More

    ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆ ಸಂಭ್ರಮ

    ಶೃಂಗೇರಿ: ಮಲೆನಾಡಿನಲ್ಲಿ ಶನಿವಾರ ರೈತರು ಭೂಮಿ ಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ನಸುಕಿನಲ್ಲೇ ಭೂ ತಾಯಿಗೆ ಪೂಜೆ ಸಲ್ಲಿಸಿ ಧನ್ಯತಾ ಭಾವ ಮೆರೆದರು.

    ಶುಕ್ರವಾರವೇ ಜಮೀನಿನಲ್ಲಿ ಎರಡು ಬಾಳೆ ಕಂಬಗಳನ್ನು ನೆಟ್ಟು, ಕಬ್ಬು ಹಾಗೂ ಮಾವಿನ ತೋರಣವನ್ನು ಕಟ್ಟಿ ಪೂಜೆಗೆ ತಯಾರಿ ಮಾಡಿಕೊಂಡಿದ್ದರು. ಶನಿವಾರ ಬೆಳಗ್ಗೆ ಪೂಜಾ ಸಾಮಗ್ರಿಗಳು ಹಾಗೂ ಬಣ್ಣಬಣ್ಣದ ಹೂಗಳಿಂದ ಭೂತಾಯಿಯನ್ನು ಶೃಂಗರಿಸಿದರು. ನಂತರ ಮನೆಯಲ್ಲಿ ತಯಾರಿಸಿದ ಹಲವು ಜಾತಿಯ ಮರಗಿಡಗಳ ಬೆರಕೆ ಸೊಪ್ಪಿನ ಪಲ್ಯ, ಬಣ್ಣದ ಸೌತೆಕಾಯಿ ಪಲ್ಯ, ಪಾಯಸ, ಚೀನಿಕಾಯಿ ಕಡಬು, ಸೋರೆಕಾಯಿ ಹಾಗೂ ಹೀರೆಕಾಯಿ ಕಡಬು, ಪಾಯಸ, ಅಚ್ಚಂಬಲಿ ಮುಂತಾದ ಅಡುಗೆಗಳನ್ನು ಬಾಳೆ ಎಲೆಯಲ್ಲಿ ಇರಿಸಿ ಭೂಮಿಗೆ ಎಡೆ ಇಟ್ಟು ಪೂಜೆ ಸಲ್ಲಿಸಲಾಯಿತು.

    ಹಕ್ಕಿಗಳು ಕೂಗುವ ಮುನ್ನ ಭೂತಾಯಿಯನ್ನು ಪೂಜಿಸಲಾಗುತ್ತದೆ. ಭಾನುವಾರ ಭೂಮಿಯಲ್ಲಿ ಯಾವುದೇ ಕೆಲಸ ಮಾಡುವುದಿಲ್ಲ. ಇದರಿಂದ ಭೂಮಿ ಒಲಿಯುತ್ತಾಳೆ ಎಂಬುದು ನಂಬಿಕೆ ಎಂದು ನೆಮ್ಮಾರ್ ಕೃಷಿಕ ಗಣೇಶ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts