More

    ಕಂಕುಳಲ್ಲಿ ಕೂಸು, ತಲೆ ಮೇಲೆ ಚೀಲ ಹೊತ್ತು 300 ಕಿ.ಮೀ ಸಾಗಿದ ತಾಯಿ…!

    ಕಲಬುರಗಿ: ಕಂಕುಳಲ್ಲಿ ಹತ್ತು ತಿಂಗಳ ಕೂಸು, ತಲೆ ಮೇಲೆ ಚೀಲ ಹೊತ್ತು ತಾಯಿಯೊಬ್ಬಳು ಬರೋಬ್ಬರಿ 300 ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಕ್ರಮಿಸಿರುವ ಮನಕಲಕುವ ಘಟನೆ ಬುಧವಾರ ವರದಿಯಾಗಿದೆ.

    ಇದನ್ನೂ ಓದಿ: ವಾಟ್ಸ್​ಆ್ಯಪ್​​ ಬಳಕೆದಾರರಿಗೆ ಗುಡ್​ ನ್ಯೂಸ್: ಸ್ಟೇಟಸ್​ ಅವಧಿ ಮಿತಿಯಲ್ಲಿ ಏರಿಕೆ…!​

    ಮುಂಬೈನಲ್ಲಿ ವಾಸವಿದ್ದ ಮಗುವಿನ ತಾಯಿ ಉಮಾದೇವಿ ಮತ್ತು ಏಳು ಜನ ವಲಸೆ ಕಾರ್ಮಿಕರ ತಂಡ ಲಾಕ್​ಡೌನ್​ ಹಿನ್ನೆಲೆಯಲ್ಲಿ ತೆಲಂಗಾಣದ ನಾರಾಯಣಪೇಟ್‌ಗೆ ಕಾಲ್ನಡಿಗೆಯಲ್ಲಿ ಹೊರಟಿದ್ದರು. ಮಾರ್ಗ ಮಧ್ಯೆ ಕಲಬುರಗಿಯ ಕಮಲಾಪುರ ಪಟ್ಟಣದ ಬಳಿ ಸಾರ್ವಜನಿಕರಿಂದ ಅವರಿಗೆ ಆಹಾರ-ನೀರು ವಿತರಣೆ ಮಾಡಲಾಯಿತು.

    ಈ ವೇಳೆ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ ಸ್ಥಳಕ್ಕೆ ಆಗಮಿಸಿ, ಪೊಲೀಸರ ಸಹಾಯದೊಂದಿಗೆ ಪಾಸ್ ವ್ಯವಸ್ಥೆ ಮಾಡಿ, ವಾಹನದ ಮೂಲಕ ಎಂಟು ಜನರನ್ನು ನಾರಾಯಣಪೇಟ್‌ಗೆ ತೆರಳಲು ಅವಕಾಶ ಮಾಡಿ ಮಾನವೀಯತೆ ಮೆರೆದರು.

    ಇದನ್ನೂ ಓದಿ: ಮೊಬೈಲ್​​ ಬಿಟ್ಟು ಓದಿಕೋ ಎಂದಿದ್ದಕ್ಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯಿಂದ ದುಡುಕಿನ ನಿರ್ಧಾರ

    ಕರೊನಾ ಸೃಷ್ಟಿಸಿರುವ ಬಿಕ್ಕಟ್ಟಿನಿಂದ ಇಂತಹ ಹಲವಾರು ಘಟನೆಗಳು ದೇಶಾದ್ಯಂತ ನಡೆಯುತ್ತಿದ್ದು, ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು ಎಂಬುದು ಸಾರ್ವಜನಿಕರ ಕೂಗಾಗಿದೆ. ಸುಮಾರು 300 ಕಿ.ಮೀ ದೂರವನ್ನು ಮಗು ಮತ್ತು ಚೀಲವನ್ನು ಹೊತ್ತುಕೊಂಡೇ ಸಾಗಿದ್ದ ಮಹಾತಾಯಿಯನ್ನು ಕಂಡು ಸ್ಥಳೀಯರ ಮನ ಕರಗಿತು. (ದಿಗ್ವಿಜಯ ನ್ಯೂಸ್​)

    ‘ಶೂನ್ಯದಿಂದ 4.5ಲಕ್ಷದವರೆಗೆ…’ -ಇದು ಭಾರತದ ಇಚ್ಛಾಶಕ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts