More

    ತಮ್ಮ ಹೊಸ ಚಿತ್ರ ನಿರ್ಮಾಣಕ್ಕೆ ಚೆನ್ನೈಗೆ ಬಂದ ‘ಕ್ಯಾಪ್ಟನ್​​ ಕೂಲ್’​​; ಹೂ ಸುರಿಸಿ ಸ್ವಾಗತಿಸಿದ ಅಭಿಮಾನಿಗಳು

    ಚೆನ್ನೈ: ಭಾರತೀಯ ಕ್ರಿಕೆಟ್​​ ಲೋಕ ಕಂಡ ಶ್ರೇಷ್ಠ ನಾಯಕ, ಚೆನ್ನೈ ಸೂಪರ್​​ ಕಿಂಗ್ಸ್​​ ತಂಡದ ಕ್ಯಾಪ್ಟನ್​​ ಮಹೇಂದ್ರ ಸಿಂಗ್​​ ಧೋನಿ ಅವರು ಇದೀಗ ಐಪಿಎಲ್​​ ಮುಗಿದರೂ ಚೆನ್ನೈಗೆ ಭೇಟಿ ನೀಡಿರುವುದು ಅವರ ಅಭಿಮಾನಿಗಳಲ್ಲಿ ಭಾರಿ ಸಂತಸ ಮೂಡಿಸಿದೆ.

    ಇದನ್ನೂ ಓದಿ: ಮಕ್ಕಳಿಗೆ ಅನುಕೂಲಕ್ಕಾಗಿ ಹಾಸ್ಟೆಲ್ ಪ್ರಾರಂಭ: ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಪ್ರಸಾದ್‌ಬಾಬು ಹೇಳಿಕೆ

    ‘ಧೋನಿ ಎಂಟರ್​​​ಟೈನ್​​ಮೆಂಟ್ಸ್’ ಬ್ಯಾನರ್​​ನಲ್ಲಿ ತಮ್ಮ ಮೊದಲ ಚಿತ್ರ ‘ಲೆಟ್ಸ್ ಗೆಟ್ ಮ್ಯಾರೀಡ್’ ಸಿನಿಮಾದ ನಿರ್ಮಾಣ ಕೆಲಸವನ್ನು ಈಡೇರಿಸಲು ಎಂ.ಎಸ್. ಧೋನಿ ಇದೀಗ ರಾಂಚಿಯಿಂದ ಚೆನ್ನೈಗೆ ಬಂದಿದ್ದಾರೆ. ಕ್ಯಾಪ್ಟನ್​​ ಕೂಲ್​​ ಅವರ ಮೊದಲ ಚಿತ್ರದಲ್ಲಿ ಹರೀಶ್ ಕಲ್ಯಾಣ್ ಮತ್ತು ಇವಾನಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಈ ಸಿನಿಮಾವನ್ನು ರಮೇಶ್ ತಮಿಳ್ಮಣಿ ನಿರ್ದೇಶನ ಮಾಡಿದ್ದಾರೆ.

    2023ರ ಐಪಿಎಲ್​​ ಚಾಂಪಿಯನ್ಸ್​​ ಪಟ್ಟವೇರಿದ ನಂತರ ಮಹೇಂದ್ರ ಸಿಂಗ್​​ ಧೋನಿ ಅವರು ತಮ್ಮ ಪತ್ನಿ ಸಾಕ್ಷಿ ಸಿಂಗ್​ ಅವರೊಡನೆ ಇದೀಗ ಚೆನ್ನೈಗೆ ಭೇಟಿ ನೀಡಿರುವುದು ಅವರ ಅಭಿಮಾನಿಗಳಿಗೆ ಅಶ್ಚರ್ಯ ಜತೆಗೆ ಖುಷಿಯನ್ನು ತಂದಿದೆ. ಧೋನಿ ಎಂಟರ್‌ಟೈನ್‌ಮೆಂಟ್ಸ್​​​​ ನಿರ್ಮಾಣದ ಮೊದಲ ಚಿತ್ರ ‘ಲೆಟ್ಸ್ ಗೆಟ್ ಮ್ಯಾರೀಡ್’ನ ಆಡಿಯೋ ಮತ್ತು ಟ್ರೇಲರ್ ಅನ್ನು ಶೀಘ್ರವೇ ಬಿಡುಗಡೆಗೊಳ್ಳಲಿದೆ.

    ಇದನ್ನೂ ಓದಿ: ಸ್ವಾವಲಂಬಿ ಬದುಕಿಗೆ ತರಬೇತಿ ಸಹಕಾರಿ: ಸಂಪನ್ಮೂಲ ವ್ಯಕ್ತಿ ಸೂರ್ಯಪ್ರಕಾಶ್ ಅಭಿಮತ

    ಚಿತ್ರದ ಟ್ರೇಲರ್ ಮೇಲೆ ಧೋನಿ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ವ್ಯಕ್ತಪಡಿಸಿದ್ದು, ಸಿನಿಮಾದ ಫಸ್ಟ್​​ ಸಿಂಗಲ್​​ಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ದೊರತಿದೆ. ಚಿತ್ರದಲ್ಲಿ ನದಿಯಾ, ಯೋಗಿ ಬಾಬು, ಮಿರ್ಚಿ ವಿಜಯ್ ಸೇರಿದಂತೆ ದೊಡ್ಡ ತಾರಾ ಬಳಗವೇ ಈ ಚಿತ್ರದಲ್ಲಿದೆ,(ಏಜೆನ್ಸೀಸ್).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts