More

    ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು

    ಮುದ್ದೇಬಿಹಾಳ: ಆರ್‌ಎಂಎಸ್‌ಎ ಶಾಲೆಗೆ ಪ್ರವೇಶ ಪರೀಕ್ಷೆ ಭಾನುವಾರ ಪಟ್ಟಣದ 7 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಿತು.
    ಪಟ್ಟಣದ ಎಂ.ಜಿ.ಎಂ.ಕೆ 1 * 2 ,ವಿಬಿಸಿ ಪ್ರೌಢಶಾಲೆ, ಜೆಸಿ ಪ್ರೌಢಶಾಲೆ, ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಕೆ.ಬಿ.ಎಂ.ಪಿ. ಶಾಲೆ ಹಾಗೂ ಜ್ಞಾನ ಭಾರತಿ ಪ್ರೌಢಶಾಲೆಯಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ನಿಗದಿಯಂತೆ ಬೆಳಗ್ಗೆ 10.30ಕ್ಕೆ ಆರಂಭಗೊಂಡ ಪರೀಕ್ಷೆಗಳು ಮಧ್ಯಾಹ್ನ 1 ಗಂಟೆಗೆ ಮುಕ್ತಾಯವಾದವು. ಒಟ್ಟು 1782 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, 985 ಬಾಲಕರು, 708 ಬಾಲಕಿಯರು ಸೇರಿ 1683 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ನೋಡಲ್ ಅಧಿಕಾರಿ ಎ.ಎಸ್.ಬಾಗವಾನ ಮಾಹಿತಿ ನೀಡಿದರು.
    ಪಟ್ಟಣದ ಕೆಬಿಎಂಪಿಎಸ್ ಶಾಲೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಾ ಕಲ್ಬುರ್ಗಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರಗಳಲ್ಲಿ ಅಗತ್ಯ ಬಿಗಿಭದ್ರತೆಯಂದಿಗೆ ಪರೀಕ್ಷೆ ನಡೆಸಲಾಗಿದೆ. ಕೆಲವು ಮಕ್ಕಳು ಮುಖಕ್ಕೆ ಮಾಸ್ಕ ಹಾಕಿಕೊಂಡೇ ಪರೀಕ್ಷೆಗೆ ಹಾಜರಾಗಿದ್ದರು ಎಂದು ಹೇಳಿದರು.
    ಪರೀಕ್ಷಾ ಕೇಂದ್ರದ ಅಧೀಕ್ಷಕ ಎಂ.ಎಸ್.ಕವಡಿಮಟ್ಟಿ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಎಸ್.ಬಿ.ಹೊಲ್ದೂರ, ಮುಖ್ಯಗುರುಮಾತೆ ಎನ್.ಬಿ.ತೆಗ್ಗಿನಮಠ, ಶಿಕ್ಷಣ ಸಂಯೋಜಕಿ ವಿಜಯಲಕ್ಷ್ಮಿ ಚಿಲ್ಲಾಳಶೆಟ್ಟರ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts