More

    ವ್ಯಾಕ್ಸಿನೇಷನ್ ಕೇಂದ್ರ ಶಾಲೆಗೆ ಸ್ಥಳಾಂತರ

    ಮುದ್ದೇಬಿಹಾಳ: ಮತಕ್ಷೇತ್ರದ ಜನರ ಅನುಕೂಲಕ್ಕಾಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ವ್ಯಾಕ್ಸಿನೇಷನ್ ಕೇಂದ್ರವನ್ನು ಕೆಬಿಎಂಪಿಎಸ್ ಶಾಲೆಗೆ ಸ್ಥಳಾಂತರಿಸಲಾಗುವುದೆಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.

    ಪಟ್ಟಣದ ಕೆಬಿಎಂಪಿಎಸ್ ಶಾಲೆಗೆ ಗುರುವಾರ ಭೇಟಿ ನೀಡಿ ಲಸಿಕಾ ಕೇಂದ್ರದ ಸ್ಥಳ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

    ಈಗಿರುವ ಕೇಂದ್ರದಲ್ಲಿ ಲಸಿಕೆ ಪಡೆದುಕೊಳ್ಳಲು ಬರುವವರಿಗೆ ಸೋಂಕು ಹರಡುವ ಸಾಧ್ಯತೆಗಳಿದ್ದು, ಈ ಹಿನ್ನೆಲೆ ಕೇಂದ್ರವನ್ನು ಸ್ಥಳಾಂತರಿಸಲಾಗುತ್ತದೆ ಎಂದರು.

    ಈ ಕೇಂದ್ರದಲ್ಲಿ ಮೇ 14 ರಿಂದ ಲಸಿಕೆ ಹಾಕುವ ಕೆಲಸವನ್ನು ನಿರಂತರ ಮಾಡಲಾಗುತ್ತದೆ. ತಾಲೂಕಿನಲ್ಲಿ ಈಗಾಗಲೇ 84 ಸಾವಿರ ಜನ ಲಸಿಕೆ ಪಡೆದುಕೊಂಡಿದ್ದು, 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಲಸಿಕೆ ನೀಡಲು 6083 ಡೋಸ್ ಉಳಿದಿದ್ದು, ಅವರಿಗೆ ಲಸಿಕೆ ನೀಡಲಾಗುತ್ತದೆ. 18-45 ವರ್ಷ ವಯೋಮಿತಿ ಜನರಿಗೆ ಸೆಕೆಂಡ್ ಡೋಸ್ ಮುಗಿದ ಬಳಿಕ ಪ್ರಥಮ ಹಂತದ ಲಸಿಕೆ ನೀಡುವ ಕಾರ್ಯ ಆರಂಭಿಸಲಾಗುವುದು. ತಾಲೂಕಿನಲ್ಲಿ ಯಶಸ್ವಿಯಾಗಿ ಕರೊನಾ ನಿರ್ವಹಣೆ ಮಾಡಿದ್ದೇವೆ. ಅಗತ್ಯಬಿದ್ದರೆ ಆಕ್ಸಿಜನ್ ಹೊಂದಿರುವ ಮೊಬೈಲ್ ವ್ಯಾನ್ ತರಿಸಲಾಗುತ್ತದೆ. ಮುದ್ದೇಬಿಹಾಳದಲ್ಲಿ ಪ್ರಥಮವಾಗಿ ಆಕ್ಸಿಜನ್ ಬೆಡ್ ಸರ್ವಿಸ್ ಆರಂಭವಾಗಿದೆ.

    ನಿಮಿಷಕ್ಕೆ 500 ಲೀಟರ್ ಆಕ್ಸಿಜನ್ ಉತ್ಪಾದಿಸುವ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಸದ್ಯಕ್ಕೆ ಮೂರು ವೆಂಟಿಲೇಟರ್ ಆಕ್ಸಿಜನ್ ಬೆಡ್ ವ್ಯವಸ್ಥೆ ಇದ್ದು, ಇನ್ನೂ ಮೂರು ವೆಂಟಿಲೇಟರ್ ಬೆಡ್‌ಗಳನ್ನು ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ. ವಾರದಲ್ಲಿ ಪೂರ್ಣಗೊಳ್ಳಲಿದೆ. ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ತರಿಸಿಕೊಳ್ಳಲು ಚಿಂತನೆ ನಡೆದಿದೆ ಎಂದು ತಿಳಿಸಿದರು.

    ಜಮ್ಮಲದಿನ್ನಿ ಕಿತ್ತೂರ ಚನ್ನಮ್ಮ ವಸತಿ ಶಾಲೆ, ನಾಲತವಾಡ ಮುರಾರ್ಜಿ ದೇಸಾಯಿ ವಸತಿ ಶಾಲೆ ಸೇರಿ ಪ್ರಮುಖ ಪಿಎಚ್‌ಸಿಗಳಲ್ಲಿ 600-700 ಬೆಡ್‌ಗಳನ್ನು ಐಸೋಲೇಷನ್ ಸಲುವಾಗಿ ಸಿದ್ಧಪಡಿಸಿಟ್ಟುಕೊಳ್ಳಲು ಅಗತ್ಯ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದರು.
    ತಾಲೂಕಾಡಳಿತ ವೈದ್ಯಾಧಿಕಾರಿ ಡಾ. ಸತೀಶ ತಿವಾರಿ, ಸಿಪಿಐ ಆನಂದ ವಾಘಮೋಡೆ, ಪುರಸಭೆ ಕಂದಾಯಾಧಿಕಾರಿ ಎಂ.ಬಿ. ಮಾಡಗಿ, ದೈಹಿಕ ಶಿಕ್ಷಣಾಧಿಕಾರಿ ಎಚ್.ಎಲ್. ಕರಡ್ಡಿ, ಶಾಲೆ ಮುಖ್ಯಗುರು ಟಿ.ಎನ್. ರೂಢಗಿ ಇತರರಿದ್ದರು.

    15 ದಿನ ಅಂಗಡಿ ಬಂದ್ ಮಾಡಿ
    ಜೀವ ಇದ್ದರೆ ದುಡಿದಿದ್ದು ಉಣ್ಣಲು ಸಾಧ್ಯ. ಅಂಗಡಿಕಾರರು ಸ್ವಯಂಪ್ರೇರಿತರಾಗಿ 15 ದಿನ ಬಂದ್ ಮಾಡಿ ಕರೊನಾ ನಿಗ್ರಹಕ್ಕೆ ಸಹಕರಿಸಬೇಕೆಂದು ವ್ಯಾಪಾರಸ್ಥರಲ್ಲಿ ಶಾಸಕರು ವಿನಂತಿಸಿದರು.

    14 ರಂದು ಪತ್ರಕರ್ತರಿಗೆ ವ್ಯಾಕ್ಸಿನ್
    ಕೋವಿಡ್ ್ರಂಟ್‌ಲೈನ್ ವಾರಿಯರ್ಸ್‌ಗಳಾಗಿರುವ ಪತ್ರಕರ್ತರಿಗೆ ಮೇ 14 ರಂದು ಬೆಳಗ್ಗೆ 10 ಗಂಟೆಗೆ ಕೆಬಿಎಂಪಿಎಸ್ ಶಾಲೆಯಲ್ಲಿನ ಕೇಂದ್ರದಲ್ಲಿ ಲಸಿಕೆ ಕೊಡಲಾಗುತ್ತದೆ. ಎಲ್ಲ ಪತ್ರಕರ್ತರು ಲಸಿಕೆ ಪಡೆದುಕೊಳ್ಳುವಂತೆ ಶಾಸಕ ನಡಹಳ್ಳಿ ಮನವಿ ಮಾಡಿದರು.

    23 ದಿನ ಕಾಲ ಟ್ರೀಟ್‌ಮೆಂಟ್ ತಗೋತಿದ್ದೇನೆ. ಇನ್ನು ಕಡಿಮೆಯಾಗಿಲ್ಲ. ಮಾತನಾಡಲೂ ಸರಿಯಾಗಿ ಆಗುತ್ತಿಲ್ಲ. ಇದು ಬಹಳ ಕೆಟ್ಟ ರೋಗ. ರೋಗ ಲಕ್ಷಣಗಳನ್ನು ಹೊಂದಿದ್ದವರು ಮೊದಲು ತಪಾಸಣೆ ಮಾಡಿಸಿಕೊಳ್ಳಬೇಕು. ನಿರ್ಲಕ್ಷೃ ಮಾಡಬೇಡಿ. ಆರಂಭಿಕ ಹಂತದಲ್ಲಿಯೇ ತಪಾಸಣೆ ಮಾಡಿಸಿಕೊಳ್ಳಬೇಕು. ಹುಂಬತನ ಬೇಡ. ಒಮ್ಮಿಂದೊಮ್ಮೆಲೆ ಎದೆ ಹಿಡಿಯುತ್ತದೆ. ಉಸಿರಾಟಕ್ಕೆ ತೊಂದರೆ ಆಗುತ್ತದೆ. ಎಚ್ಚರಿಕೆ ವಹಿಸಿ. ನನ್ನ ಸಹೋದರ ಇಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಸಿಟಿಸ್ಕಾೃನ್ ಸೌಲಭ್ಯವಿದ್ದು, ತಾಲೂಕಾಸ್ಪತ್ರೆಯಿಂದ ಶಿಾರಸು ಪತ್ರ ಪಡೆದುಕೊಂಡು ಹೋದರೆ ಜಿಲ್ಲಾಸ್ಪತ್ರೆಯಲ್ಲಿ ಉಚಿತವಾಗಿ ಸಿಟಿಸ್ಕಾೃನ್ ಮಾಡುತ್ತಾರೆ.
    ಎ.ಎಸ್. ಪಾಟೀಲ ನಡಹಳ್ಳಿ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts