More

    ಶಿಲಾಶಾಸನಗಳ ಮ್ಯೂಸಿಯಂ ಉತ್ತಮ ಚಿಂತನೆ; ಸಂಸದ ಸಂಗಣ್ಣ ಕರಡಿ ಶ್ಲಾಘನೆ

    ಕನಕಗಿರಿ: ಐತಿಹಾಸಿಕ ಹಿನ್ನೆಲೆಯಿರುವ ತಾಲೂಕಿನ ಕಲಿಕೇರಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಉದ್ದೇಶಿತ ಹೆರಿಟೇಜ್ ವಿಲೇಜ್ ಸ್ಥಳಕ್ಕೆ ಸೋಮವಾರ ಸಂಸದ ಸಂಗಣ್ಣ ಕರಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಕಲಿಕೇರಿ ಗ್ರಾಮದ ಮೂರು ಎಕರೆ ಜಮೀನಿನಲ್ಲಿ ಹೆರಿಟೇಜ್ ವಿಲೇಜ್ ಮೂಲಕ ಶಿಲಾಶಾಸನಗಳ ಮ್ಯೂಸಿಯಂ ನಿರ್ಮಾಣಕ್ಕೆ ಚಿಂತನೆ ನಡೆಸಿರುವುದು ಖುಷಿಯ ಸಂಗತಿ. ಐತಿಹಾಸಿಕ ಸ್ಮಾರಕಗಳು, ಅದರ ಅವಶೇಷಗಳು, ಶಾಸನಗಳಿಗೆ ಸೂಕ್ತ ರಕ್ಷಣೆ ಇಲ್ಲದೇ ನಶಿಸಿ ಹೋಗುತ್ತಿವೆ. ಕನಕಗಿರಿ ತಾಲೂಕು ಇತಿಹಾಸಕ್ಕೆ ಹೆಸರು ವಾಸಿಯಾಗಿದೆ. ಇಂತಹ ಐತಿಹಾಸಿಕ ಕುರುಹಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ನಮ್ಮೆಲ್ಲರ ಜವಾಬ್ದಾರಿ. ಪ್ರಾಚೀನ ವಸ್ತು ಸಂಗ್ರಹಾಲಯ ನಿರ್ಮಾಣ ಒಳ್ಳೆಯ ಪ್ರಯತ್ನ ಎಂದು ಸಂಗಣ್ಣ ಕರಡಿ ಹೇಳಿದರು.

    ಗ್ರಾಮದಲ್ಲಿನ ವೀರಗಲ್ಲುಗಳು ಹಾಗೂ ಸ್ಮಾರಕಗಳ ಅವಶೇಷಗಳ ಕುರಿತು ಮಾಹಿತಿ ಪಡೆದುಕೊಂಡರು. ನಂತರ ಕಲಿಕೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಟಿ, ನರೇಗಾದಡಿ ಅನುಷ್ಠಾನಗೊಂಡ ಮೈದಾನ, ಶೌಚಗೃಹ, ಅಡುಗೆ ಕೋಣೆ, ಕಾಂಪೌಂಡ್, ಪೌಷ್ಟಿಕ ತೋಟ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

    ತಹಸೀಲಾರ್ ಸಂಜಯ್ ಕಾಂಬ್ಳೆ, ತಾಪಂ ಇಒ ಚಂದ್ರಶೇಖರ ಕಂದಕೂರು, ಪಿಡಿಒ ಸಂಶೀರ್ ಅಲಿ, ಪ್ರಮುಖರಾದ ಮಹಾಂತೇಶ ಸಜ್ಜನ್, ರಾಘವೇಂದ್ರ ಉಳ್ಳಾಗಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts