More

    ಬಿಜೆಪಿ ಸರ್ಕಾರದ ಅವಧಿಯಲ್ಲಿ 600 ಕೋಟಿ ರೂ. ಮಂಜೂರು

    ಮುದ್ದೇಬಿಹಾಳ: ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರ ನಿರಂತರ ಪ್ರಯತ್ನದ ಲವಾಗಿ ಬೇರೆ ಬೇರೆ ಇಲಾಖೆಗಳೆಲ್ಲ ಸೇರಿ ಮುದ್ದೇಬಿಹಾಳ ಮತಕ್ಷೇತ್ರಕ್ಕೆ 600 ಕೋಟಿ ರೂ. ಅನುದಾನವನ್ನು ಯಡಿಯೂರಪ್ಪನವರ ಸರ್ಕಾರ ಬಿಡುಗಡೆ ಮಾಡಿದೆ ಎಂದು ಉಪ ಮುಖ್ಯಮಂತ್ರಿ, ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಹೇಳಿದರು.

    ಪಟ್ಟಣದಲ್ಲಿ ಭಾನುವಾರ ಲೋಕೋಪಯೋಗಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ವೃತ್ತದಿಂದ ಅಗಸಬಾಳ ಕ್ರಾಸ್‌ವರೆಗಿನ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ, ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನೆ, ಎಪಿಎಂಸಿ ಸಭಾಭವನ ಹಾಗೂ ಹುನಗುಂದ-ತಾಳಿಕೋಟೆ ರಸ್ತೆ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ಬಿಹಾರ್‌ದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಕಾರಣ ಶೇ.75 ರಷ್ಟು ಬಿಹಾರದಲ್ಲಿ ಹೆಣ್ಣುಮಕ್ಕಳು, ಯುವಕರು ಬಿಜೆಪಿಗೆ ಮತ ಚಲಾಯಿಸಿದ್ದಾರೆ. ಸಾಮಾಜಿಕ ನ್ಯಾಯ ಕೊಡುವ ಆಡಳಿತವನ್ನು ಪ್ರಧಾನಿ ಮೋದಿ, ಯಡಿಯೂರಪ್ಪ ಮಾಡುತ್ತಿದ್ದಾರೆ ಎಂದು ಹೇಳಿದರು.

    ಲೋಕೋಪಯೋಗಿ ಇಲಾಖೆಯ ಇಇ ಬಿ.ಬಿ. ಪಾಟೀಲ ಮಾತನಾಡಿ, ಡಿಸಿಎಂ ಕಾರಜೋಳ ಮುದ್ದೇಬಿಹಾಳ ಕ್ಷೇತ್ರಕ್ಕೆ 31 ಕೋಟಿ ರೂ. ಬಿಡುಗಡೆ ಮಾಡಿದ್ದು, ಇದರಲ್ಲಿ ರಾಜ್ಯ ಹೆದ್ದಾರಿ ಶಿರಾಡೋಣ ಲಿಂಗಸ್ಗೂರ ರಸ್ತೆ ಮುದ್ದೇಬಿಹಾಳದಿಂದ ಅಗಸಬಾಳ ಕ್ರಾಸ್‌ವರೆಗೆ 15.50ಕಿಮೀ ರಸ್ತೆ 2019-20,2020-21ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಹಾಳಾಗಿತ್ತು. ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಅಂಬೇಡ್ಕರ್ ವೃತ್ತದಿಂದ ಬಿದರಕುಂದಿ ಹಳ್ಳದವರೆಗಿನ 1.50 ಕಿಮೀ ರಸ್ತೆಯನ್ನು ಚತುಷ್ಪಥವಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಹಿರೇಮುರಾಳ, ನಾಗರಬೆಟ್ಟ ಬಳಿ ಕುಸಿದ ಸೇತುವೆ ದುರಸ್ತಿ ಮಾಡಲಾಗುತ್ತದೆ ಎಂದರು.

    ಅನುದಾನಕ್ಕೆ ಬೇಡಿಕೆ ಸಲ್ಲಿಸಿದ ಶಾಸಕ ನಡಹಳ್ಳಿ
    ಮುದ್ದೇಬಿಹಾಳದಲ್ಲಿ ಬಹುತೇಕ ಸರ್ಕಾರಿ ಇಲಾಖೆಯ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಪಟ್ಟಣದ ಹೃದಯ ಭಾಗವಾಗಿರುವ ಬಸವೇಶ್ವರ ವೃತ್ತ ಬಳಿ ಏಳೆಂಟು ಎಕರೆ ವಿಶಾಲವಾದ ಜಾಗೆ ಇದ್ದು, ಅಲ್ಲಿ ಸರ್ಕಾರಿ ಕಟ್ಟಡಗಳ ಸಮುಚ್ಛಯ ನಿರ್ಮಾಣಕ್ಕೆ 10 ಕೋಟಿ ರೂ. ಮಂಜೂರು ಮಾಡಲು ಡಿಸಿಎಂ ಕಾರಜೋಳರಿಗೆ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಬೇಡಿಕೆ ಮಂಡಿಸಿದರು.

    ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ಮತಕ್ಷೇತ್ರವನ್ನು ಮಾದರಿಯನ್ನಾಗಿ ಮಾಡುವುದು ನನ್ನ ಕನಸಾಗಿದೆ. ಅಂಬೇಡ್ಕರ್ ಭವನ, ಎಪಿಎಂಸಿ ಸಮುದಾಯ ಭವನ ನಿರ್ಮಾಣಕ್ಕೆ ಹಿಂದಿನ ಸರ್ಕಾರದಲ್ಲಿ ಕೇವಲ ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು. ಆದರೆ ಹಣವನ್ನು ತಂದಿದ್ದು ನಮ್ಮ ಸರ್ಕಾರದಲ್ಲಿ. ನಾನು ಯಾರನ್ನೂ ಟೀಕಿಸುವುದಿಲ್ಲ. ಆದರೆ, ಅಭಿವೃದ್ಧಿ ವಿಷಯ ಬಂದಾಗ ಯಾರನ್ನೂ ಬಿಡುವುದಿಲ್ಲ ಎಂದರು.

    ಕೃಷ್ಣಾ ತೀರದಲ್ಲಿ ತೊಂದರೆ ಎದುರಿಸುತ್ತಿರುವ ಎಸ್‌ಸಿ, ಎಸ್ಟಿ ಜನಾಂಗದವರಿಗೆ ಆಶ್ರಯ ಮನೆ ಕಟ್ಟಿಸಿಕೊಳ್ಳಲು ಹಣ ಬಿಡುಗಡೆ ಮಾಡುವುದಾಗಿ ಡಿಸಿಎಂ ತಿಳಿಸಿದ್ದಾರೆ. 66 ಕೋಟಿ ರೂ. ಪುನರ್ವಸತಿ ಕೇಂದ್ರಗಳ ಅಭಿವೃದ್ಧಿಗೆ ಕೊಡಿಸಿದ್ದಾರೆ. ಜಿಲ್ಲೆಗೆ ಜಲಧಾರೆ ಯೋಜನೆಯಡಿ 2000 ಕೋಟಿ ರೂ. ನೀಡಲು ಸರ್ಕಾರ ಅನುಮೋದನೆ ನೀಡಿದೆ. ಯುಕೆಪಿ ಮೂರನೇ ಹಂತದ ನೀರಾವರಿ ಯೋಜನೆಗಳಿಗೆ ಹತ್ತು ಸಾವಿರ ಕೋಟಿ ರೂ. ಘೋಷಣೆ ಮಾಡಿದ್ದಾರೆ. ಕಾರಜೋಳ ಅವರು ಕೇವಲ ದಲಿತ ಸಮುದಾಯಕ್ಕೆ ನಾಯಕರಲ್ಲ. ಆರೂವರೆ ಕೋಟಿ ಕನ್ನಡಿಗರ ಮೆಚ್ಚಿನ ನಾಯಕರು. ಯಡಿಯೂರಪ್ಪನವರ ನಂತರ ಪ್ರಭಾವಿ ನಾಯಕರು ಗೋವಿಂದ ಕಾರಜೋಳ ಅವರು ಎಂದು ಶಾಸಕ ನಡಹಳ್ಳಿ ಹೇಳಿದರು.

    ನಾನು ರಿಟೈರ್ಡ್‌ ಆದ್ರೂ ನಡಹಳ್ಳಿ ಮುಂದೆ ಮಂತ್ರಿ ಆಗುತ್ತಾರೆ
    ಮುದ್ದೇಬಿಹಾಳ ಮತಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಕೆಲಸಗಳನ್ನು ನಿಮ್ಮ ಶಾಸಕ ನಡಹಳ್ಳಿಯವರು ತಂದಾಗ ಸಿಎಂ, ನಾನು ಜೊತೆಗೆ ಇರುತ್ತೇವೆ. ಮುಂದಿನ ಸಲ ಗೆದ್ದು ಬರುವುದರ ಬಗ್ಗೆ ನೀವು(ಶಾಸಕ ನಡಹಳ್ಳಿ) ಅಂಜಬೇಡಿ. ನಾವು ರಿಟೈರ್ಡ್‌ ಆದರೂ ನೀವು ಸರ್ಕಾರದಲ್ಲಿ ಇರುತ್ತೀರಿ. ಮುಂದಿನ ಸಲ ಮಂತ್ರಿ ಆಗುತ್ತೀರಿ ಎಂದು ಕಾರಜೋಳ ಭವಿಷ್ಯ ನುಡಿದರು.

    ಕುಂಟೋಜಿ ಹಿರೇಮಠದ ಚನ್ನವೀರ ದೇವರು, ಜಿಲ್ಲಾಧಿಕಾರಿ ಪಿ. ಸುನೀಲಕುಮಾರ, ಜಿಪಂ ಸಿಇಒ ಗೋವಿಂದರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ಮುಖಂಡರಾದ ಶಾಂತಗೌಡ ಪಾಟೀಲ ನಡಹಳ್ಳಿ, ಗುತ್ತಿಗೆದಾರರಾದ ಎಸ್.ಎಚ್. ಪಾಟೀಲ(ಪಡಗಾನೂರ), ಎಸ್.ಎಂ. ಬಿರಾದಾರ(ನೀರಲಗಿ), ಎಸ್.ಎಸ್. ಆಲೂರ, ಮುಖಂಡರಾದ ಎಂ.ಎಸ್. ಪಾಟೀಲ, ನಿಂಗಪ್ಪಗೌಡ ಬಪ್ಪರಗಿ, ಜಿಪಂ ಮಾಜಿ ಸದಸ್ಯ ಹೇಮರಡ್ಡಿ ಮೇಟಿ, ಮಲಕೇಂದ್ರಗೌಡ ಪಾಟೀಲ, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಉಪಾಧ್ಯಕ್ಷೆ ಶಹಜಾದಬಿ ಹುಣಸಗಿ, ತಾಪಂ ಅಧ್ಯಕ್ಷರಾದ ಲಕ್ಷ್ಮಿಬಾಯಿ ಹವಾಲ್ದಾರ, ರಾಜುಗೌಡ ಕೋಳೂರ, ತಾಳಿಕೋಟೆ ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕೆಯುಸಿ ಬ್ಯಾಂಕ್ ನಿರ್ದೇಶಕ ಶರಣು ಬೂದಿಹಾಳಮಠ, ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಎಪಿಎಂಸಿ ಅಧ್ಯಕ್ಷ ರಾಮನಗೌಡ ಇಂಗಳಗಿ, ಜಿಪಂ ಸದಸ್ಯ ಬಸನಗೌಡ ವಣಕ್ಯಾಳ, ತಹಸೀಲ್ದಾರ್ ಜಿ.ಎಸ್. ಮಳಗಿ, ತಾಪಂ ಇಒ ಶಶಿಕಾಂತ ಶಿವಪೂರೆ ಮೊದಲಾದವರು ಇದ್ದರು.

    ಸಂಗಮೇಶ ಶಿವಣಗಿ ನಾಡಗೀತೆ ಹಾಡಿದರು. ಪರಶುರಾಮ ಪವಾರ ಸ್ವಾಗತಿಸಿದರು. ಗೋಪಾಲ ಹೂಗಾರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts