More

    VIDEO| ಮೊದಲ ಮಾತು, ಮೊದಲ ಹೆಜ್ಜೆ ಕಲಿಸುವ ಅಮ್ಮನ ಪ್ರೀತಿಯೇ ಅಂತಹದ್ದು; ಈ ವಿಡಿಯೋ ನೋಡಿದರೆ ಹಾಗನ್ನಿಸಲ್ಲವೇ..?

    ನವದೆಹಲಿ: ಅಮ್ಮನ ಪ್ರೀತಿ ಎಂದರೆ ಹಾಗೆ ಅದು. ವರ್ಣಿಸಲು ಸಾಧ್ಯವಿಲ್ಲದ್ದು. ಅಮ್ಮನ ಪ್ರೀತಿ ಎಲ್ಲ ಪ್ರಾಣಿಗಳಲ್ಲೂ ಕಾಣಲು ಸಾಧ್ಯ. ಇಂತಹ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಈ ವಿಡಿಯೋ ನಿಮಗೂ ಸಂತಸ ತರುವುದು ಗ್ಯಾರಂಟಿ. ಇದನ್ನು ಐಎಫ್​ಎಸ್​ ಅಧಿಕಾರಿ ಪರ್ವೀನ್​ ಕಸ್ವಾನ್​ ಅವರು ಹಂಚಿಕೊಂಡಿದ್ದಾರೆ. ಅದರಲ್ಲಿ ಪುಟಾಣಿ ಆನೆ ಎದ್ದು ನಿಲ್ಲಲು ಪ್ರಯತ್ನಿಸುತ್ತಿದೆ. ಅದಕ್ಕೆ ಅಮ್ಮ ಆನೆ ಸಹಾಯ ಮಾಡುತ್ತಿದೆ. ಕಾಲಿನಲ್ಲಿ ತಳ್ಳಿ ಎದ್ದು ನಿಲ್ಲಲು ಪ್ರಯತ್ನಿಸುತ್ತಿರುವ ಮರಿಗೆ ಸೊಂಡಿಲಿನಿಂದ ಎತ್ತಿ ಹಿಡಿದು ನಿಲ್ಲಿಸುತ್ತದೆ.

    ಮನಮೋಹಕವಾದ ಈ ವಿಡಿಯೋವನ್ನು ಹಂಚಿಕೊಂಡಿರುವ ಅರಣ್ಯಾಧಿಕಾರಿ ಕಸ್ವಾನ್​, ಆ ಪುಟಾಣಿ ಆನೆ ತನ್ನ ಸಣ್ಣ ಕಾಲುಗಳ ಮೇಲೆ ನಿಲ್ಲಲು ತಾಯಿ ಅವನಿಗೆ ಸಹಾಯ ಮಾಡುವ ಸುಂದರ ಕ್ಷಣವಿದು. ಆನೆ ಮರಿ ಜನನವು ಇಡೀ ಗಜರಾಜನ ಕುಟುಂಬಕ್ಕೆ ಪ್ರಮುಖ ಕಾರ್ಯವಾಗಿದೆ ಎಂದು ಬರೆದುಕೊಂಡಿದ್ದಾರೆ.

    ಈ ಚೆಂದನೆಯ ವಿಡಿಯೋಗೆ ನೆಟ್ಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ. ಅದರ ಬಗ್ಗೆ ತಮ್ಮ ಸಂತಸವನ್ನೂ ಹಂಚಿಕೊಂಡಿದ್ದಾರೆ. ಇದು ನನ್ನ ಇಡೀ ದಿನವನ್ನು ಸಂತಸದಲ್ಲಿಟ್ಟಿತು ಎಂದು ಒಬ್ಬರು ಕಮೆಂಟಿಸಿದರೆ, ಇನ್ನೊಬ್ಬರು ಸೋ ಕ್ಯೂಟ್​ ಎಂದು ಬರೆದಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನನ್ನಿಸಿತು?

    VIDEO| ಮಣ್ಣಿನಡಿಯಲ್ಲೇ ಹೊಂಚು ಹಾಕಿ ಬೇಟೆಯಾಡುವ ಆಫ್ರಿಕನ್​​ ಸ್ಪೈಡರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts