More

    ಆನ್‌ಲೈನ್‌ನಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭ

    ಮುದ್ದೇಬಿಹಾಳ: ಎಂಟು ತಿಂಗಳಿಂದ ಪಡಿತರ ಚೀಟಿಗೆ ಹೊಸದಾಗಿ ಸಲ್ಲಿಕೆಯಾಗುವ ಆನ್‌ಲೈನ್ ಅರ್ಜಿ ಸ್ಥಗಿತಗೊಂಡಿದ್ದು, ಬಡವರು, ಕೂಲಿ, ಕಾರ್ಮಿಕರು ಪರದಾಡುವಂತಾಗಿದೆ ಎಂದು ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಗುರುವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
    ಪಟ್ಟಣದ ಮಿನಿವಿಧಾನಸೌಧಕ್ಕೆ ಅಗಮಿಸಿದ ಸಂಘಟನೆ ಪದಾಧಿಕಾರಿಗಳು, ತಹಸೀಲ್ದಾರ್ ಜಿ.ಎಸ್.ಮಳಗಿ ಅವರಿಗೆ ಮನವಿ ಪತ್ರ ನೀಡಿದರು.
    ಸಂಘಟನೆ ಮುಖಂಡ ಹುಸೇನ್ ಮುಲ್ಲಾ ಮಾತನಾಡಿ, ಮತಕ್ಷೇತ್ರದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ಕರ್ನಾಟಕ ಆಹಾರ ಸರಬರಾಜು ನಿಗಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಸಮಸ್ಯೆ ಬಗ್ಗೆ ತ್ವರಿತವಾಗಿ ಸೂಕ್ತ ಕ್ರಮ ಕೈಗೊಂಡು ಕ್ಷೇತ್ರದ ಬಡವರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಒತ್ತಾಯಿಸಿದರು.
    ತಾಲೂಕು ಅಧ್ಯಕ್ಷ ಬಾಪುಗೌಡ ಪಾಟೀಲ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪರಶುರಾಮ ಸಿಂಧೆ, ಮುಖಂಡರಾದ ಶಿವಕುಮಾರ್ ಪಟ್ಟಣಶೆಟ್ಟಿ, ಕಾಸಿಂಸಾಬ್ ಗಂಗೂರ, ಅಪ್ಪಯ್ಯ ಬಂಡಿವಡ್ಡರ, ವೀರೇಶ ಬಿದರಕುಂದಿ, ಮಹಾಂತೇಶ ಹೆಬ್ಬಾಳ, ಗುರಪ್ಪ ಗೊಲ್ಲರ, ಬಸವರಾಜ ಬಿರಾದಾರ, ವೀರೇಶ ವಾಲೀಕಾರ, ಅಡಿವೆಪ್ಪ ಕೊಡಗಾನೂರ, ರಂಜಾನ್ ಬೋರಗಿ, ರವಿ ಚವಾಣ್, ವೀರೇಶ ಬಿರಾದಾರ, ಪರಶುರಾಮ ನರೂಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts