More

    ಬ್ರಿಮ್ಸ್​ ಆಸ್ಪತ್ರೆಯಲ್ಲಿ ಮಹಾ ಎಡವಟ್ಟು…ಎರಡು ದಿನಗಳ ಕಂದಮ್ಮನಿಗೆ ಇಲಿ ಕಡಿತ, ವೈದ್ಯರ ನಿರ್ಲಕ್ಷ್ಯ

    ಬೀದರ್​: ಒಂದಲ್ಲ ಒಂದು ಎಡವಟ್ಟುಗಳಿಂದ ಸುದ್ದಿಯಾಗುವ ಇಲ್ಲಿನ ಬ್ರಿಮ್ಸ್​ ಆಸ್ಪತ್ರೆಯಲ್ಲಿ ಈಗ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಇದಕ್ಕೆ ಅಲ್ಲಿನ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಎರಡು ದಿನಗಳ ಹಸುಗೂಸಿಗೆ ಇಲಿ ಕಡಿದಿದೆ. ಮಗುವಿನ ಕೈ, ಕಾಲುಗಳಿಗೆಲ್ಲ ಇಲಿ ಕಚ್ಚಿದ್ದು, ಅದರ ಪುಟ್ಟ ದೇಹವೆಲ್ಲ ನೀಲಿಗಟ್ಟಿದೆ. ಮಗುವಿನ ಸ್ಥಿತಿ ನೋಡಿ ಪಾಲಕರು ಕಣ್ಣೀರು ಹಾಕುತ್ತಿದ್ದಾರೆ. ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ 700 ಹಾಸಿಗೆಯ ಹೊಸ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ಇಲಿ ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲವಾ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಭಾಲ್ಕಿ ತಾಲೂಕಿನ ಡೊಂಗುರ್ಗಿ ಗ್ರಾಮದ ರೂಪಾವತಿ ಎಂಬುವರು ಹೆರಿಗೆಗಾಗಿ ಬ್ರಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದರು. ರೂಪವತಿಯ ಹೆರಿಗೆ ಸಂದರ್ಭದಲ್ಲೂ ಕೂಡ ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದರು. ಹಾಗಾಗಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು ಒಂದು ಮಗು ಸತ್ತು, ಇನ್ನೊಂದು ಮಾತ್ರವೇ ಉಳಿದುಕೊಂಡಿದೆ ಎಂದು ಕೂಡ ಆರೋಪಿಸಲಾಗಿದೆ. ನಂತರ ರೂಪಾವತಿಯನ್ನು ವಾರ್ಡ್​ಗೆ ಶಿಫ್ಟ್​ ಮಾಡಲಾಗಿತ್ತು. ಇದನ್ನೂ ಓದಿ: ಶ್ರೀರಾಮನೇ ಇಲ್ಲ ಅಂದೋರು ಪೂಜೆಗೆ ಕರೆದಿಲ್ಲ ಅನ್ನೋದು ಸರಿನಾ?- ಬಿಜೆಪಿ ಟಾಂಗ್‌

    ಆದರೆ ರೂಪಾವತಿ ಇದ್ದ ವಾರ್ಡ್​ನ ಶೌಚಗೃಹವನ್ನು ಆಸ್ಪತ್ರೆ ಸಿಬ್ಬಂದಿ ತೆರೆಯಲಿಲ್ಲ. ಎಷ್ಟೇ ಬೇಡಿಕೊಂಡರೂ ಅವರು ಶೌಚಗೃಹ ತೆರೆಯದಿದ್ದಾರೆ. ಬೇರೆ ವಾರ್ಡ್​ನ ಶೌಚಗೃಹಕ್ಕೆ ರೂಪವತಿಯನ್ನು ಕರೆದುಕೊಂಡು, ಅವರೊಂದಿಗೆ ಇದ್ದವರು ಹೋಗಿದ್ದರು. ಅವರು ವಾಪಸ್​ ಬರುವಷ್ಟರಲ್ಲಿ ಪುಟ್ಟ ಮಗುವಿನ ಮುಖ, ಕೈ, ಕಾಲು, ಬೆಟ್ಟುಗಳಿಗೆಲ್ಲ ಇಲಿ ಕಡಿದಿತ್ತು. ಮಗು ರಕ್ತದ ಮಡುವಿನಲ್ಲಿ ಒದ್ದಾಡುತ್ತ, ಅಳುತ್ತಿತ್ತು. ರೂಪಾ ಮತ್ತವರ ಕುಟುಂಬದವರು ಕೂಡಲೇ ವೈದ್ಯರಿಗೆ ತಿಳಿಸಿದರೂ ಅವರು ಬಂದು ನೋಡಲಿಲ್ಲ. ಇದೀಗ ಮಗುವಿನ ಜೀವವೇ ಅಪಾಯದಲ್ಲಿದೆ. ನನಗೆ ನ್ಯಾಯ ಬೇಕು ಎಂದು ರೂಪ ಅಳುತ್ತಿದ್ದಾರೆ.

    ಅಷ್ಟೇ ಅಲ್ಲ, ಆಸ್ಪತ್ರೆಯಲ್ಲಿ ಎಲ್ಲರೂ ಲಂಚ ಕೇಳುತ್ತಿದ್ದಾರೆ. ಹಣ ಕೊಡದಿದ್ದರೆ ಏನೂ ಕೆಲಸ ಮಾಡುವುದಿಲ್ಲ ಎಂದು ಆರೋಪಿಸಿದ್ದಾರೆ.
    ಈ ಬಗ್ಗೆ ದಿಗ್ವಿಜಯ ನ್ಯೂಸ್ ಸುದ್ದಿ ಮಾಡಿದೆ. ವರದಿಯಿಂದ ಎಚ್ಚೆತ್ತ ಜಿಲ್ಲಾಧಿಕಾರಿ ಕೆ.ರಾಮಚಂದ್ರನ್​ ಅವರು ಆಸ್ಪತ್ರೆಗೆ ಭೇಟಿ ನೀಡಿದ ಮಗುವಿನ ಆರೋಗ್ಯ ವಿಚಾರಿಸಿದ್ದಾರೆ. ಪಾಲಕರನ್ನೂ ಸಮಾಧಾನಪಡಿಸಿದ್ದಾರೆ. ಹಾಗೇ, ಜಿಪಂ ಸಿಇಒ, ಬ್ರಿಮ್ಸ್ ಆಸ್ಪತ್ರೆ ನಿರ್ದೇಶಕ ಡಾ. ಶಿವಕುಮಾರ್​ ಅವರೂ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

    ಪ್ರೇಯಸಿ ಮೇಲಿನ ದ್ವೇಷ: ಅಶ್ಲೀಲ ವೆಬ್​ಸೈಟ್​ಗೆ ಪ್ರಾಂಶುಪಾಲರು, ಪ್ರಾಧ್ಯಾಪಕರು, ಹಳೇ ವಿದ್ಯಾರ್ಥಿಗಳ ಫೋಟೋ ಅಪ್ಲೋಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts