More

    ಅರ್ಥಪೂರ್ಣ ಆಚರಣೆ ಬದುಕಿಗೆ ಪ್ರೇರಣೆ

    ಸೊರಬ: ಬುದ್ಧಿಮಾಂಧ್ಯ ಮಕ್ಕಳು ದೈಹಿಕವಾಗಿ ಸದೃಢವಾಗಿದ್ದು ಮಾನಸಿಕವಾಗಿ ಅವರು ಇತರರಂತೆ ಬದುಕಲು ಪ್ರೇರಣೆ ನೀಡಬೇಕಿದೆ ಎಂದು ಹಿರಿಯ ವಕೀಲ ವೈ.ಜಿ.ಪುಟ್ಟಸ್ವಾಮಿ ಹೇಳಿದರು.

    ಸೋಮವಾರ ಪಟ್ಟಣದ ಹೊಸಪೇಟೆ ಬಡವಣೆಯ ನವ ಚೇತನ ಬುದ್ಧಿಮಾಂಧ್ಯ ಮಕ್ಕಳ ವಸತಿ ಶಾಲೆಯಲ್ಲಿ ಸೊರಬ ವಕೀಲ ಮಿತ್ರರಿಂದ ಕೇಕ್ ಕತ್ತರಿಸುವ ಮೂಲಕ ಹೊಸವರ್ಷಾಚಾರಣೆ ಹಾಗೂ ಮಕ್ಕಳಿಗೆ ಉಚಿತ ಸಮವಸ್ತç ವಿತರಿಸಿ ಮಾತನಾಡಿದರು.
    ಬುದ್ಧಿಮಾಂಧ್ಯ ಮಕ್ಕಳ ಬದುಕನ್ನು ಕತ್ತಲೆಯಿಂದ ಬೆಳಕಿನ ಕಡೆ ತರುವಲ್ಲಿ ಶಿಕ್ಷಕರು ಪಡುವ ಶ್ರಮ ಬೆಲೆ ಕಟ್ಟಲು ಸಾಧ್ಯವಿಲ್ಲ. ಇಂತಹ ಮಕ್ಕಳ ಸೇವೆಗೆ ನಮ್ಮ ದುಡಿಮೆಯ ಅಲ್ಪ ಆದಾತವನ್ನು ನೀಡಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಕಲ ವಕೀಲ ಮಿತ್ರರು ಒಟ್ಟಾಗಿ ಸೇರಿ ಮಕ್ಕಳಿಗೆ ಸಮವಸ್ತç ನೀಡಲು ನಿರ್ಧರಿಸಲಾಯಿತು. ವರ್ಷಗಳು ಉರುಳುತ್ತವೆ. ಆದರೆ ಸಮಾಜಕ್ಕೆ ಎಷ್ಟು ಹಿತವಾದ ಕೆಲಸ ಮಾಡಿದ್ದೇವೆ ಎಂಬುದು ಮುಖ್ಯ ಎಂದರು.
    ವಸತಿ ಶಾಲೆಯ ಕಾರ್ಯದರ್ಶಿ ರಾಮಪ್ಪ ಚೌಡಿಕೊಪ್ಪ, ವೇಣುಗೋಪಾಲ್, ವಕೀಲರಾದ ದಿನಕರ ಭಾವೆ, ಸೈಯದ್ ಅಹ್ಮದ್, ಸುರೇಶ್, ಗುರುಸ್ವಾಮಿ, ಮುಖ್ಯ ಶಿಕ್ಷಕ ರವಿಂದ್ರ, ರಾಜ್ಯ ಪ್ರಶಸ್ತಿ ಶಿಕ್ಷಕ ಕೆ.ಬಿ.ಪುಟ್ಟರಾಜ್, ಅಜೀಜ್ ಸಾಬ್, ರಾಮಪ್ಪ, ಪವಿತ್ರಾ, ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts