More

    ಮಾತೃ ಭಾಷೆಯನ್ನು ಉಳಿಸಿ ಬೆಳೆಸಬೇಕಿದೆ

    ಬೇಲೂರು: ಧಾರ್ಮಿಕ, ಸಾಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಶ್ರೀ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ವಿನುತಾ ಧನಂಜಯ್ ಹೇಳಿದರು.

    ತಾಲೂಕಿನ ಅರೇಹಳ್ಳಿಯ ಸಂತೋಷ ನಗರದ ಅಂಗನವಾಡಿ ಕೇಂದ್ರದಲ್ಲಿ ಶ್ರೀ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಮಹಿಳಾ ಸ್ವ ಸಹಾಯ ಸಂಘದಿಂದ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಡು ನುಡಿಗೆ ಸಂಬಂಧಿಸಿದಂತೆ ರಾಜ್ಯೋತ್ಸವದಲ್ಲಿ ಪ್ರತಿಯೊಬ್ಬರೂ ಹೆಚ್ಚು ಭಾಗವಹಿಸಿ ನಮ್ಮ ಮಾತೃ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.
    ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸ್ವ ಸಹಾಯ ಸಂಘಗಳು ಸ್ಥಾಪಿತಗೊಂಡಿವೆ. ವಿದ್ಯಾರ್ಥಿ ಸಂಘ, ಪುರುಷರ ಸ್ವ ಸಹಾಯ ಸಂಘಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.
    ಅರೇಹಳ್ಳಿ ಶ್ರೀ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಮಹಿಳಾ ಸಂಘದ ಸದಸ್ಯೆ ಗೀತಾ ಶಿವರಾಜ್ ಮಾತನಾಡಿ, ಮನೆಯೊಳಗಿದ್ದ ನಮಗೆ ಹೆಚ್ಚಿನ ಜ್ಞಾನ ಮತ್ತು ಅರಿವನ್ನು ನೀಡಿ ಎಲ್ಲರ ಸಮ್ಮುಖದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲು ಶಕ್ತಿ ನೀಡಿರುವುದೇ ಪುಷ್ಪಗಿರಿ ಮಹಿಳಾ ಸ್ವ ಸಹಾಯ ಸಂಘ ಎಂದರು.
    ಸ್ವ ಸಹಾಯ ಸಂಘದಿಂದ ಅಂಗನವಾಡಿ ಕೇಂದ್ರಕ್ಕೆ ಭುವನೇಶ್ವರಿ ಭಾವಚಿತ್ರ ಕೊಡುಗೆ ನೀಡಲಾಯಿತು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಎಸ್.ರಂಜಿತ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಕುಸುಮಾ, ರೋಹಿಣಿ, ರತ್ನಾ, ಮಂಜುಳಾ, ಸವಿತಾ, ಶೈಲಾ, ಲೀಲಾ, ಪಾರ್ವತಿ, ಶೋಭಾ, ರುದ್ರಾಣಿ, ವೀಣಾ, ಜ್ಯೋತಿ, ಸೀತಾ, ಲಕ್ಷ್ಮೀ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts