More

    ಮೊಬೈಲ್​ ವಿಡಿಯೋ ನೋಡುತ್ತಾ ಭಗತ್​ ಸಿಂಗ್​ ಅನುಸರಿಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಬಾಲಕ

    ಭೋಪಾಲ್​: ಆತಂಕಕಾರಿ ಘಟನೆಯೊಂದರಲ್ಲಿ 12 ವರ್ಷದ ಬಾಲಕನೊಬ್ಬ ಭಗತ್​ ಸಿಂಗ್​ ಗಲ್ಲಿಗೇರಿಸುವ ಕಾಲ್ಪನಿಕ ವಿಡಿಯೋವನ್ನು ಮೊಬೈಲ್​ನಲ್ಲಿ ವೀಕ್ಷಣೆ ಮಾಡುತ್ತಾ ಅದನ್ನು ಅನುಸರಿಸಲು ಹೋಗಿ ನೇಣಿಗೆ ಶರಣಾಗಿ ಮೃತಪಟ್ಟಿದ್ದಾನೆ.

    ಮೃತ ಬಾಲಕನನ್ನು ಮಧ್ಯಪ್ರದೇಶದ ಮಂದ್ಸೂರ್​ ಜಿಲ್ಲೆಯ ಭೋಲಿಯಾ ಗ್ರಾಮದ ಶ್ರೇಯಾಂಶ್​ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೂ ಮುನ್ನ, ಭಗತ್​ ಸಿಂಗ್​ ಅವರ ಜೀವನಾಧಾರಿತ ಚಿತ್ರವನ್ನು ಶ್ರೇಯಾಂಶ್​ ಮೊಬೈಲ್​ನಲ್ಲಿ ವೀಕ್ಷಣೆ ಮಾಡುತ್ತಿದ್ದ. ಗಲ್ಲಿಗೇರಿಸುವ ದೃಶ್ಯವನ್ನು ಅನುಸರಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಮಂದ್ಸೂರ್​ನ ಅಫ್ಜಲ್​​ಪುರ ಠಾಣಾ ಪೊಲೀಸರು ತಿಳಿಸಿದ್ದಾರೆ.

    ಶ್ರೇಯಾಂಶ್​ ಶಾಲೆಗಳಲ್ಲೂ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿದ್ದ. ಭಗತ್​ ಸಿಂಗ್​ ಜೀವನದಿಂದ ಪ್ರಭಾವಿತನಾಗಿ ಗಲ್ಲು ಶಿಕ್ಷೆಯ ದೃಶ್ಯವನ್ನು ಅನುಸರಿಸಲು ಹೋಗಿ ನೇಣು ಹಾಕಿಕೊಂಡಿದ್ದಾನೆ. ಬಳಿಕ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗದೇ ಸಾವಿಗೀಡಾಗಿದ್ದಾನೆ ಎಂದು ಮಂದ್ಸೂರ್​ ಎಸ್​ಪಿ ಹಿತೇಶ್​ ಚೌಧರಿ ಹೇಳಿದ್ದಾರೆ.

    ಉಸಿರಾಟದ ತೊಂದರೆಯಿಂದಲೇ ಸಾವಿಗೀಡಾಗಿರುವುದಾಗಿ ಮಂದ್ಸೂರ್​ ಜಿಲ್ಲಾಸ್ಪತ್ರೆಯಲ್ಲಿ ನಡೆದ ಶವಪರೀಕ್ಷೆಯ ವರದಿ ಕೂಡ ಧೃಡಪಡಿಸಿದೆ.

    ಈ ಘಟನೆಯಿಂದ ಎಚ್ಚೆತ್ತಿರುವ ಪೊಲೀಸರು ಮಕ್ಕಳ ಬಗ್ಗೆ ಜಾಗರೂಕತೆ ವಹಿಸುವಂತೆ ಪಾಲಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್​ ಗೀಳಿಗೆ ಬಿದ್ದು, ಅನೇಕ ಮಕ್ಕಳು ಕೆಲವೊಂದನ್ನು ಅನುಸರಿಸಲು ಯತ್ನಿಸುತ್ತಿದ್ದಾರೆ. ಇದೇ ರೀತಿಯ ಅನೇಕ ಘಟನೆಗಳು ನಡೆದಿವೆ. ಹೀಗಾಗಿ ಮಕ್ಕಳು ಮೊಬೈಲ್​ ಉಪಯೋಗಿಸುವಾಗ ಅವರ ಮೇಲೆ ಹೆಚ್ಚಿನ ಗಮನ ವಹಿಸಿ ಎಂದು ಪೊಲೀಸರು ತಿಳಿ ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts