More

    ಅಮ್ಮ ಇರಲಿಲ್ಲ, ಅದಕ್ಕೆ ಅಪ್ಪ ಟ್ಯಾಬ್ಲೆಟ್​ ತಗೊಂಡು ಮಗುವಿಗೆ ಹಾಲು ಕುಡಿಸಿದ!

    ಬೆಂಗಳೂರು: ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅಮ್ಮ ಅದು ಹೇಗೋ ನಿಭಾಯಿಸಿ ಬಿಡುತ್ತಾಳೆ. ಆದರೆ ಕೆಲವೊಮ್ಮೆ ಅನಿವಾರ್ಯವಾಗಿ ಅಪ್ಪ ಅದೇ ಕೆಲಸ ಮಾಡಬೇಕಾಗಿ ಬಂದಾಗ ಮಕ್ಕಳು ಮಾತು ಕೇಳುವುದೇ ಅಪರೂಪ. ಅಂಥ ಸಂದರ್ಭದಲ್ಲಿ ಮಕ್ಕಳನ್ನು ನಿಭಾಯಿಸಬೇಕೆಂದರೆ ಅಪ್ಪ ಏನೇನೋ ಸರ್ಕಸ್​ ಮಾಡಬೇಕಾಗಿ ಬರುತ್ತದೆ. ಅಂಥದ್ದೇ ಒಂದು ಪರಿಸ್ಥಿತಿಯನ್ನು ಈ ಅಪ್ಪ ಎದುರಿಸಿದ್ದು, ಇತರ ಅಪ್ಪಂದಿರಿಗೂ ಉಪಯುಕ್ತ ಎಂಬಂಥ ಐಡಿಯಾ ಕೊಟ್ಟಿದ್ದಾನೆ.

    ಸಂಕಷ್ಟದ ಸಮಯದಲ್ಲಿ ಆ ಕ್ಷಣಕ್ಕೆ ಪಾರಾಗಬೇಕೆಂದರೆ ಏನಾದರೂ ತಂತ್ರ ಮಾಡಲೇಬೇಕು. ಅಂಥದ್ದೊಂದು ತಂತ್ರಕ್ಕೆ ಈ ಅಪ್ಪ ತಂತ್ರಜ್ಞಾನವನ್ನೇ ಯಶಸ್ವಿಯಾಗಿ ಬಳಸಿಕೊಂಡಿದ್ದೇನೆ. ಆ ಮೂಲಕ ಹೆಂಡತಿಯ ಅನುಪಸ್ಥಿತಿಯಲ್ಲಿ ಮಗುವಿಗೆ ಹಾಲು ಕುಡಿಸುವ ಮೂಲಕ ಹೆಂಡತಿಯೂ ಭೇಷ್​ ಎಂದು ಹೇಳುವಂಥ ಕೆಲಸ ಮಾಡಿದ್ದಾನೆ.

    ಇದನ್ನೂ ಓದಿ: 7 ವರ್ಷದ ಮಗನಿಗೆ ನಿದ್ರೆ ಮಾತ್ರೆ ತಿನ್ನಿಸಿ ಸಾಯಿಸಿದ್ಲು; ಗಂಡ-ಅಪ್ಪ-ಅವಳೂ ಡಾಕ್ಟರ್; ಆದ್ರೂ ಮಾಡಿದ್ದು ಜೀವ ತೆಗೆಯೋ ಕೆಲಸ!

    ಅಷ್ಟಕ್ಕೂ ಆತ ಇದಕ್ಕೆ ಬಳಸಿದ್ದು ಒಂದು ಟ್ಯಾಬ್ಲೆಟ್​. ಅದ್ಯಾವುದದು ಅಂಥ ಮಾತ್ರೆ ಎಂದು ಅಚ್ಚರಿಯಾಗಬೇಡಿ. ಇದು ಆ ಟ್ಯಾಬ್ಲೆಟ್​ ಅಲ್ಲ, ಬದಲಿಗೆ ಗ್ಯಾಜೆಟ್. ಅಳುತ್ತಿದ್ದ ಮಗುವನ್ನು ಸುಮ್ಮನಿರಿಸಲು, ಅದಕ್ಕೆ ಹಾಲು ಕುಡಿಸಲು ಈತ ಮಾಡಿರುವ ಐಡಿಯಾ ಇತರ ಅಪ್ಪಂದಿರಿಗೂ ಸಹಾಯಕ್ಕೆ ಬರಬಹುದು. ಆತ ಮಾಡಿದ್ದಿಷ್ಟೇ.. ಮನೆಯಲ್ಲಿರುವ ಟ್ಯಾಬ್​ನಲ್ಲಿ ತನ್ನ ಹೆಂಡತಿಯ ಚಿತ್ರ ಓಪನ್ ಮಾಡಿ, ಆ ಟ್ಯಾಬ್​ಅನ್ನು ಮುಖಕ್ಕೆ ಅಡ್ಡಲಾಗಿ ಟೇಪ್​ ಮಾಡಿ ಇಟ್ಟುಕೊಂಡಿದ್ದಾನೆ. ಬಳಿಕ ಫೀಡಿಂಗ್ ಬಾಟಲ್​ನಲ್ಲಿದ್ದ ಹಾಲನ್ನು ಮಗುವಿನ ಬಾಯಿಗೆ ಇಟ್ಟಿದ್ದಾನೆ. ಈ ಐಡಿಯಾ ವರ್ಕೌಟ್​ ಆಗಿದ್ದು, ಮಗು ಅಮ್ಮನ ಚಿತ್ರ ನೋಡುತ್ತ ಸುಮ್ಮನೆ ಹಾಲು ಕುಡಿದಿದೆ. ವುಹಾನ್​ನ ಜಿಯಾಂಗ್​ಕ್ಸಿ ಪ್ರಾವಿನ್ಸ್​ನಲ್ಲಿರುವ ತಂದೆಯೊಬ್ಬ ಇಂಥ ಐಡಿಯಾ ಮಾಡಿದ್ದು, ಈಗ ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿ ಮೆಚ್ಚುಗೆಗೂ ಪಾತ್ರವಾಗಿದೆ. (ಏಜೆನ್ಸೀಸ್)

    ಅಮ್ಮ ಇರಲಿಲ್ಲ, ಅದಕ್ಕೆ ಅಪ್ಪ ಟ್ಯಾಬ್ಲೆಟ್​ ತಗೊಂಡು ಮಗುವಿಗೆ ಹಾಲು ಕುಡಿಸಿದ!
    ಅಪ್ಪ ಮುಖಕ್ಕೆ ಅಡ್ಡಲಾಗಿ ಟ್ಯಾಬ್ಲೆಟ್ ಟೇಪ್ ಮಾಡಿಟ್ಟುಕೊಂಡು ಹಾಲು ಕುಡಿಸಿದ್ದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts