ಣಿ ಅವರು ದಾಸವಾಣಿ ಮತ್ತು ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು.

    ಆರಾಧನೆ ಮಹೋತ್ಸವಕ್ಕೆ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ರಾಘವೇಂದ್ರ ರಾವ್ ಹುದ್ದಾರ, ಒಡಿಶಾ ಭುವನೇಶ್ವರದ ಬಿರ್ಲಾ ಗ್ರೂಪ್ಸ್ ಕಾನೂನು ಸಲಹೆಗಾರ ಆಂಜನೇಯ, ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಮಲ್ಲರಾವ್ ಕುಲಕರ್ಣಿ, ಕಣ್ವ ಮಠದ ಅಧ್ಯಕ್ಷ ಮನೋಹರ ರಾವ್ ಮಾಡ್ಗೇರಿ, ವೆಂಕಟೇಶ ಕುಲಕರ್ಣಿ ಗೋನವಾರ ಅವರಿಗೆ ಸನ್ಮಾನಿಸಲಾಯಿತು.
    ಅಂಕಲಿ ಮಠದ ವೀರಭದ್ರೇಶ್ವರ ಸ್ವಾಮಿ, ಕುಷ್ಟಗಿ ಮಾಜಿ ಶಾಸಕ ಅಮರೇಗೌಡ ಬಯ್ಯಪುರ, ತಿಮ್ಮಮ್ಮರ ಸೇವಾ ವಿಶ್ವಸ್ಥ ಸಮಿತಿ ಅಧ್ಯಕ್ಷ ಗುರುರಾಜ ರಾವ್ ಕುಲಕರ್ಣಿ ಗೋನವಾರ, ಉಪಾಧ್ಯಕ್ಷ ಹನುಮೇಶ ಪಟವಾರಿ, ಪ್ರಮುಖರಾದ ಪ್ರಾಣೇಶ ಆಚಾರಿ ಕಳ್ಳಮರಳಿ, ಭೀಮರಾವ್ ಕುಲಕರ್ಣಿ, ವೆಂಕಟೇಶ ದೇಸಾಯಿ ಹಾಗೂ ಹೂನೂರು, ಕಿಡದೂರು, ತುರಡಗಿ, ಮಾಕಾಪುರು ಸೇರಿ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts