More

    ನಾನು ತುರ್ತು ಪರಿಸ್ಥಿತಿಯಲ್ಲಿದ್ದೀನಿ, ತಕ್ಷಣವೇ 600 ರೂ. ಫೋನ್​ ಪೇ ಮಾಡಿ; ಧೋನಿ ಹೆಸರಲ್ಲಿ ಬಂತು ಈ ಮನವಿ!

    ರಾಂಚಿ: ಕ್ರಿಕೆಟ್ ಲೋಕದ ದಿಗ್ಗಜ, ಟೀಂ ಇಂಡಿಯಾದ ಶ್ರೇಷ್ಠ ನಾಯಕ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಹೆಸರು ಕೇಳಿದೊಡನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಅದೇನೋ ರೋಮಾಂಚನ. ಅದಕ್ಕೆ ಕಾರಣ, ಭಾರತ ತಂಡಕ್ಕೆ ಧೋನಿ ಅವರ ಅಪಾರ ಕೊಡುಗೆ ಹಾಗೂ ಕ್ರೀಡಾಸ್ಪೂರ್ತಿ. ಧೋನಿ ಎಂದರೆ ಒಂದು ಭಾವನೆ ಎನ್ನುವ ಅಪಾರ ಸಂಖ್ಯೆಯ ಫ್ಯಾನ್ಸ್​ಗಳಿಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುದ್ದಿ ಕೇಳಿ ಭಾರೀ ಅಚ್ಚರಿ ಉಂಟಾಗಿದೆ.

    ಇದನ್ನೂ ಓದಿ: ಜೆಇಇ ಮೇನ್‌ ಫಲಿತಾಂಶ ಪ್ರಕಟ..56 ಅಭ್ಯರ್ಥಿಗಳಿಗೆ ಶೇ.100 ಅಂಕ!

    ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಡಿಜಿಟಲ್ ಯುಗದಲ್ಲಿ ಆನ್‌ಲೈನ್ ವಂಚನೆಗಳು ಅತಿರೇಕವಾಗಿವೆ. ನಿಮ್ಮ ಹಣ ಲಪಟಾಯಿಸಲು ಯಾವುದಾದರೂ ರೂಪದಲ್ಲಿ ಸಂಚು ಹೂಡುವುದು ಅಥವಾ ನಿಮ್ಮ ನೆಚ್ಚಿನ ಸಿನಿಮಾ ತಾರೆಯರು, ಇಲ್ಲವಾದರೆ ಕ್ರಿಕೆಟಿಗರ ಹೆಸರನ್ನು ಅಧಿಕೃತ ಎಂಬಂತೆ ಬಳಸಿಕೊಂಡು ಮೋಸ ಮಾಡುತ್ತಾರೆ. ಇದು ಈ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಇಂತಹ ಅನೇಕ ಪ್ರಕರಣಗಳನ್ನು ನಾವೆಲ್ಲಾ ಗಮನಿಸಿದ್ದೇವೆ. ಆದರೆ, ಈ ಸಂಕಷ್ಟ ಈಗ ಧೋನಿಗೂ ಎದುರಾಗಿರುವುದು ಅಭಿಮಾನಿಗಳಿಗೆ ಭಾರೀ ಶಾಕಿಂಗ್ ಆಗಿದೆ.

    ಇಲ್ಲೊಬ್ಬ ವ್ಯಕ್ತಿ, ಮಹೇಂದ್ರ ಸಿಂಗ್ ಧೋನಿ ಅವರ ಹೆಸರಿನಲ್ಲಿ ವಂಚನೆಗೆ ಕೈಹಾಕಿದ್ದು, ತಾನೇ ಧೋನಿ ಎಂಬಂತೆ ಬಿಂಬಿಸಿ, ತುರ್ತು ಪರಿಸ್ಥಿತಿಯಲ್ಲಿದ್ದೇನೆ. ಹೀಗಾಗಿ ನಿಮಗೆ ವೈಯಕ್ತಿಕವಾಗಿ ಸಂದೇಶ ಕಳುಹಿಸುತ್ತಿದ್ದೇನೆ. ನಾನೇ ರಿಯಲ್ ಮಹೇಂದ್ರ ಸಿಂಗ್ ಧೋನಿ ಎಂದು ಸಾಬೀತಪಡಿಸಲು ಸೆಲ್ಫಿ ಕೂಡ ಕಳಿಸಿದ್ದೇನೆ ಎಂದು 600 ರೂ. ಹಣವನ್ನು ಫೋನ್ ಪೇ ಮಾಡಿ ಎಂಬ ಸಂದೇಶ ರವಾನಿಸಿದ್ದಾನೆ.

    ಇದನ್ನೂ ಓದಿ: ಬೇಸಿಗೆಯಲ್ಲಿ ಹೊರಗೆ ಸುತ್ತಾಡಿ ಮನೆಗೆ ಬಂದ ತಕ್ಷಣ ಸ್ನಾನ ಮಾಡುವ ಅಭ್ಯಾಸ ಇದ್ಯಾ? ಈ ವಿಷಯಗಳನ್ನು ತಿಳಿದುಕೊಳ್ಳಿ…

    ಇನ್​ಸ್ಟಾಗ್ರಾಮ್​ನಲ್ಲಿ ಇಂತಹ ಸಂದೇಶದ ಕಳುಹಿಸಿದ ವಂಚಕ, “ಹಾಯ್ ನಾನು ಎಂ.ಎಸ್. ಧೋನಿ, ನಾನು ನಿಮಗೆ ಖಾಸಗಿ ಖಾತೆಯಿಂದ ಸಂದೇಶ ಕಳುಹಿಸುತ್ತಿದ್ದೇನೆ. ನಾನು ರಾಂಚಿ ಹೊರವಲಯದಲ್ಲಿದ್ದೇನೆ ಮತ್ತು ವ್ಯಾಲೆಟ್ ಮರೆತು ಬಂದಿದ್ದೇನೆ. ನನಗೆ ತುರ್ತಾಗಿ 600 ರೂ. ಫೋನ್ ಪೇ ಮಾಡಿ, ಇದರಿಂದ ನಾನು ಬಸ್‌ನಲ್ಲಿ ವಾಪಾಸ್​ ಮನೆಗೆ ಹಿಂತಿರುಗಲು ಸಹಾಯವಾಗುತ್ತದೆ” ಎಂದು ತಿಳಿಸಿದ್ದಾನೆ.

    ಈ ವಂಚನೆಯ ಸಂದೇಶ ಕಳುಹಿಸಿದ ನಕಲಿ ಧೋನಿ ವಿರುದ್ಧ ವ್ಯಕ್ತಿಯೊಬ್ಬರು ದೂರು ನೀಡಿದ್ದು, ಇದರ ಸ್ಕ್ರೀನ್​ಶಾಟ್​ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಇದನ್ನು ನೋಡಿದ ಮಾಹಿ ಅಭಿಮಾನಿಗಳು ಧೋನಿ ಹೆಸರಿನಲ್ಲಿ ವಂಚನೆ ಮಾಡಲು ಮುಂದಾದ ಆರೋಪಿ ವಿರುದ್ಧ ಅಂತರ್ಜಾಲದಲ್ಲಿ ಕಿಡಿಕಾರಿದ್ದಾರೆ,(ಏಜೆನ್ಸೀಸ್).

    ನಿಮಗೆ ಏನೂ ಗೊತ್ತಿಲ್ಲ… RCB ಪ್ಲೇಆಫ್ ಕನಸು ಇನ್ನೂ ಜೀವಂತ: ವಿಲ್​ ಜ್ಯಾಕ್ಸ್​ ಬಿಚ್ಚಿಟ್ರು ಶಾಕಿಂಗ್ ಸಂಗತಿ

    4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts