More

    ಕೂಲಿ ಮೊತ್ತ ಹೆಚ್ಚಳಕ್ಕೆ ಹಮಾಲರ ಆಗ್ರಹ

    ಮುದಗಲ್: ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವಂತೆ ಕೂಲಿ ಮೊತ್ತ ಹೆಚ್ಚಿಸಬೇಕೆಂದು ಆಗ್ರಹಿಸಿ ಸ್ಥಳೀಯ ಹಮಾಲಿ ಕೂಲಿ ಕಾರ್ಮಿಕರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ನಾಡ ತಹಸೀಲ್ದಾರ್ ತುಳಜರಾಮ ಸಿಂಗ್‌ಗೆ ಸೋಮವಾರ ಮನವಿ ಸಲ್ಲಿಸಿದರು.

    ಶ್ರಮ ಜೀವಿಗಳಾಗಿರುವ ಹಮಾಲರಿಗೆ ಬಜಾರ್ ವ್ಯಾಪಾರಸ್ಥರು ಮತ್ತು ಎಪಿಎಂಸಿ ಯಲ್ಲಿ ಪ್ರತಿ ಚೀಲಕ್ಕೆ ಕಡಿಮೆ ಹಣ ನೀಡಲಾಗುತ್ತಿದೆ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ದಿನಸಿ ಮತ್ತು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಇವನ್ನು ಕೊಳ್ಳುವಷ್ಟೂ ಕೂಲಿ ಸಿಗುತ್ತಿಲ್ಲ.

    ಈ ಬಗ್ಗೆ ಹಲವು ಬಾರಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಮತ್ತು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಹಮಾಲರ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಅಮರಣಾಂತರ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ಜಿಲ್ಲಾಧ್ಯಕ್ಷ ಯಂಕಪ್ಪ ಕೆಂಗಲ್ ಎಚ್ಚರಿಸಿದರು.

    ಇದನ್ನು ಓದಿ: ಕದನ ಕಲಿಗಳಾದ ಕೂಲಿ ಸೈನಿಕರ ಕಥೆ

    ಪ್ರತಿಭಟನೆಯಲ್ಲಿ ಫೆಡರೇಷನ್ ಉಪಾಧ್ಯಕ್ಷ ತಿಪ್ಪಯ್ಯ, ಮರಿಸ್ವಾಮಿ, ಬಜಾರ ಹಮಾಲಿ ಕಾರ್ಮಿಕರ ಸಂಘ ಮುದಗಲ್ ಘಟಕದ ಅಧ್ಯಕ್ಷ ಮೈಬೂಬು ಹುಸೇನ್, ಎಪಿಎಂಸಿ ಹಮಾಲಿ ಸಂಘದ ಅಧ್ಯಕ್ಷ ದಾವಲಸಾಬ್, ಅಂಜಪ್ಪ, ಸಬ್ಜಲ್ಲಿ, ಕೃಷ್ಣಪ್ಪ,ಬಾಬಣ್ಣ, ರಾಜಕುಮಾರ, ಸೂರಜ್, ಬಸವರಾಜ, ಸದ್ದಾಂ ಹುಸೇನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts