More

    ನೀರಿನ ಸಂಪ್‌ಗೆ ಬಿದ್ದು ತಾಯಿ, ಮಗು ಸಾವು

    ಬೆಂಗಳೂರು: ಯಲಹಂಕ ನ್ಯೂಟೌನ್‌ನಲ್ಲಿ ನೀರಿನ ಸಂಪ್‌ಗೆ ಬಿದ್ದು ತಾಯಿ, ಮಗು ಮೃತಪಟ್ಟಿದ್ದಾರೆ.
    ಸುಗಪ್ಪಲೇಔಟ್ ನಿವಾಸಿ ಕವಿತಾ (೩೦) ಮತ್ತು ಆಕೆಯ ಪುತ್ರ ಪವನ್(೬) ಮೃತರು.
    ಚಿಕ್ಕಬಳ್ಳಾಪುರ ಜಿಲ್ಲೆೆ ಗೌರಿಬಿದನೂರು ತಾಲೂಕಿನ ಚೆಂದನೂರಿನ ಕವಿತಾ ಪುತ್ರನೊಂದಿಗೆ ಸುಗಪ್ಪ ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಜೀವನ ನಿರ್ವಹಣೆಗೆ ಮನೆ ಸಮೀಪದ ಮನೆಯೊಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದರು. ಅವರ ಮನೆ ಪಕ್ಕದಲ್ಲೇ ಖಾಲಿ ಜಾಗ ಇದ್ದು, ೧೦ ಅಡಿ ಆಳದ ನೀರಿನ ಸಂಪ್ ಇದೆ. ಕವಿತಾ ಗುರುವಾರ ಎಂದಿನಂತೆ ಮನೆ ಕೆಲಸಕ್ಕೆೆ ಹೋಗಿದ್ದು, ಸಂಜೆ ಪುತ್ರ ಪವನ್, ಪಕ್ಕದ ಖಾಲಿ ಜಾಗದಲ್ಲಿ ಆಟವಾಡುವಾಗ ಆಯಾ ತಪ್ಪಿ ೧೦ ಅಡಿ ಆಳದ ನೀರಿನ ಸಂಪ್‌ಗೆ ಬಿದ್ದಿದ್ದಾನೆ. ಅದನ್ನು ಗಮನಿಸಿದ ಕವಿತಾ ಕೂಡಲೇ ರಕ್ಷಣೆಗೆ ಧಾವಿಸಿದ್ದು, ಆಕೆಯೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಖಾಲಿ ಜಾಗದ ಮಾಲೀಕರ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಸ್ವಾಭಾವಿಕವಾಗಿ ನಡೆದಿರುವ ಘಟನೆಯೋ? ಅಥವಾ ಆತ್ಮಹತ್ಯೆೆಯೋ ಎಂಬ ಬಗ್ಗೆೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts