More

    ಈ ವರ್ಷ ಗೂಗಲ್​ನಲ್ಲಿ ಅತಿ ಹೆಚ್ಚು ಸರ್ಚ್​ ಆದ ವಿಚಾರಗಳು ಇವೇ ನೋಡಿ..

    ನವದೆಹಲಿ: ಈಗಂತೂ ಗೂಗಲ್​ ಎಲ್ಲರ ಮೆಚ್ಚಿನ ಸ್ನೇಹಿತನಾಗಿಬಿಟ್ಟಿದೆ. ಯಾವುದರ ಬಗ್ಗೆ ಏನೇ ಸಂಶಯವಿದ್ದರೂ, ಏನೇ ಮಾಹಿತಿ ಬೇಕಿದ್ದರೂ ಮೊದಲು ಹುಡುಕೋದು ಗೂಗಲ್​ನಲ್ಲೇ. ಅದೇ ರೀತಿ ಈ ವರ್ಷದಲ್ಲಿ ಭಾರತೀಯರು ಯಾವ ಪದವನ್ನು, ಯಾವ ವಿಚಾರವನ್ನು ಹೆಚ್ಚು ಹುಡುಕಿದ್ದಾರೆ ಎಂದು ಗೂಗಲ್​ ಪಟ್ಟಿ ಮಾಡಿದೆ. ಇದೀಗ ತಾನು ಮಾಡಿರುವ ‘ಇಯರ್​ ಇನ್​ ಸರ್ಚ್​ 2020’ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಇದನ್ನೂ ಓದಿ: ಮದುವೆಗೆ ಹೊರಟಿದ್ದವಳು ಕಾಡು ಸೇರಿದಳು; 14 ದಿನ ನಿರಂತರವಾಗಿ ರೇಪ್​ ಮಾಡಿದ ಕಾಮುಕ!

    ಗೂಗಲ್​ ಪ್ರಕಾರ ಈ ವರ್ಷ ಅತಿ ಹೆಚ್ಚು ಭಾರತೀಯರು ಗೂಗಲ್​ನಲ್ಲಿ ಐಪಿಎಲ್​ ಬಗ್ಗೆ ಸರ್ಚ್​ ಮಾಡಿದ್ದಾರೆ. ನಮ್ಮ ದೇಶದಲ್ಲಿ ಸರ್ಚ್​ ಆದ ವಿಷಯದಲ್ಲಿ ಐಪಿಎಲ್​ ಮೊದಲ ಸ್ಥಾನದಲ್ಲಿದ್ದರೆ ಜಾಗತಿಕವಾಗಿ ಕರೊನಾ ವೈರಸ್​ ಮೊದಲನೇ ಸ್ಥಾನದಲ್ಲಿದೆ. ದೇಶದಲ್ಲಿ ಕರೊನಾ ವೈರಸ್​ಗೆ ಎರಡನೇ ಸ್ಥಾನ ಸಿಕ್ಕಿದೆ. ಉಳಿದಂತೆ ಅಮೆರಿಕ ಎಲೆಕ್ಷನ್​, ಪಿಎಂ ಕಿಸಾನ್​ ಯೋಜನೆಯನ್ನು ಭಾರತೀಯರು ಅತಿ ಹೆಚ್ಚು ಸರ್ಚ್​ ಮಾಡಿದ್ದಾರೆ.

    ಈ ವರ್ಷ ಭಾರತೀಯರಿಂದ ಗೂಗಲ್​ನಲ್ಲಿ ಅತಿ ಹೆಚ್ಚು ಬಾರಿ ಸರ್ಚ್​ ಆದ ವ್ಯಕ್ತಿಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಮೊದಲ ಸ್ಥಾನ ಪಡೆದಿದ್ದಾರೆ. ಉಳಿದಂತೆ ಅರ್ನಬ್​ ಗೋಸ್ವಾಮಿ, ಗಾಯಕಿ ಕನ್ನಿಕಾ ಕಪೂರ್​, ಕಂಗನಾ ರಣಾವತ್​, ಅಂಕಿತಾ ಲೋಕಂಡೆ, ಅಮಿತಾಬ್ ಬಚ್ಚನ್, ರಿಯಾ ಚಕ್ರವರ್ತಿ, ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌-ಜಾಂಗ್-ಉನ್, ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್, ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

    ಇದನ್ನೂ ಓದಿ: ‘ಹೆಂಡ್ತಿ ಹೆದರಿಸ್ತಿದಾಳೆ, ರಜೆ ಕೊಡಿ’ ವಿಚಿತ್ರವಾಗಿ ಈ ಪೇದೆಯ ಲೀವ್​ ಲೆಟರ್​

    ಹೆಚ್ಚು ಸರ್ಚ್​ ಆದ ಸಿನಿಮಾಗಳಲ್ಲಿ ಸುಶಾಂತ್​ ಸಿಂಗ್​ ಅವರ ದಿಲ್​ ಬೆಚಾರ ಸಿನಿಮಾ ಅಗ್ರ ಸ್ಥಾನ ಪಡೆದಿದೆ. ಉಳಿದಂತೆ ತಮಿಳಿನ ಸೂರರೈ ಪೊಟ್ರು, ಬಾಲಿವುಡ್​ನ ತನ್ಹಾಜಿ, ಶಕುಂತಲಾ ದೇವಿ, ಮತ್ತು ಗುಂಜನ್ ಸಕ್ಸೇನಾ ಸಿನಿಮಾಗಳು ಮೊದಲ ಐದು ಸ್ಥಾನ ಪಡೆದಿವೆ. ಈ ವರ್ಷ ವೆಬ್​ ಸಿರೀಸ್​ಗಳ ಸರ್ಚ್​ ಹೆಚ್ಚಾಗಿದ್ದು, ಇದರಲ್ಲಿ ಮೊದಲ ಸ್ಥಾನದಲ್ಲಿ ಸ್ಪ್ಯಾನಿಷ್ ಕ್ರೈಂ ಡ್ರಾಮಾ ಮನಿ ಹೀಸ್ಟ್ (ನೆಟ್‌ಫ್ಲಿಕ್ಸ್) ಕಾಣಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿ ಸ್ಕ್ಯಾಮ್​ 1992 ಮತ್ತು ಮೂರನೇ ಸ್ಥಾನದಲ್ಲಿ ಮಿರ್ಜಾಪುರ 2 ವೆಬ್​ ಸಿರೀಸ್​ಗಳು ಕಾಣಿಸಿಕೊಂಡಿವೆ. (ಏಜೆನ್ಸೀಸ್​)

    ಅತ್ತಿಗೆ ಮೈದುನನ ಲವ್ವಿ ಡವ್ವಿ! ಮೈದುನ ಮದುವೆಯಾಗ್ತಾನೆ ಅಂತ ತಿಳಿದಾಕ್ಷಣ ಅತ್ತಿಗೆ ಹೀಗಾ ಮಾಡೋದು!?

    ನಟಿ ದಿವ್ಯಾ ಸಾವಿಗೂ ಮುನ್ನ ಬರೆದಿಟ್ಟಿದ್ದ ಪತ್ರದಿಂದ ಬಯಲಾಯ್ತು ಪತಿಯ ನಿಜ ಬಣ್ಣ! ಅಪ್ತ ಸ್ನೇಹಿತೆ ಬಿಚ್ಚಿಟ್ಟ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts