More

    ವಿದ್ಯಾವಂತ ಮಕ್ಕಳು ಸಮಾಜಕ್ಕೆ ಬೆಳಕು

    ಮುದ್ದೇಬಿಹಾಳ: ಹಣ ನೀಡಿದರೆ ಕ್ಷಣಿಕ ತೃಪ್ತಿ ನೀಡುತ್ತೆ. ಅದೇ ದೇವರ ಪ್ರತಿರೂಪದಂತಿರುವ ಮಕ್ಕಳಿಗೆ ಅಕ್ಷರ ಬರೆಯಲು ಅವಕಾಶ ನೀಡುವ ನೋಟ್‌ಬುಕ್‌ಗಳನ್ನು ನೀಡಿದರೆ ಆ ಮಕ್ಕಳಿಗೆ ಪ್ರೇರಣೆ ಆಗಿ ಶಿಕ್ಷಣದತ್ತ ಆಸಕ್ತಿ ಹೆಚ್ಚಾಗಿ ವಿದ್ಯಾವಂತರಾಗುತ್ತಾರೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

    ತಾಲೂಕಿನ ಹುಲ್ಲೂರು ತಾಂಡಾದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ 180 ಮಕ್ಕಳಿಗೆ ನಡಹಳ್ಳಿ ಕುಟುಂಬದಿಂದ ಕೊಡಲಾಗುತ್ತಿರುವ ಉಚಿತ ನೋಟ್‌ಬುಕ್‌ಗಳನ್ನು ಶನಿವಾರ ವಿತರಿಸಿ ಅವರು ಮಾತನಾಡಿದರು.

    ವಿದ್ಯಾವಂತ ಮಕ್ಕಳು ತಮ್ಮ ಮನೆಗೆ ಮತ್ತು ಸಮಾಜಕ್ಕೆ ಬೆಳಕಾಗಬೇಕೆಂದು ತಿಳಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ತಾಪಂ ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ಬಿಜೆಪಿ ಮುಖಂಡ ರಾಜೇಂದ್ರಗೌಡ ರಾಯಗೊಂಡ, ಖೂಬಪ್ಪ ಚವ್ಹಾಣ್, ಸುಭಾಷ ನಾಯಕ, ಧನಪಾಲ್ ಚವ್ಹಾಣ್, ಸಂತೋಷ ಚವ್ಹಾಣ್, ಶಿವಾನಂದ ರಾಠೋಡ, ಶಿಕ್ಷಕಿ ಅನುಸೂಯ ಚೀರಲದಿನ್ನಿ, ಪಾಟೀಲ, ಮೀನಾಕ್ಷಿ ವಸದ, ಪಾಲಕರು ಇತರರಿದ್ದರು.

    ಶಿಕ್ಷಕ ಗುಂಡು ಚವ್ಹಾಣ್ ಸ್ವಾಗತಿಸಿದರು. ಶಿಕ್ಷಕ ವೀರೇಶ ಮಾಶೆಟ್ಟಿ ನಿರೂಪಿಸಿದರು. ಪ್ರವೀಣ ಬಸರಕೋಡ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts