More

    ಸಾಂಪ್ರದಾಯಿಕ ಕೃಷಿ ಪದ್ಧತಿಗೆ ವೈಜ್ಞಾನಿಕ ಸ್ಪರ್ಶ ನೀಡಿ

    ಮುದ್ದೇಬಿಹಾಳ: ಅನಗತ್ಯ ಖರ್ಚು ಮತ್ತು ಹೂಡಿಕೆಗಳಿಂದ ಹೊರೆಯಾಗುತ್ತಿರುವ ಕೃಷಿ ಕ್ಷೇತ್ರದಲ್ಲಿ ವ್ಯವಸ್ಥಿತ ಯೋಜನೆಯನ್ನು ಅಳವಡಿಸಿಕೊಂಡಲ್ಲಿ ಗುಣಮಟ್ಟದ ಕೃಷಿ ಹುಟ್ಟುವಳಿ ಜೊತೆಗೆ ಅವುಗಳಿಗೆ ಸ್ಪರ್ಧಾತ್ಮಕ ಬೆಲೆಯನ್ನು ಪಡೆಯಲು ಸಾಧ್ಯವಾಗಲಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೇವಣೆಪ್ಪ ಮನಗೂಳಿ ಹೇಳಿದರು.

    ತಾಲೂಕಿನ ಹಡಲಗೇರಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಮಾರುತೇಶ್ವರ ಕಬ್ಬು ಬೆಳೆಗಾರರ ಆತ್ಮ ಗುಂಪಿನ ಪ್ರಥಮ ವಾರ್ಷಿಕೋತ್ಸವ ಹಾಗೂ ಅನ್ನಪೂರ್ಣೇಶ್ವರಿ ಮಹಿಳಾ ಆಹಾರ ಭದ್ರತಾ ಗುಂಪಿನ ಉದ್ಘಾಟನೆ ನಿಮಿತ್ತ ಕಬ್ಬು ಬೆಳೆಯಲ್ಲಿ ಅಧಿಕ ಉತ್ಪಾದನೆಯ ಸುಧಾರಿತ ಬೇಸಾಯ ಕ್ರಮಗಳು ಹಾಗೂ ಆಧುನಿಕ ತಾಂತ್ರಿಕತೆಗಳು ಎಂಬ ವಿಷಯದ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಕಿಸಾನ್ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
    ರಾಸಾಯನಿಕ ಬಳಸದೆ, ಕೀಟನಾಶಕ ಉಪಯೋಗಿಸದೆ, ಹೆಚ್ಚಿನ ಹೂಡಿಕೆ ಇಲ್ಲದೆ ಮಾಡಿಕೊಂಡು ಬರುತ್ತಿದ್ದ ನಮ್ಮ ಹಿರಿಯರ ಕೃಷಿ ಪದ್ಧತಿಯನ್ನು ಮುನ್ನೆಲೆಗೆ ತರಬೇಕಾಗಿದೆ. ಸಾಂಪ್ರದಾಯಿಕ ಕೃಷಿ ಪದ್ಧತಿಗೆ ವೈಜ್ಞಾನಿಕ ಸ್ಪರ್ಶ ನೀಡಲು ರೈತರು ಸಂಕಲ್ಪ ಮಾಡಬೇಕು ಎಂದರು.

    ಚಿಂತಕ ಅರವಿಂದ ಕೊಪ್ಪ ಮಾತನಾಡಿ, ಆಧುನಿಕ ಮೋಜಿನ ಜೀವನದಿಂದ ಹೊರಬಂದು ಕೃಷಿ ಬಗೆಗೆ ಅಪಾರ ನಂಬಿಕೆ, ತಾಳ್ಮೆ ಬೆಳೆಸಿಕೊಂಡು ಜಮೀನಿನ ಮಣ್ಣು, ಸುತ್ತಲಿನ ವಾತಾವರಣ ಹಾಗೂ ನಿಸರ್ಗದ ರೀತಿಗಳಿಗೆ ಹೊಂದಿಕೊಳ್ಳುವ ಬೆಳೆ ಪದ್ಧತಿಗಳನ್ನು ಅಳವಡಿಸಿಕೊಂಡಲ್ಲಿ ಮಾತ್ರ ಕೃಷಿಯಲ್ಲಿ ಸ್ವಾವಲಂಬಿ ಸುಸ್ಥಿರ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.

    ಸಂಕೇಶ್ವರದ ಕಬ್ಬು ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಸುನೀಲಕುಮಾರ ನೂಲಿ, ಗುರುಪಾದಪ್ಪ ಯಡವಣ್ಣವರ , ಫ್ಯೂಚರ್ ಬಯೋಟೆಕ್‌ನ ಮಾರುಕಟ್ಟೆ ಅಭಿವೃದ್ಧಿ ಅಧಿಕಾರಿ ಹಣಮಂತ ರೆಡ್ಡಿ, ಎ್ಎಂಸಿ ಕಂಪನಿಯ ವಲಯ ಪ್ರಬಂಧಕ ಮಲ್ಲಿಕಾರ್ಜುನ ಸಾರವಾಡ, ನಾಗೇಶ ಕೋಟೆ ಮಾತನಾಡಿದರು.
    ಸಿದ್ದಣ್ಣ ಹಡಲಗೇರಿ ಸ್ವಾಗತಿಸಿದರು. ಚನ್ನಬಸಪ್ಪ ಯಾಳವಾರ ಪರಿಚಯಿಸಿದರು. ಬಾಲಕೃಷ್ಣ ವರದಿ ಮಂಡಿಸಿದರು. ಶಿಕ್ಷಕ ಎಂ.ಎ ತಳ್ಳಿಕೇರಿ ನಿರೂಪಿಸಿದರು. ರಾಜೀವ ಕುಲಕರ್ಣಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts