More

    ಹೊಸಕೋಟೆಗೆ 25 ಕೋಟಿ ಅನುದಾನ: ಸಚಿವ ಎಂಟಿಬಿ ನಾಗರಾಜ್ ಮಾಹಿತಿ


    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ಹೊಸಕೋಟೆ ನಗರಸಭೆಗೆ ವಿಶೇಷ ಅನುದಾನದಡಿ 25 ಕೋಟಿ ರೂ. ನೀಡಿದ್ದು, ಎಲ್ಲ ವಾರ್ಡ್‌ಗಳಿಗೂ ಹಂಚಿಕೆ ಮಾಡಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ನಾನೇ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪಟ್ಟಿ ಸಿದ್ಧಪಡಿಸುತ್ತೇನೆ ಎಂದು ಪೌರಾಡಳಿತ ಹಾಗೂ ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
    ನಗರದ ನಿಸರ್ಗ ಬಡಾವಣೆಯಲ್ಲಿ ಭಾನುವಾರ ಶುದ್ಧ ಕುಡಿಯುವ ನೀರು ಸರಬರಾಜು ಕಾಮಗಾರಿ ಹಾಗೂ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಹಿಂದೆ ಈ ಬಡಾವಣೆ ಹೊಲಗದ್ದೆಯಾಗಿತ್ತು. ಇದನ್ನು ನಿವೇಶನಗಳನ್ನಾಗಿ ಹಂಚಿಕೆ ಮಾಡಲಾಯಿತು. ಇಂದು ಸಾವಿರಾರು ಜನ ಮನೆ ನಿರ್ಮಿಸಿಕೊಂಂಡಿದ್ದಾರೆ. ಈ ಬಡಾವಣೆಯಲ್ಲಿ ಮೂಲಸೌಕರ್ಯ ಕೊರತೆಯಾಗದಂತೆ ನಗರಸಭೆಯಿಂದ ಅನುಕೂಲ ಮಾಡಿಕೊಡಲಾಗಿದೆ ಎಂದರು.
    ಈ ಬಡಾವಣೆಯಲ್ಲಿ ಬಹುತೇಕ ಸರ್ಕಾರಿ ನೌಕರರು ವಾಸವಿದ್ದಾರೆ. ಇಲ್ಲಿ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುತ್ತಿದೆ ಎಂದರು. ಹೊಸಕೋಟೆ ನಗರಸಭೆ ಎಲ್ಲ ವಾರ್ಡ್‌ಗಳಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ಇದಕ್ಕಾಗಿ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆ ಮಾಡಿಸಲಾಗುತ್ತಿದೆ ಎಂದರು.

    ಮೌಲ್ಯಾಧಾರಿತ ರಾಜಕಾರಣ: ಜನಪ್ರತಿನಿಧಿಗಳು ಚುನಾವಣೆ ವೇಳೆಯಲ್ಲಷ್ಟೆ ರಾಜಕಾರಣ ಮಾಡಬೇಕು. ಆಮೇಲೆ ಏನಿದ್ದರೂ ಅಭಿವೃದ್ಧಿ ಮಂತ್ರ ಜಪಿಸಬೇಕು. ಸದಾ ಕಾಲ ರಾಜಕಾರಣ ಮಾಡುವುದರಿಂದ ಮತದಾನದ ಮಹತ್ವಕ್ಕೆ ಧಕ್ಕೆಯಾಗುತ್ತದೆ. ಯಾವಾಗಲು ಜನಪ್ರತಿನಿಧಿಯಾದವರು ಮೌಲ್ಯ ಆಧಾರಿತ ರಾಜಕಾರಣ ಮಾಡಬೇಕು ಎಂದು ಸಚಿವರು ಹೇಳಿದರು.

    ಸಚಿವರ ಸಹಕಾರದಿಂದ ಪ್ರಗತಿ: ಸಚಿವ ಎಂಟಿಬಿ ನಾಗರಾಜ್ ಅವರ ಸಹಕಾರ ಹಾಗೂ ಮಾರ್ಗದರ್ಶನದಿಂದ ಹೊಸಕೋಟೆ ನಗರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲೂ ಅಭಿವೃದ್ಧಿ ಕಾರ್ಯಕ್ರಮ ಚುರುಕು ಪಡೆದಿವೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿಯೇ ಹೊಸಕೋಟೆ ನಗರಸಭೆ ಮಾದರಿಯಾಗಲಿದೆ ಎಂದು ನಗರಸಭೆ ಅಧ್ಯಕ್ಷ ಡಿ.ಕೆ.ನಾಗರಾಜ್ ಹೇಳಿದರು.

    ಮಕ್ಕಳ ಪ್ರೀತಿಗೆ ಸಚಿವರು ಭಾವುಕ: ನಿಸರ್ಗ ಬಡಾವಣೆಯಲ್ಲಿ ಕಾಮಗಾರಿ ಉದ್ಘಾಟನೆಗೆ ಆಗಮಿಸಿದ ಸಚಿವರನ್ನು ಸ್ಥಳೀಯ ಮಕ್ಕಳು ಗುಲಾಬಿ ಹೂವು ನೀಡಿ ಸ್ವಾಗತಿಸಿದರು. ಸಚಿವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಈ ಕ್ಷಣದಲ್ಲಿ ಭಾವುಕರಾದ ಸಚಿವರು ಮಕ್ಕಳ ಮುಗ್ಧ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts