More

    ನಿಯಮ ಪಾಲಿಸದಿದ್ದರೆ ಸರ್ಕಾರಕ್ಕೆ ಬೈಯ್ಯುವ ಹಕ್ಕಿಲ್ಲ

    ಮುದ್ದೇಬಿಹಾಳ: ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ನಿಯಮಗಳಿಗೆ ಬದ್ಧರಾಗಿ ನಡೆದುಕೊಳ್ಳದೇ ಇರುವವರಿಗೆ ಸರ್ಕಾರವನ್ನು ಬೈಯ್ಯುವ ಹಕ್ಕೇನಿದೆ? ಎಂದು ಶಾಸಕರ ಪತ್ನಿ, ಸಮಾಜಸೇವಕಿ ಮಹಾದೇವಿ ಪಾಟೀಲ ನಡಹಳ್ಳಿ ಪ್ರಶ್ನಿಸಿದರು.

    ಪಟ್ಟಣದ ಶಾಸಕರ ಗೃಹ ಕಚೇರಿ ದಾಸೋಹ ನಿಲಯದಲ್ಲಿ ಸೋಮವಾರ ಮುದ್ದೇಬಿಹಾಳ ಠಾಣೆ ಪೊಲೀಸರಿಗೆ ಶಾಸಕರ ಸೂಚನೆ ಮೇರೆಗೆ ಪ್ರೋಟಿನ್‌ಯುಕ್ತ ಲಘು ಆಹಾರ ಕೊಡುವ ಸರಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಕರೊನಾ ಎರಡನೇ ಅಲೆ ಹರಡುವಿಕೆ ತುಂಬಾ ಅಪಾಯಕಾರಿ ಎಂದು ಹೇಳುತ್ತಿದ್ದಾರೆ. ಆದರೆ, ಅದನ್ನು ತಡೆಯಲು ಜಾರಿಗೊಳಿಸಿರುವ ನಿಯಮಗಳನ್ನು ಪಾಲಿಸಲು ನಾವು ತಯಾರಿಲ್ಲ. ಆದರೆ, ಸರ್ಕಾರ ಕೋವಿಡ್ ನಿರ್ವಹಣೆಯಲ್ಲಿ ವಿಲವಾಗಿದೆ ಎಂದು ಟೀಕಿಸುತ್ತಿದ್ದೇವೆ ಎಂದು ಹೇಳಿದರು.

    ಸರ್ಕಾರ ಜನತಾ ಕಫ್ರ್ಯೂ ಜಾರಿಗೊಳಿಸಿರುವುದರಿಂದ ಹಗಲಿರುಳು, ಬಿರು ಬಿಸಿಲಿನಲ್ಲಿ ಕರ್ತವ್ಯ ಪಾಲನೆ ಮಾಡುತ್ತಿರುವ ಪೊಲೀಸರಿಗೆ ನಮ್ಮ ಕುಟುಂಬದಿಂದ ಅಲ್ಪ ಸೇವೆ ಮಾಡುತ್ತಿದ್ದೇವೆ ಎಂದು ಹೇಳಿದರು.

    ದೇಶದ ಬೃಹತ್ ಉದ್ಯಮಿ ಟಾಟಾ ಅವರು 1500 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಿ ಪ್ರಧಾನಿಗೆ ಹಸ್ತಾಂತರಿಸುತ್ತಿದ್ದಾರೆ. ಉಳ್ಳವರು ಆಸ್ಪತ್ರೆಗಳಿಗೆ ಏನಾದರೂ ಡೊನೆಟ್ ಮಾಡುವ ಮೂಲಕ ಬಡವರ ಚಿಕಿತ್ಸೆಗೆ ನೆರವಾಗೋಣ ಎಂದು ಹೇಳಿದರು.

    ಶಾಸಕರ ಪುತ್ರ, ಉದ್ಯಮಿ ಭರತಗೌಡ ಪಾಟೀಲ ನಡಹಳ್ಳಿ ಮಾತನಾಡಿ, ಯುವಕರಿಗೆ ರೋಗನಿರೋಧ ಶಕ್ತಿ ಇದ್ದು ಕರೊನಾ ಬಂದರೂ ಅದನ್ನು ತಡೆದುಕೊಳ್ಳುವ ಶಕ್ತಿ ಇದೆ. ಆದರೆ, ಹಿರಿಯರಿಗೆ ಅದನ್ನು ತಡೆಯುವ ಶಕ್ತಿ ಕಡಿಮೆ. ಆದ್ದರಿಂದ ವಿನಾಕಾರಣ ಸುತ್ತಾಡದೇ ಸರ್ಕಾರದ ಮಾರ್ಗಸೂಚಿಯಂತೆ ನಡೆದುಕೊಳ್ಳಬೇಕು. ಎಲ್ಲೆಡೆ ವ್ಯಾಕ್ಸಿನೇಷನ್ ಆರಂಭವಾಗಿದ್ದು, ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.

    ಬಿಜೆಪಿ ಮಂಡಲ ಅಧ್ಯಕ್ಷ ಪರಶುರಾಮ ಪವಾರ ಮಾತನಾಡಿದರು. ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಮುಖಂಡರಾದ ಬಸವರಾಜ ನಂದಿಕೇಶ್ವರಮಠ, ರಾಜಶೇಖರ ಹೊಳಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts