More

    45 ವರ್ಷದ ಬಳಿಕ ಆಡಳಿತ ಮಂಡಳಿ ಬದಲು

    ಮುದ್ದೇಬಿಹಾಳ: ತಾಲೂಕಿನ ಬಸರಕೋಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸ್ಥಾಪನೆಯಾದಾಗಿನಿಂದ ಒಬ್ಬರ ಹಿಡಿತದಲ್ಲಿದ್ದ ಆಡಳಿತದ ಚುಕ್ಕಾಣಿ ಮೊದಲ ಬಾರಿಗೆ ಬೇರೆಯವರ ಕೈಗೆ ಸೇರುವ ಸಾಧ್ಯತೆ ಗೋಚರಿಸಿದೆ.
    ಸಂಘದ ಹನ್ನೆರಡು ಸ್ಥಾನಗಳಿಗೆ ಸೋಮವಾರ ಅವಿರೋಧ ಆಯ್ಕೆ ನಡೆದಿದ್ದು, ನಲವತ್ತೈದು ವರ್ಷಗಳಿಗೂ ಹೆಚ್ಚು ಕಾಲ ಒಬ್ಬರ ಹಿಡಿತದಲ್ಲಿದ್ದ ಪಿಕೆಪಿಎಸ್ ಆಡಳಿತ ಮಂಡಳಿ ಚುಕ್ಕಾಣಿ ಬೇರೆಯವರ ಪಾಲಾಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.
    ಬಸರಕೋಡ ಪಿಕೆಪಿಎಸ್ ವ್ಯಾಪ್ತಿಯಲ್ಲಿ ಬಸರಕೋಡ, ಗುಂಡಕರ್ಜಗಿ, ಸಿದ್ದಾಪುರ ಹಾಗೂ ಗುಡದಿನ್ನಿ ಹೀಗೆ ನಾಲ್ಕು ಹಳ್ಳಿಗಳು ಬರುತ್ತವೆ. ಐದು ಸಾಮಾನ್ಯ, ಎರಡು ಮಹಿಳಾ, ಹಿಂದುಳಿದ ವರ್ಗ ಅ, ಹಿಂದುಳಿದ ವರ್ಗ ಬ, ಎಸ್‌ಸಿ, ಎಸ್‌ಟಿ, ಬಿನ್ ಸಾಲಗಾರ ಕ್ಷೇತ್ರ ಹೀಗೆ ಹನ್ನೆರಡು ಸ್ಥಾನಗಳಿಗೆ ಆಯ್ಕೆ ನಡೆಸಬೇಕಿತ್ತು. ಸೋಮವಾರ ಹನ್ನೆರಡು ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸ್ವೀಕಾರವಾಗಿರುವುದರಿಂದ ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ ಎಂದು ಚುನಾವಣಾಧಿಕಾರಿ ಎಸ್.ಡಿ. ಮನಗೂಳಿ ಘೋಷಿಸಿದ್ದಾರೆ.

    ಅವಿರೋಧ ಆಯ್ಕೆಯಾದವರ ವಿವರ

    ಸಾಮಾನ್ಯ ಕ್ಷೇತ್ರದಿಂದ ಸಿಂಧುಬಲ್ಲಾಳ ಬಸವರಾಜ ನಾಡಗೌಡ, ಲಕ್ಕಪ್ಪ ರಾಯಪ್ಪ ಸೋಮನಾಳ, ಬಾಬು ಮಲಕಪ್ಪ ಸೂಳಿಭಾವಿ, ಹೇಮರಡ್ಡಿ ಬಸಪ್ಪ ಮೇಟಿ, ಬಸವರಾಜ ಭೀಮನಗೌಡ ಪಾಟೀಲ, ಮಹಿಳಾ ಕ್ಷೇತ್ರದಿಂದ ಪಾರ್ವತಿ ಅಂದಾನಯ್ಯ ಸಾಲಿಮಠ, ಸಿದ್ದಮ್ಮ ರಾಯನಗೌಡ ಬಿರಾದಾರ, ಹಿಂದುಳಿದ ಅ-ವರ್ಗದಿಂದ ಶಾಂತಪ್ಪ ದೇಸಾಯಪ್ಪ ಸಂಕನಾಳ, ಹಿಂದುಳಿದ-ಬ ವರ್ಗದಿಂದ ಸೋಮಪ್ಪ ನಿಂಗಪ್ಪ ಮೇಟಿ, ಎಸ್‌ಸಿ ವರ್ಗದಿಂದ ಯಲ್ಲಪ್ಪ ಊರ್ಫ್ ಮಲ್ಲಪ್ಪ ಮರೆಪ್ಪ ಚಲವಾದಿ, ಎಸ್‌ಟಿ ವರ್ಗದಿಂದ ಮಡಿವಾಳಪ್ಪ ಬಸಪ್ಪ ತಳವಾರ, ಬಿನ್ ಸಾಲಗಾರ ಕ್ಷೇತ್ರದಿಂದ ಸುನೀಲಕುಮಾರ ಬಸವಂತ್ರಾಯ ಸೂಳಿಭಾವಿ ಆಯ್ಕೆಯಾಗಿದ್ದಾರೆ.

    ಅಧ್ಯಕ್ಷ ಸ್ಥಾನಕ್ಕೆ ಮೇಟಿ ಆಯ್ಕೆ ಬಹುತೇಕ ಪಕ್ಕಾ

    ಜಿಪಂ ಮಾಜಿ ಸದಸ್ಯ ಹೇಮರಡ್ಡಿ ಮೇಟಿ ಈಗಾಗಲೇ ಬಸರಕೋಡ ಭಾಗದಲ್ಲಿ ಪ್ರಭಾವಿಗಳಾಗಿದ್ದು, ಅವರೇ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಪಕ್ಕಾ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts