More

    ಸಮಾಜದ ಸಮಗ್ರತೆಗೆ ಲಿಂ.ಸಂಗನಬಸವ ಸ್ವಾಮೀಜಿ ಗಟ್ಟಿ ನಿಲುವು

    ಉಜ್ಜೈನಿ ಜ.ಸಿದ್ಧಲಿಂಗ ರಾಜದೇಶಿ ಕೇಂದ್ರರು ಅಭಿಮತ

    ಹೊಸಪೇಟೆ: ವೀರಶೈವ ಲಿಂಗಾಯತ ಪ್ರತ್ಯೇಕಿಸುವ ಕೂಗು ಕೇಳಿ ಬಂದಾಗ ಎಲ್ಲರೂ ಒಂದೇ ಎಂಬ ಗಟ್ಟಿಯಾದ ದ್ವನಿ ಎತ್ತಿದವರಲ್ಲಿ ಲಿಂ.ಡಾ.ಸಂಗನಬಸವ ಸ್ವಾಮೀಜಿ ಮೊದಲಿಗರು ಎಂದು ಉಜ್ಜೈನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿ ಕೇಂದ್ರರು ಅಭಿಪ್ರಾಯಪಟ್ಟರು.

    ಲಿಂ.ಜಗದ್ಗುರು ಡಾ.ಸಂಗನಬಸವ ಶ್ರೀ ಗಳ ಪಟ್ಟಾಧಿಕಾರದ ೫೦ನೇ ವರ್ಷಾಚರಣೆ ಅಂಗವಾಗಿ ನಗರದ ಕೊಟ್ಟೂರು ಸ್ವಾಮಿ ಮಠದ ಆವರಣದ ಲ್ಲಿ ಮಂಗಳವಾರ ಏರ್ಪಡಿಸಿದ್ದ ೨ನೇ ದಿನದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ಸಂಗನಬಸವ ಶ್ರೀಗಳದ್ದು ಸಮಗ್ರ ಸಮಾಜದ ದೂರದೃಷ್ಟಿಯ ಕಲ್ಪನೆಯನ್ನು ಹೊಂದಿದ್ದರು. ಸಮಾಜ ಒಡೆಯುಲು ಬಯಸಿದ್ದ ಕೆಟ್ಟ ಜನರಿಗೂ ಸೂಕ್ತ ಉತ್ತರ ನೀಡಿದ್ದರು. ಆ ಕಾಲದಲ್ಲಿ ನಡೆದ ವೀರಶೈವ ಮಹಾಸಭಾ ಚುನಾವಣೆಯಲ್ಲೂ ವೀರಶೈವ ಲಿಂಗಾಯಿತರು ಒಂದೇ ಭಾವನೆಯಿದ್ದ ವರು ಮಾತ್ರ ಹಕ್ಕು ಚಲಾಯಿಸಬೇಕು ಎಂಬ ಗಂಭೀರ ಸಂದೇಶ ಸಾರಿದ್ದರು. ಬೆಂಗಳೂರು, ವಿಜಯಪುರ ಮತ್ತಿತರೆಡೆ ಧರ್ಮ ಜಾಗೃತಿ ಸಭೆ ನಡೆಸಿದ್ದರು. ವಿಜಯನಗರ ಜಿಲ್ಲೆ ರಚನೆ ಸಂದರ್ಭದಲ್ಲೂ ಶ್ರೀಗಳು ವಹಿಸಿದ್ದ ಪಾತ್ರವನ್ನು ಎಂದೂ ಮರೆಯಲಾಗದು ಎಂದು ಸ್ಮರಿಸಿದರು.

    ಇದೇ ವೇಳೆ ಶ್ರೀ ಮಠದೊಂದಿಗಿನ ತಮ್ಮ ಬಾಂಧವ್ಯವನ್ನ ಮೆಲುಕು ಹಾಕಿದ ಶ್ರೀಗಳು, ಉಜ್ಜೈನಿ ಮಠವು ಸದಾ ಕೊಟ್ಟೂರು ಸ್ವಾಮಿ ಮಠ ಬೆಂಬಲಕ್ಕೆ ಇರುತ್ತೇವೆ ಎಂಬ ಅಭಯ ನೀಡಿದರು.

    ಜಿಲ್ಲೆಯ ಸಂಪನ್ಮೂಲಗಳ ಕುರಿತು ಉಪನ್ಯಾಸ ನೀಡಿದ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತೆ ಯಶೋಧಾ, ದೇಶದ ಒಟ್ಟು ಖನಿಜ ಸಂಪತ್ತಿನ ಶೆ.೨೫ ರಷ್ಟು ಬಳ್ಳಾರಿಯಲ್ಲಿದೆ. ತುಂಗಭದ್ರಾ ಜಲಾಶಯದಿಂದಾಗಿ ಶೇ.೬೬ ರಷ್ಟು ಕೃಷಿ ಭೂಮಿ ನೀರಾವರಿಗೆ ಒಳಪಟ್ಟಿದೆ. ನೈಸರ್ಗಿಕ ಗಣಿ ಸಂಪನ್ಮೂಲಗಳಿAದಾಗಿ ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳ ತಲೆ ಎತ್ತಿದ್ದು, ಲಕ್ಷಾಂತರ ಜನ ನಿರು ದ್ಯೋಗಿಗಳಿಗೆ ಕೆಲಸ ನೀಡಿವೆ. ವಿಶ್ವ ವಿಖ್ಯಾತ ಹಂಪಿಯಿAದಾಗಿ ಈ ಭಾಗದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಿವೆ. ಇದರ ಹೊರತಾಗಿಯು ಶೈಕ್ಷಣಿಕ, ಆರೋಗ್ಯ, ಅರಣ್ಯವನ್ನು ಅಭಿವೃದ್ಧಿಗೊಳಿಸಬೇಕು ಎಂದು ಅಭಿಪ್ರಾಯ ಪಟ್ಟರು.

    ಸಂತೆಕೆಲ್ಲೂರು ಘನಮಠೇಶ್ವರಮಠದ ಶ್ರೀ ಗುರುಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಮುರುಗೋಡ ದುರುದುಂಡೇಶ್ವರ ಮಠದ ಶ್ರೀ ನೀಲಕಂಠ ಸ್ವಾಮೀಜಿ, ಅಳಂದ ಮಹಾಂತೇಶ್ವರ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಕೊಟ್ಟೂರು ಸ್ವಾಮಿ ಮಠದ ಶ್ರೀ ಕೊಟ್ಟೂರು ಬಸವಲಿಂಗ ಸ್ವಾಮೀಜಿ, ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತೆ ಯಶೋಧಾ ವೇದಿಕೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts