More

    ನಾಲ್ಕು ತಿಂಗಳ ಮಗ ಸತ್ತರೂ ಸಿಎಎ ವಿರೋದ್ಧದ ಹೋರಾಟ ಬಿಡದ ತಾಯಿ: ಮಕ್ಕಳ ಭವಿಷ್ಯಕ್ಕಾಗಂತೆ ಆಕೆಯ ಹೋರಾಟ

    ಶಾಹೀನ್​ಬಾಗ್​: ಸಿಎಎ ವಿರುದ್ಧದ ಹೋರಾಟಕ್ಕೆ ಕರೆದುಕೊಂಡು ಬರುತ್ತಿದ್ದ ನಾಲ್ಕು ತಿಂಗಳ ಮಗು ಸತ್ತು ಹೋಗಿದ್ದರೂ ತಾನು ಹೋರಾಟ ಮುಂದುವರೆಸುವುದಾಗಿ ಸಿಎಎ ವಿರುದ್ಧದ ಹೋರಾಟಗಾರ್ತಿ ತಿಳಿಸಿದ್ದಾಳೆ. ತನ್ನ ಮಕ್ಕಳ ಭವಿಷ್ಯಕ್ಕಾಗಿ ತಾನು ಹೋರಾಟ ಮುಂದುವರೆಸುತ್ತಿರುವುದಾಗಿ ಆಕೆ ಹೇಳಿದ್ದಾಳೆ.

    ಮೊಹಮ್ಮದ್​ ಆರಿಫ್​ ಮತ್ತು ನಜಿಯಾಗೆ ಮೂರು ಜನ ಮಕ್ಕಳು. ಆಟೋ ರಿಕ್ಷಾ ಚಾಲಕನಾಗಿರುವ ಆರಿಫ್​ ಬಿಡುವಿನ ಸಮಯದಲ್ಲಿ ಎಂಬ್ರಾಯಿಡರಿ ಕೆಲಸ ಮಾಡಿ ಹೆಂಡತಿ ಮತ್ತು ಮಕ್ಕಳನ್ನು ಸಾಕುತ್ತಿದ್ದಾನೆ. ಕೇಂದ್ರ ಸರ್ಕಾರ ಸಿಎಎ ಜಾರಿ ಮಾಡಿದಾಗಿನಿಂದ ನಜಿಯಾ ಶಾಹೀನ್​ಬಾಗ್​ನಲ್ಲಿ ಸಿಎಎ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿಕೊಂಡು ಬಂದಿದ್ದಾಳೆ. ತನ್ನ ಗಂಡ ಆಟೊ ರಿಕ್ಷಾ ಓಡಿಸಲು ಹೋಗುವುದರಿಂದಾಗಿ ಆಕೆ ತನ್ನ ಮೂರೂ ಮಕ್ಕಳನ್ನು ಹೋರಾಟಕ್ಕೆ ಕರೆದುಕೊಂಡು ಹೋಗುತ್ತಿದ್ದಳಂತೆ. ಇತ್ತೀಚೆಗೆ ನಾಲ್ಕು ತಿಂಗಳು ತುಂಬಿದ್ದ ಕೊನೆಯ ಮಗು ಮೊಹಮ್ಮದ್​ ಜಹಾನ್​ಗೆ ಹೋರಾಟದ ಸಮಯದಲ್ಲಿ ಹೊರಗಿನ ಗಾಳಿ ಮತ್ತು ಚಳಿಯಿಂದಾಗಿ ಶೀತವಾಗಿದೆ. ಜನವರಿ 30ರಂದು ರಾತ್ರಿ 1 ಗಂಟೆಗೆ ಮನೆಗೆ ಬಂದ ನಜಿಯಾ ತನ್ನ ಮೂರು ಮಕ್ಕಳನ್ನು ಮಲಗಿಸಿ ತಾನೂ ಮಲಗಿಕೊಂಡಿದ್ದಾಳೆ. ಆದರೆ ಬೆಳಗ್ಗೆ ಎದ್ದ ದಂಪತಿಗೆ ತಮ್ಮ ಮೂರನೇ ಮಗು ಜಹಾನ್​ ದೇಹ ತಣ್ಣಗಾಗಿರುವುದು ತಿಳಿದುಬಂದಿದೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಗು ಸಾವನ್ನಪ್ಪಿದೆ ಎಂದು ಆಸ್ಪತ್ರೆಯವರು ಮಗುವನ್ನು ದಾಖಲು ಮಾಡಿಕೊಳ್ಳದೆ ವಾಪಸ್​​ ಕಳಿಸಿದ್ದಾರೆ.

    ಹೋರಾಟಕ್ಕೆ ಹೋಗಿ ಅಲ್ಲಿನ ಚಳಿಯಿಂದ ತನ್ನ ಮಗು ಮರಣ ಹೊಂದಿದ್ದರೂ ನಜಿಯಾ ಹೋರಾಟದಿಂದ ಹಿಂದೆ ಸರಿದಿಲ್ಲ. ಸಿಎಎ ಮತ್ತು ಎನ್​ಆರ್​ಸಿ ದೇಶದ ಜನರನ್ನು ಧರ್ಮೀಯವಾಗಿ ನೋಡುತ್ತಿದೆ. ನಾನೀಗ ಮಾಡುತ್ತಿರುವ ಹೋರಾಟ ನನ್ನೆರೆಡು ಮಕ್ಕಳಿಗಾಗಿ. ನಮ್ಮ ಬಳಿ ದಾಖಲೆಗಳಿಲ್ಲ, ನಾವೇನು ಮಾಡಬೇಕು? ಮೋದಿ ಜೀ ಮತ್ತು ಅಮಿತ್​ ಷಾ ಜೀ ತಮ್ಮ ನಿರ್ಧಾರವನ್ನು ಕೈ ಬಿಡಬೇಕು ಎಂದು ನಜಿಯಾ ಹೇಳಿದ್ದಾರೆ.

    ಒಂದು ವೇಳೆ ಸರ್ಕಾರ ಸಿಎಎ ಮತ್ತು ಎನ್​ಆರ್​ಸಿ ಜಾರಿಗೆ ತರದೇ ಇದ್ದಿದ್ದರೆ ಹೋರಾಟವೇ ಆಗುತ್ತಿರಲಿಲ್ಲ. ಆಗ ನನ್ನ ಹೆಂಡತಿ ಮಕ್ಕಳನ್ನು ಕರೆದುಕೊಂಡು ಹೋರಾಟಗಾರರೊಂದಿಗೆ ಸೇರಿಕೊಳ್ಳುವ ಪ್ರಮೇಯವೂ ಬರುತ್ತಿರಲಿಲ್ಲ. ನನ್ನ ಮಗ ಈಗ ಜೀವಂತವಾಗಿರುತ್ತಿದ್ದ ಎಂದು ಆರಿಫ್​ ತಮ್ಮ ಅಳಲು ತೋಡಿಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts