More

    ಸಾಮಾಜಿಕ ಕಾರ್ಯಗಳಿಗೆ ದಾನ ಮಾಡುವ ಪ್ರವೃತ್ತಿ ಹೆಚ್ಚಲಿ

    ಮುದ್ದೇಬಿಹಾಳ: ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಿಂದ ಸಮಾಜದಲ್ಲಿ ಸಾಮರಸ್ಯದ ಭಾವನೆ ಒಡಮೂಡುತ್ತಿದ್ದು ಇಂತಹ ಮಹತ್ತರ ಕಾರ್ಯಗಳಿಗೆ ದಾನ ಮಾಡುವ ಪ್ರವೃತ್ತಿ ಎಲ್ಲರಲ್ಲಿ ಹೆಚ್ಚಬೇಕೆಂದು ಹುನಗುಂದ-ಇಳಕಲ್ಲ ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕಿ ಗಿರಿಜಾ ಬಂಡಿ ಹೇಳಿದರು.
    ತಾಲೂಕಿನ ಶಿರೋಳ ಗ್ರಾಮದಲ್ಲಿ ಭಾನುವಾರ ದ್ಯಾಮಣ್ಣ ಮುತ್ಯಾ ಹಾಗೂ ಶಿವಮೂರ್ತಿ ಮುತ್ಯಾರ ಜಾತ್ರಾ ಮಹೋತ್ಸವ ಹಾಗೂ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಕರ್ಮವನ್ನೇ ಧರ್ಮವನ್ನಾಗಿಸಿ ಬದುಕು ನಡೆಸುತ್ತಿರುವ ಪುಟ್ಟ ಗ್ರಾಮ ಶಿರೋಳದ ಜನರ ಧಾರ್ಮಿಕ ಭಕ್ತಿ ಎಲ್ಲರಿಗೂ ಮಾದರಿಯಾದದು ಎಂದರು.

    ತುರುವಿಹಾಳ ಪುರವರ ಹಿರೇಮಠದ ಅಮರಗುಂಡ ಶ್ರೀಗಳು ಮಾತನಾಡಿ, ಕರೊನಾ ಸಂಕಷ್ಟದಲ್ಲೂ ಜನರಲ್ಲಿ ಭಕ್ತಿ ಕಡಿಮೆಯಾಗಿಲ್ಲ. ಹತ್ತು ವರ್ಷಗಳಿಂದ ಸಾಮೂಹಿಕ ವಿವಾಹಗಳನ್ನು ಸಂಘಟಿಸುತ್ತ ಬಂದಿರುವ ಶಿರೋಳ ದ್ಯಾಮಣ್ಣ ಮುತ್ಯಾ ಜಾತ್ರಾ ಕಮಿಟಿಯವರ ಕಾರ್ಯ ಶ್ಲಾಘನೀಯವಾದದು ಎಂದರು. ನಿಡಗುಂದಿ ರುದ್ರಮುನಿ ಶಿವಾಚಾರ್ಯರು, ಪಡೇಕನೂರ ದಾಸಹ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು.

    ಜಿಪಂ ಮಾಜಿ ಸದಸ್ಯ ನಿಂಗಪ್ಪಗೌಡ ಬಪ್ಪರಗಿ, ಮಲ್ಲಿಕಾರ್ಜುನ ಹಿರೇಮಠ, ದ್ಯಾಮಣ್ಣ ಮುತ್ಯಾನ ಆರಾಧಕರಾದ ನಂದನಗೌಡ ಪಾಟೀಲ, ಮುತ್ತಣ್ಣ ನಾವದಗಿ, ಅಧ್ಯಕ್ಷತೆ ವಹಿಸಿದ್ದ ಜಾತ್ರಾ ಕಮಿಟಿ ಅಧ್ಯಕ್ಷ ರಾಮಣ್ಣ ರಾಜನಾಳ, ಕುಂಟೋಜಿ ಬಳ್ಳಾರಿ ಶ್ರೀಗಳು, ಇಂದೂಧರಯ್ಯ ಹಿರೇಮಠ, ಎಪಿಎಂಸಿ ಉಪಾಧ್ಯಕ್ಷ ಹಣಮಂತ ನಾಯ್ಕಮಕ್ಕಳ, ಶಿವನಗೌಡ ಪಾಟೀಲ, ದಾನಿ ಸಂಗಪ್ಪ ಹುಲಗಬಾಳ, ಸಾಯಿ ಡ್ರೈವಿಂಗ್ ಸ್ಕೂಲ್‌ನ ಅರವಿಂದ ಯಳಮೇಲಿ, ಸುಶೀಲಾಬಾಯಿ ಶಿರೋಳಕರ, ಮಧುಮತಿ ಶಿರೋಳಕರ, ಶಿವಾನಂದ ಹೆಬ್ಬಾಳ, ಹಣಮಂತ ಹುಲಗಬಾಳ, ಸಿದ್ದಪ್ಪ ಕುರಿ, ಗಂಗಪ್ಪ ಹೆಬ್ಬಾಳ, ಅಮರಖೇಡ ಅಸ್ಕಿ ಮತ್ತಿತರರಿದ್ದರು. ಸಂಗಮೇಶ ಶಿವಣಗಿ ಸಂಗಡಿಗರು ಪ್ರಾರ್ಥಿಸಿದರು. ಯುವ ಮುಖಂಡ ರಮೇಶ ಬೆಲವಂತ್ರಕಂಠಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಪಾಲ ಹೂಗಾರ ನಿರೂಪಿಸಿ ವಂದಿಸಿದರು.

    ಕೊರೊನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಈ ಬಾರಿ ಜಾತ್ರೆಯನ್ನು ಸರಳವಾಗಿ ಆಚರಿಸಲಾಯಿತು. ಗ್ರಾಮದ ಗಂಗಸ್ಥಳದಿಂದ ದ್ಯಾಮಣ್ಣ ಮುತ್ಯಾನ ಕಟ್ಟೆಯವರೆಗೆ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ದ್ಯಾಮಣ್ಣ ಮುತ್ಯಾನ ಪಲ್ಲಕ್ಕಿಯನ್ನು ಹೊತ್ತುಕೊಂಡು ಮೆರವಣಿಗೆಯಲ್ಲಿ ಆಗಮಿಸಿದ್ದರು. ಈ ವರ್ಷ ಹತ್ತು ಜೋಡಿ ಸಾಮೂಹಿಕ ವಿವಾಹಗಳು ಜರುಗಿದವಾದರೂ ವೇದಿಕೆಯಲ್ಲಿ ಮದುವೆಯಾಗದೇ ದೇವರ ಕಟ್ಟೆಯ ಮುಂದೆಯೇ ಮಾಂಗಲ್ಯಧಾರಣೆ ಮಾಡಿದ ಬಳಿಕ ದ್ಯಾಮಣ್ಣ ಮುತ್ಯಾನ ದರ್ಶನ ಪಡೆದುಕೊಂಡ ನವವಧು ವರರು ಮರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts