More

    ಮತ್ಸೃಸಂಪದ ಯೋಜನೆ ಯುವಕರಿಗೆ ದಾರಿದೀಪ

    ಮುದ್ದೇಬಿಹಾಳ : ತಾಲೂಕಿನಲ್ಲಿ ನೀರಾವರಿ ಕಾಲುವೆಗಳ ಅಕ್ಕಪಕ್ಕದಲ್ಲಿ ಕೆಲ ಜಮೀನುಗಳು ಸವಳು ಜವಳು ಆಗಿದ್ದು, ಅಲ್ಲಿ ಮೀನುಗಾರಿಕೆ ನಡೆಸಲು ಸಾಧ್ಯವಿದೆ. ಕೇಂದ್ರ ಸರ್ಕಾರದ ಮತ್ಸೃ ಸಂಪದ ಯೋಜನೆಯ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕೆಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.

    ತಾಲೂಕಿನ ಕೋಳೂರ ತಾಂಡಾದಲ್ಲಿ ನವರಾತ್ರಿ ಉತ್ಸವದ ನಿಮಿತ್ತ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮ ಹಾಗೂ ರಸಮಂಜರಿ ಸಮಾರಂಭದಲ್ಲಿ ಅವರು ಮಾತನಾಡಿದರು.

    ಮತ್ಸೃ ಸಂಪದ ಯೋಜನೆಯಡಿ ಎಕರೆಗೆ 4 ಲಕ್ಷ ರೂ.ಆದಾಯ ಗಳಿಸುವ ಅವಕಾಶ ಇದೆ ಎಂದು ಮೀನುಗಾರಿಕಾ ಕ್ಷೇತ್ರದಲ್ಲಿರುವ ತಜ್ಞರೇ ಹೇಳುತ್ತಿದ್ದು, ಈ ಯೋಜನೆಯ ಬಗ್ಗೆ ಗ್ರಾಮೀಣ ಭಾಗದ ಯುವಕರಿಗೆ ಮಾಹಿತಿ ಇಲ್ಲ. ಅದರ ಯಶಸ್ವಿ ಅನುಷ್ಠಾನಕ್ಕೆ ಶ್ರಮಿಸಲಾಗುವುದು. ಯುವಕರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಮುಂದೆ ಬರಬೇಕು ಎಂದರು.

    ಎಸ್.ಎಸ್.ಶಿವಾಚಾರ್ಯ ಕಾಲೇಜಿನ ಆಡಳಿತಾಧಿಕಾರಿ ರವಿ ನಾಯಕ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಜಿಪಂ ಮಾಜಿ ಸದಸ್ಯ ಚಿದಾನಂದ ಸೀತಿಮನಿ, ಮುಖಂಡ ಶರಣು ಬೂದಿಹಾಳಮಠ, ಪಿಎಸ್‌ಐ ಮಲ್ಲಪ್ಪ ಮಡ್ಡಿ, ಜಯರಾಂ ನಾಯಕ, ತಾಪಂ ಸದಸ್ಯ ಪ್ರೇಮಸಿಂಗ್ ಚವಾಣ್, ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ತಂಗಡಗಿ, ಡಿಎಸ್‌ಎಸ್ ಮುಖಂಡ ಡಿ.ಬಿ. ಮುದೂರ, ತುಳಜಾರಾಮ ಚವಾಣ್, ಬಿ.ಜಿ. ಬಿರಾದಾರ, ಲಕ್ಷ್ಮಣ ಲಮಾಣಿ ಮತ್ತಿತರರು ಇದ್ದರು.

    ಗೋಪಾಲ ಹೂಗಾರ ಹಾಗೂ ಗೋಪಾಲ ಇಂಚಗೇರಿ ನೇತೃತ್ವದ ಕಲಾಸಿಂಚನ ಮೆಲೋಡಿಸ್ ತಂಡದಿಂದ ಕರೊನಾ ಜಾಗೃತಿ ರಸಮಂಜರಿ ಕಾರ್ಯಕ್ರಮ ನಡೆಯಿತು.

    ಗುಳೇ ಹೋಗಿರುವವರಲ್ಲಿ ಅತಿ ಹೆಚ್ಚು ಜನ ಬಂಜಾರ ಜನಾಂಗದವರು. ಕರೊನಾ ಸಮಯದಲ್ಲಿ ಅತಿ ಹೆಚ್ಚು ತೊಂದರೆಗೆ ಸಿಲುಕಿಕೊಂಡರು. ಬಸ್ ,ಟ್ರೇನ್ ಇರಲಿಲ್ಲ. ಅನೇಕ ಜನ ಕೈಯಲ್ಲಿ ಕಾಸಿಲ್ಲದೆ ಮನೆಗೆ ವಾಪಸ್ ಬಂದಿದ್ದನ್ನು ನಾನು ನೋಡಿದ್ದೇನೆ. ಪ್ರಕೃತಿ ವಿಕೋಪ ಹಾಗೂ ಕರೊನಾ ಹಾವಳಿ ಮಧ್ಯೆಯೂ ಧೈರ್ಯಗುಂದದೆ ಬದುಕು ನಡೆಸುತ್ತಿರುವ ನಿಮಗೆಲ್ಲ ಧನ್ಯವಾದ.
    ಎ.ಎಸ್. ಪಾಟೀಲ ನಡಹಳ್ಳಿ,ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts