More

    ಸ್ಥಳೀಯರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ: ಹೆದ್ದಾರಿ ಕಾಮಗಾರಿ ಬಗ್ಗೆ ಸಂಸದೆ ಸುಮಲತಾ ಅಂಬರೀಷ್ ಅಸಮಾಧಾನ

    ಮಂಡ್ಯ: ಕೆ.ಆರ್​.ಎಸ್​. ಡ್ಯಾಂ ಹತ್ತಿರ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದನಿ ಎತ್ತುತ್ತಾ ಬಂದಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಷ್​​, ಇದೀಗ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಸಂದರ್ಭದಲ್ಲಿ ಸ್ಥಳೀಯರ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇಂದು ಮಂಡ್ಯದಲ್ಲಿ ದಿಶಾ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಸ್ಥಳೀಯರಿಗೆ ಸೂಕ್ತ ಪರ್ಯಾಯಗಳನ್ನು ನೀಡದೆ ಹೆದ್ದಾರಿ ಕಾಮಗಾರಿ ಮಾಡುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಪ್ರಶ್ನಿಸಿದಾಗಲೆಲ್ಲಾ ಬರೀ ಭರವಸೆ ಕೊಟ್ಟುಕೊಂಡು ಬರುತ್ತಿದ್ದಾರೆ. ಸ್ಥಳೀಯರ ವಿರೋಧದ ನಡುವೆ ಕಾಮಗಾರಿ ಮಾಡಲು ಸಾಧ್ಯವಿಲ್ಲ ಎಂದರು.

    ಇದನ್ನೂ ಓದಿ: ಸೌದಿಯಲ್ಲಿ ಬಂಧಿಯಾಗಿದ್ದ ಹರೀಶ್ ಬಂಗೇರ ತಾಯ್ನಾಡಿಗೆ ಆಗಮನ

    ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸೈಂಟಿಫಿಕ್ ಆಗಿ ಆಗ್ತಿಲ್ಲ. ಆಕ್ಸಿಸ್ ರೋಡ್ ಇಲ್ಲ, ಎಕ್ಸಿಟ್ ರೋಡ್ ಕೊಟ್ಟಿಲ್ಲ, ಸರ್ವಿಸ್ ರೋಡ್ ಕೊಟ್ಟಿಲ್ಲ‌. ರಸ್ತೆಯ ಎತ್ತರದಲ್ಲಿ ವ್ಯತ್ಯಾಸ ಇದೆ. ಸ್ಥಳೀಯ ಜನರು ಈ ಬಗ್ಗೆ ಗಮನಕ್ಕೆ ತಂದಿದಾರೆ. ನಿರಂತರವಾಗಿ ದಿಶಾ ಸಭೆಗಳಲ್ಲಿ ಹೇಳುತ್ತಾ ಬಂದಿದೀನಿ. ಈ ಹಿಂದೆ ಸ್ಥಳ ವೀಕ್ಷಣೆ ಮಾಡಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೂ ತರಲಾಗಿದೆ. ಆದರೆ ಸರಿಯಾದ ಪ್ರತಿಕ್ರಿಯೆ ಸಿಗ್ತಾ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ನಾನು ಸ್ಥಳೀಯರ ಪರ ನಿಂತು ಹೋರಾಟ ಮಾಡುತ್ತೇನೆ ಎಂದು ಭರವಸೆ ನೀಡಿದೀನಿ. ಆದರೆ ಇದನ್ನು ಹೆದ್ದಾರಿ ಕಾಮಗಾರಿಗೆ ಮಂಡ್ಯ ಸಂಸದೆ ತಡೆ ಮಾಡ್ತಾರೆ ಅಂತ ಬಿಂಬಿಸಲಾಗುತ್ತೆ. ಸ್ಥಳೀಯರ ಸಮಸ್ಯೆಗೆ ಸ್ಪಂದಿಸದೆ ಯಾವ ಯೋಜನೆಯನ್ನೂ ಮುಂದುವರಿಸಿಕೊಂಡು ಹೋಗಕ್ಕಾಗಲ್ಲ. ಸಮಸ್ಯೆಗಳನ್ನು ಪರಿಗಣಿಸಿ ಏನು ಪರ್ಯಾಯ ವ್ಯವಸ್ಥೆ ಕೊಡುತ್ತಾರೆ ಎನ್ನೋದನ್ನು ಹೇಳಬೇಕಾಗಿದೆ. ಸ್ಥಳೀಯರಿಗೆ ತೊಂದರೆ ಆಗದಂತೆ ಕಾಮಗಾರಿ ಮಾಡಬೇಕು ಎಂದು ಸುಮಲತಾ ಅಂಬರೀಷ್​ ಹೇಳಿದರು.

    ಕರ್ನಾಟಕದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿಗೆ ಮೊದಲ ಮಹಿಳಾ ಸಿಜೆಐ ಆಗುವ ಅವಕಾಶ 

    ಡಯಾಬಿಟೀಸ್​ ನಿಯಂತ್ರಣಕ್ಕೆ ಸಹಕಾರಿ ಈ ಯೋಗಾಸನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts