More

    10 ವರ್ಷದ ಮಗನ ಆತ್ಮಹತ್ಯೆಯಿಂದ ಶಾಕ್​ಗೆ ಒಳಗಾದ ತಾಯಿಯೂ ಸೂಸೈಡ್​ ಮಾಡಿಕೊಂಡರು…

    ರಾಂಚಿ: ತನ್ನ 10 ವರ್ಷದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದರ ಶಾಕ್​ನಿಂದ ಹೊರಬರಲಾದ ತಾಯಿಯೂ ಅದೇ ದಾರಿ ಹಿಡಿದ ದುರ್ಘಟನೆ ಜಾರ್ಖಂಡದ ನಾಮ್​ಕೊಮ್​ನಲ್ಲಿ ನಡೆದಿದೆ. ರೇಖಾ ದಾದೇಲ್​ (40) ಅವರು ಸೀಲಿಂಗ್​ ಫ್ಯಾನ್​ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಶನಿವಾರ ರೇಖಾ ಮತ್ತು ಅವರ ಪತಿ ಒಡಿಶಾದ ರೌರ್​ಕೇಲಾಕ್ಕೆ ತೆರಳಿದ್ದರು. ಮನೆಯಲ್ಲಿ ಆಕೆಯ ಪುತ್ರ ಬಾಬಿ, 13 ವರ್ಷದ ಪುತ್ರಿ ಜಿಯಾ ಹಾಗೂ ಮತ್ತೋರ್ವ ಪುತ್ರ ಸನ್ನಿ ಇದ್ದರು.

    ಭಾನುವಾರ ಮುಂಜಾನೆ 10 ವರ್ಷದ ಬಾಬಿಗೆ ಅದೇನಾಯಿತೋ ಗೊತ್ತಿಲ್ಲ, ಟಿಕ್​ಟಾಕ್​ ವಿಡಿಯೋ ನೋಡುತ್ತಿದ್ದವನು ಒಮ್ಮೆಲೆ ಕುರ್ಚಿ ಮತ್ತು ತನ್ನ ತಾಯಿಯ ದುಪ್ಪಟ್ಟಾ ತೆಗೆದುಕೊಂಡು ಸ್ನಾನಗೃಹಕ್ಕೆ ಹೋಗಿದ್ದ. ಪುತ್ರಿ ಜಿಯಾಗೆ ಅನುಮಾನ ಬಂದು, ಯಾಕೆ ಕುರ್ಚಿ ಅಲ್ಲಿಗೆ ತೆಗೆದುಕೊಂಡು ಹೋಗಿದ್ದೀಯಾ ಎಂದು ಕೇಳಿದ್ದಕ್ಕೆ, ಏನೋ ಸಬೂಬು ಹೇಳಿದ್ದ. ಇದನ್ನೂ ಓದಿ: ಇಂದೂ ರಾಜ್ಯಕ್ಕೆ ಶಾಕ್​ ಕೊಟ್ಟ ಕೊವಿಡ್​-19; 14 ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ

    ಪೊಲೀಸರು ಬಾಬಿಯ ಸೋದರ ಸನ್ನಿ ಹಾಗೂ ಸೋದರಿ ಜಿಯಾಳನ್ನು ಪ್ರಶ್ನೆ ಮಾಡಿದ್ದರು. ಅದ್ಯಾವುದೋ ವಿಡಿಯೋ ಗೇಮ್​ ಪ್ರಭಾವಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.

    ಆದರೆ ಮನೆಗೆ ಮರಳಿ ಬಂದಾಗ ಶವವಾಗಿದ್ದ ಪುತ್ರನನ್ನು ನೋಡಿ ತಾಯಿ ತೀವ್ರ ಶಾಕ್​ಗೆ ಒಳಗಾಗಿದ್ದರು. ಮರುದಿನವೇ ಅವರೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ‘ಕೊವಿಡ್​-19 ಸೋಂಕನ್ನು ಜಗತ್ತಿಗೆ ಕಳಿಸಿದ್ದು ಭಗವಾನ್​ ಶ್ರೀಕೃಷ್ಣ…’: ಕಾಂಗ್ರೆಸ್​ ಮುಖಂಡನ ವಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts